ನಾಗಿನ್ ಡ್ಯಾನ್ಸ್ ಮಾಡುವುದು ಇಬ್ಬರು ಯುವಕರಿಗೆ ಬಿತ್ತು ತುಂಬಾ ದುಬಾರಿ! ನಾಗರಹಾವಾಗಿ ಇಬ್ಬರೂ ಮಾಡಿದ ಈ ಕೃತಿ ನೀವು ಒಮ್ಮೆ ನೋಡಲೇಬೇಕು.
ಸೋಶಿಯಲ್ ಮೀಡಿಯಾ ಅಂದರೆ ವೈರಲ್ ವಿಡಿಯೋಗಳ ದೊಡ್ಡ ವೇದಿಕೆ. ಇಲ್ಲಿ ನೇಟಿಜನ್ಸ್ ಗಳಿಗೆ ಯಾವ ವಿಡಿಯೋ ಇಷ್ಟವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಏನಾದರೂ ಒಂದು ಕಾರಣದಿಂದ ದಿನಂಪ್ರತಿ ಯಾವುದಾದರೂ ಒಂದು ವಿಡಿಯೋ ವೈರಲ್ ಆಗುತ್ತದೆ. ಕೆಲವೊಂದು ವಿಡಿಯೋಗಳು ಹುಡುಗರಿಗೆ ಆನಂದ, ಸಂತೋಷ ನೀಡಿದರೆ ಇನ್ನು ಕೆಲವು ವಿಡಿಯೋಗಳು ತಮಾಷೆಯಿಂದ ಕೂಡಿರುತ್ತದೆ. ಕೆಲವು ವಿಡಿಯೋಗಳನ್ನಂತೂ ನೋಡಿದಾಗ ನೋಡುಗರ ಕೋಪ ತಾರಕಕ್ಕೇರುತ್ತದೆ. ಕೆಲವೊಮ್ಮೆ ಇಲ್ಲಿ ವೈರಲ್ ಆಗುವ ವಿಡಿಯೋಗಳು ಜೀವನ ಜೀವಿಸುವ ನಿಜವಾದ ಪಾಠವನ್ನು ಸಹ ಹೇಳಿಕೊಡುತ್ತವೆ.
ಈಗ ಮದುವೆಯಲ್ಲಿ ಮಾಡಿದ ಇಬ್ಬರು ಮಿತ್ರರ ನಾಗಿನ್ ಡ್ಯಾನ್ಸ್ ನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಮದುವೆ ಸಮಾರಂಭಗಳಲ್ಲಿ ನಾಗರ ಹಾವಿನ ಮ್ಯೂಸಿಕ್ ಬಾರಿಸುವುದು ಮತ್ತು ಅದರ ಮೇಲೆ ಸ್ಟೆಪ್ಸ್ ಗಳನ್ನು ಹಾಕುವುದು ಸಾಮಾನ್ಯವಾಗಿದೆ. ಆದರೆ ಈ ನಾಗಿನ್ ಡ್ಯಾನ್ಸ್ ಇಬ್ಬರು ಮಿತ್ರರಲ್ಲಿ ಹೊಡೆದಾಟಕ್ಕೆ ಕಾರಣವಾಗಿದೆ ಎಂದರೆ ನೀವು ನಂಬಲಿಕ್ಕಿಲ್ಲ. ಆದರೆ ಇದು ನಿಜವಾಗಿದೆ.
ಇಬ್ಬರು ಮಿತ್ರರು ನಾಗರಹಾವಿನಂತೆ ಡ್ಯಾನ್ಸ್ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಅಷ್ಟರಲ್ಲಿ ಒಬ್ಬನು ಅಂಗೈ ಮುಖಾಂತರ ಹಾವಿನಂತೆ ಹೆಡೆ ತೆಗೆದು ಎದುರಿನ ಮಿತ್ರನಿಗೆ ಕುಟುಕಲು ಹೋಗುತ್ತಾನೆ. ಯಾಕೋ ಇದು ಎದುರಿನವರಿಗೆ ಸರಿ ಬಂದಂತೆ ಕಾಣುವದಿಲ್ಲ. ನಂತರ ಅವನು ಸಹ ಮೊದಲಿನವನ ಹಾಗೆ ಆಕ್ಟ್ ಮಾಡಲು ಹೋಗುತ್ತಾನೆ. ಇದರಿಂದ ತನ್ನದೇ ಕಾಪಿ ಮಾಡಿದ್ದಾನೆಂದು ತಿಳಿದು ಮೊದಲಿನವನಿಗೆ ಸಿಟ್ಟು ಬರುತ್ತದೆ. ಹೀಗಾಗಿ ಇಬ್ಬರು ತಾವು ಮಾಡುವ ಡ್ಯಾನ್ಸ್ ಬಿಟ್ಟು ಹೊಡೆದಾಟಕ್ಕೆ ಮುಂದಾಗುತ್ತಾರೆ. ಇದನ್ನು ನೋಡಿದ ಬ್ಯಾಂಡ್ ಬಾಜಾ ತಂಡದವರು ತಬ್ಬಿಬ್ಬಾಗಿ ಮ್ಯೂಸಿಕ್ ಬಂದ್ ಮಾಡುತ್ತಾರೆ. ಉಳಿದವರು ಈ ಜಗಳವನ್ನು ಬಿಡಿಸಲು ಮುಂದಾಗುತ್ತಾರೆ.
ವೀಡಿಯೋ ನೋಡಿ
ಈ ವೈರಲ್ ವಿಡಿಯೋ ನೋಡಿ ಅನೇಕ ನೇಟಿಜನ್ಸ್ ಗಳು ಬಿದ್ದು ಬಿದ್ದು ನಕ್ಕಿದ್ದಾರೆ. ಜೊತೆಗೆ ಕಮೆಂಟ್ ನಲ್ಲಿ ತುಂಬಾ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿ ಆನಂದಿಸಿದ್ದಾರೆ. ನೀವು ಒಮ್ಮೆ ನೋಡಿ ಈ ತಮಾಷೆಯ ವಿಡಿಯೋ…