ನರ್ಸ್ ಹೇಳಿದ ಪ್ರಕಾರ ರಿಷಿ ಕಪೂರ್ ಮರಣಾಸನ್ನದಲ್ಲಿದ್ದಾಗ ಮಾಡಿದ ಕೊನೆಯ ಕೆಲಸ ನೋಡಿ ಏನು ಅಂತ?
ಬಾಲಿವುಡ್ ನಲ್ಲಿ ಕಪೂರ್ ಕುಟುಂಬದ ವರ್ಚಸ್ವ ಮೊದಲಿನಿಂದಲೇ ಇದೆ. ರಾಜ್ ಕಪೂರ್ ಗಿಂತಲೂ ಮೊದಲು ಪೃಥ್ವಿರಾಜ ಕಪೂರ್ ಆಮೇಲೆ ಶಮ್ಮಿ ಕಪೂರ್, ಶಶಿ ಕಪೂರ್,ರಣಧೀರ ಕಪೂರ್, ಈಗಿನ ರಣಬೀರ್ ಕಪೂರ್ ಹೀಗೆ ದೊಡ್ಡ ಲಿಸ್ಟ್ ತಯಾರಾಗುತ್ತದೆ.
ಇವರಲ್ಲಿ ರಿಷಿ ಕಪೂರ್ ವ್ಯಕ್ತಿತ್ವದ ಬಗ್ಗೆ ಹೇಳಬೇಕಾದರೆ ಮನಸ್ಸಿಗೆ ತೋಚಿದ್ದನ್ನು ನೇರವಾಗೆ ಹೇಳಿಬಿಡುವ ಜಾಯಮಾನದವರು ಅಂತಲೇ ಅನ್ನಬಹುದು.
ಅಷ್ಟೇ ಏಕೆ ಮೊನ್ನೆ ಮೊನ್ನೆನೇ ಲಾಕ್ ಡೌನ್ ಸಮಯದಲ್ಲಿ ವೈನ್ ಶಾಪ್ ಗಳನ್ನು ಓಪನ್ ಮಾಡಿ ಅಂತ ಸರಕಾರಕ್ಕೆ ಮನವಿ ಮಾಡಿದ್ದರು. ಅಷ್ಟೇ ಏಕೆ ರಾಜಕೀಯ, ಸಿನಿಮಾ, ಕ್ರಿಕೆಟ್, ಅಥವಾ ಮತ್ತ್ಯಾವದೇ ವಿಷಯ ಇರಲಿ ಯಾವುದೇ ಮುಚ್ಚುಮರೆಯಿಲ್ಲದೆ ತನಗನಿಸಿದ್ದನ್ನು ಸ್ಪಷ್ಟವಾಗಿ ಹೇಳುವ ಸ್ಪಷ್ಠ ವ್ಯಕ್ತಿಮತ್ವ.

ಇಂಥ ಒಂದು ಸುಂದರ ವ್ಯಕ್ತಿ ತನ್ನ ಕೊನೆಯ ಕ್ಷಣಗಳಲ್ಲಿಯೂ ತನ್ನ ಸೇವೆಯನ್ನು ಮಾಡುತ್ತಿರುವ ಡಾಕ್ಟರ್ಸ್, ನರ್ಸ್ ಹೀಗೆ ಎಲ್ಲ ಮೆಡಿಕಲ್ ಸ್ಟಾಫ್ ಗೆ ಮನರಂಜನೆಯನ್ನು ನೀಡುತ್ತ ನಗುತ್ತ ಮತ್ತು ಅವರನ್ನೂ ನಗಿಸುತ್ತಲೇ ಪ್ರಾಣತ್ಯಾಗ ಮಾಡಿದ್ದಾರೆ.
2018 ರಿಂದ ಲ್ಯೂಕೆಮಿಯ (ಕ್ಯಾನ್ಸರ್)ರೋಗದಿಂದ ನರಳುತ್ತಿದ್ದು ನಿನ್ನೆ ಬುಧವಾರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲು ಮಾಡಿದಾಗ ಉಪಚಾರ ಫಲಿಸದೆ ಇಂದು ಮೃತಗೊಂಡರು.