ನರಕಯಾತನೆ ಪಡುತ್ತಿದ್ದ ಪುಟ್ಟ ಹಕ್ಕಿಗೆ, ಪರಾವಲಂಬಿ ಹುಳುಗಳಿಂದ ಮುಕ್ತಿ ನೀಡಿದ ವೈದ್ಯರು: ಹರಿದು ಬಂತು ಅಪಾರ ಮೆಚ್ಚುಗೆ
ನಮ್ಮ ಪ್ರಕೃತಿಯಲ್ಲಿ ಬಹಳಷ್ಟು ವೈವಿಧ್ಯಮಯ ಹಾಗೂ ವಿಸ್ಮಯವನ್ನು ಹುಟ್ಟಿಸುವಂತಹ ಜೀವಿಗಳು ಇವೆ. ಜೀವಿಗಳು ತಮ್ಮ ಜೀವನ ನಿರ್ವಹಣೆಗಾಗಿ ಪ್ರಕೃತಿಯನ್ನು ಅವಲಂಬಿಸಿದೆ. ಅದೇ ರೀತಿಯಲ್ಲಿ ಆಹಾರಕ್ಕಾಗಿ ಜೀವಿಗಳು ಒಂದು ಇನ್ನೊಂದು ಜೀವಿಯ ಮೇಲೆ ಅವಲಂಬಿತವಾಗಿರುವುದು ಕೂಡಾ ನಮ್ಮ ಪ್ರಕೃತಿಯ ನಿಯಮಗಳಲ್ಲಿ ಒಂದಾಗಿದೆ. ಇಂತಹ ಜೀವಿಗಳಲ್ಲಿ ಪರಾವಲಂಬಿ ಕೀಟಗಳು ಸಹಾ ನಮ್ಮ ಪ್ರಕೃತಿಯ ಒಂದು ಭಾಗವಾಗಿದೆ. ಪರಾವಲಂಬಿಗಳಾಗಿರುವ ಕೀಟಗಳು ಕೆಲವು ಪ್ರಾಣಿ ಪಕ್ಷಿಗಳ ದೇಹದ ಮೇಲೆ ಸೇರಿಕೊಂಡು ತಮ್ಮ ಜೀವನವನ್ನು ನಡೆಸುತ್ತದೆ. ಆ ಪ್ರಾಣಿಗಳ ರಕ್ತವೇ ಅವುಗಳ ಆಹಾರ. ಅದನ್ನು ಹೀರುತ್ತಾ ಅವುಗಳಿಗೆ ಸಹಿಸಲಾಗದಂತಹ ನೋ ವ ನ್ನು ನೀಡುತ್ತಾ, ತಮ್ಮ ಬದುಕನ್ನು ನಡೆಸುತ್ತಿರುತ್ತವೆ. ಇಂತಹ ಪರಾವಲಂಬಿ ಜೀವಿಗಳನ್ನು ತಮ್ಮ ದೇಹದಿಂದ ತೆಗೆಯಲಾರದ ಬಹಳಷ್ಟು ಪ್ರಾಣಿ-ಪಕ್ಷಿಗಳು ಆ ನೋವಿನಲ್ಲೇ ಬದುಕುತ್ತವೆ ಹಾಗೂ ಕೆಲವೊಮ್ಮೆ ಸಾಯುತ್ತವೆ.
ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ನಾಯಿ ಮತ್ತು ಬೆಕ್ಕಿನ ದೇಹದಲ್ಲಿ ಸೇರಿಕೊಂಡಂತಹ ಪರಾವಲಂಬಿ ಜೀವಿಗಳನ್ನು ಅಥವಾ ಕೀಟಗಳನ್ನು ಪಶು ವೈದ್ಯರು ಹೊರಗೆ ಎಳೆದು ಹಾಕುವ ವಿಡಿಯೋಗಳು ವೈರಲ್ ಆಗಿವೆ. ಪಶುವೈದ್ಯರು ಪಶುಗಳ ಮೂಗಿನಿಂದ, ಕಿವಿಯಿಂದ ಇಂತಹ ಪರಾವಲಂಬಿ ಕೀಟ ಅಥವಾ ಹುಳುಗಳನ್ನು ಎಳೆದು ತೆಗೆದಾಗ ಅದನ್ನು ನೋಡಿ ನಮಗೆ ಭ ಯವಾಗುತ್ತದೆ. ಕೆಲವರಿಗೆ ಇಂತಹದೊಂದು ಜೀವಿಗಳು ಪ್ರಾಣಿಗಳ ದೇಹದಲ್ಲಿ ಅಡಗಿದೆ ಎನ್ನುವ ವಿಚಾರವೇ ಅಚ್ಚರಿಯನ್ನು ಮೂಡಿಸುತ್ತದೆ. ಆದರೆ ಇಂತಹ ಪರಾವಲಂಬಿ ಜೀವಿಗಳಿಂದ ಪಶು ಪಕ್ಷಿಗಳು ನೋವನ್ನು ಅನುಭವಿಸುವುದು ವಾಸ್ತವ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇಂತಹದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಪಶುವೈದ್ಯರು ಈ ಬಾರಿ ಪುಟ್ಟ ಪಕ್ಷಿಯೊಂದರ ಮೈ ಮೇಲೆ ಸೇರಿಕೊಂಡಿದ್ದಂತಹ ಬಾಟ್ ಫ್ಲೈ ಎನ್ನುವ ಪರಾವಲಂಬಿ ಜೀವಿಯನ್ನು ಹೊರಗೆ ತೆಗೆಯುವ ದೃಶ್ಯವನ್ನು ನಾವು ನೋಡಬಹುದಾಗಿದೆ. ಒಂದು ಪುಟ್ಟ ಹಕ್ಕಿಯ ಆಮೇಲೆ ಪರಾವಲಂಬಿ ಜೀವಿ ಅಲ್ಲಲ್ಲಿ ಸೇರಿಕೊಂಡಿದ್ದು, ಆ ಪುಟ್ಟ ಹಕ್ಕಿಯು ಒಂದು ರೀತಿಯಲ್ಲಿ ನರಕಯಾತನೆಯನ್ನು ಅನುಭವಿಸಿದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಪಶುವೈದ್ಯರು ತನ್ನ ಬಳಿ ಇರುವ ಒಂದು ವಿಶೇಷವಾದ ಪರಿಕರದ ಮೂಲಕ ಹುಳುಗಳನ್ನು ಪಕ್ಷಿಯ ಕಣ್ಣಿನ ಹತ್ತಿರದಿಂದ, ಕೊಕ್ಕಿನ ಬಳಿಯಿಂದ, ತಲೆಯ ಮೇಲ್ಭಾಗದಲ್ಲಿ ಎಳೆದು ಹೊರತೆಗೆದಾಗ ನೋಡುಗರಿಗೂ ಕೂಡಾ ದಿಗ್ಬ್ರಮೆ ಉಂಟಾಗುತ್ತದೆ.
ಆ ಪುಟ್ಟ ಹಕ್ಕಿಯ ದೇಹದಲ್ಲಿ ಇಷ್ಟೊಂದು ಪರಾವಲಂಬಿ ಜೀವಿಗಳು ಇದ್ದವೆ ಎಂದು ಒಂದು ರೀತಿಯ ಆ ತಂ ಕ ಉಂಟಾಗುತ್ತದೆ. ಪಶುವೈದ್ಯರು ಮೊದಲು ಹುಳುವನ್ನು ತೆಗೆಯಲು ಹೋದಾಗ ಹಕ್ಕಿಯು ಭಯ ಪಡುವುದನ್ನು ನೋಡಬಹುದು. ಆದರೆ ಅನಂತರ ಆ ಹುಳುಗಳನ್ನು ಹೊರಗೆ ತೆಗೆಯುವಾಗ ಅದಕ್ಕೂ ಕೂಡಾ ಎಲ್ಲೋ ಒಂದು ಕಡೆ ಆರಾಮವಾದ ಅನುಭೂತಿ ಆಗುತ್ತದೆ ಎನ್ನುವುದನ್ನು ನಾವು ಗಮನಿಸಬಹುದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಅಪರೂಪದ ದೃಶ್ಯವನ್ನು ಒಳಗೊಂಡ ವಿಡಿಯೋ ಈಗಾಗಲೇ 25 ಲಕ್ಷ ಜನರಿಂದ ವೀಕ್ಷಣೆ ಮಾಡಲ್ಪಟ್ಟಿದೆ. ಅಲ್ಲದೆ 16 ಸಾವಿರ ಜನ ವಿಡಿಯೋಗೆ ಲೈಕುಗಳನ್ನು ನೀಡಿದ್ದಾರೆ. ನೂರಾರು ಜನ ಕಾಮೆಂಟ್ ಮಾಡಿದ್ದಾರೆ.
ವೀಡಿಯೊ ನೋಡಿ
ಕಾಮೆಂಟುಗಳನ್ನು ಮಾಡಿದವರಲ್ಲಿ ಒಬ್ಬರು, “ಆ ಪಕ್ಷಿಗೂ ಕೂಡಾ ಈಗ ಬಹಳ ಆರಾಮ ಎನಿಸಿದೆ, ಇಂತಹ ಸಹಾಯಕ್ಕಾಗಿ ಧನ್ಯವಾದಗಳು” ಎಂದು ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ. ಪುಟ್ಟಹಕ್ಕಿ ಮರಿಗೆ ಪರಾವಲಂಬಿ ಹುಳುಗಳಿಂದ ರಕ್ಷಣೆಯನ್ನು ನೀಡಿದ್ದಕ್ಕಾಗಿ ಬಹಳಷ್ಟು ಜನರು ವೈದ್ಯರಿಗೆ ದೇವರು ನಿಮ್ಮನ್ನು ಚೆನ್ನಾಗಿ ಇಡಲಿ ಎಂದು ಶುಭವನ್ನು ಹಾರೈಸಿದ್ದಾರೆ. “ಹುಳುಗಳನ್ನು ತೆಗೆಯುವಾಗ ಪುಟ್ಟಹಕ್ಕಿ ನಿಮ್ಮ ಮೇಲೆ ಇಟ್ಟಂತಹ ನಂಬಿಕೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ” ಎಂದು ಒಬ್ಬ ನೆಟ್ಟಿಗರು ವೈದ್ಯರ ಸೇವೆಯ ಕುರಿತಾಗಿ ಬಹಳ ಅರ್ಥವತ್ತಾದ ಮಾತನ್ನು ಹಾಡಿದ್ದಾರೆ.