ನಾನು ಕಂಡಕ್ಟರ್ ನಾಗಿದ್ದಾಗ…, ದಾದಾಸಾಹೇಬ್ ಫಾಲ್ಕೆ ಪುರಸ್ಕಾರ ದೊರೆತಾಗ ರಜನಿಕಾಂತ್ ನೆನಪಿಸಿಕೊಂಡರು ಕರ್ನಾಟಕದ ಈ ಮಿತ್ರನಿಗೆ.

67 ನೇ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಪ್ರಧಾನ ಸಮಾರಂಭದಲ್ಲಿ ದಕ್ಷಿಣದ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರಿಗೆ ಚಲನಚಿತ್ರದಲ್ಲಿಯ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ಪುರಸ್ಕಾರದಿಂದ ಗೌರವಿಸಲಾಯಿತು. ರಜನಿಕಾಂತ್ ಅವರು ತಮ್ಮ ಅಭಿನಯದ ಮುಖಾಂತರ ಲಕ್ಷಾವಧಿ ಅಭಿಮಾನಿಗಳ ಹೃದಯದ ಮೇಲೆ ರಾಜ್ಯ ಮಾಡುತ್ತಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ರಜನಿಕಾಂತ್ ಅವರು ಅಭಿಮಾನಿಗಳ ಮನರಂಜನೆಯನ್ನು ಮಾಡುತ್ತ ಬಂದಿದ್ದಾರೆ. ಇದೇ ಕಾರಣಕ್ಕಾಗಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರ ಪತ್ನಿ ಲತಾ, ಮಗಳು ಸೌಂದರ್ಯ ಹಾಗೂ ಅಳಿಯ ಧನುಷ್ ಉಪಸ್ಥಿತರಿದ್ದರು. ಈ ಪುರಸ್ಕಾರ ದೊರೆತ ನಂತರ ರಜನಿಕಾಂತ್ ಅವರು ತಮ್ಮ ಭಾಷಣದ ಸಂದರ್ಭದಲ್ಲಿ ಅನೇಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಜೊತೆಗೆ ಈ ಪುರಸ್ಕಾರವನ್ನು ಗುರು ಕೆ ಬಾಲಚಂದ್ರ ಅವರಿಗೆ ಅರ್ಪಿಸುತ್ತಿದ್ದೇನೆ ಎಂದು ಹೇಳಿದರು.

ಈ ಪುರಸ್ಕಾರವನ್ನು ಸ್ವೀಕರಿಸುವಾಗ ರಜನಿಕಾಂತ್ ಅವರು ಭಾಷಣದಲ್ಲಿ ತಮ್ಮ ಅನೇಕ ಭಾವನೆಗಳನ್ನು ವ್ಯಕ್ತ ಮಾಡಿದರು. ಚಿತ್ರರಂಗದಲ್ಲಿ ಅದ್ಭುತ ಕೆಲಸ ಮಾಡಿದ ನಟರಿಗೆ ಪ್ರತಿವರ್ಷ ದಾದಾಸಾಹೇಬ್ ಫಾಲ್ಕೆ ಪುರಸ್ಕಾರದಿಂದ ಸನ್ಮಾನ ಮಾಡಲಾಗುತ್ತದೆ. ಈ ಚಿತ್ರ ಜಗತ್ತಿನಲ್ಲಿ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ ತುಂಬಾ ಪ್ರತಿಷ್ಠೆಯ ಪುರಸ್ಕಾರವೆಂದು ತಿಳಿಯಲಾಗುತ್ತದೆ. ಈ ಪುರಸ್ಕಾರವು ದೊರೆತಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದಕ್ಕಾಗಿ ನಾನು ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಈ ಪುರಸ್ಕಾರವನ್ನು ನನ್ನ ಗುರುಗಳಾದ ಕೆ. ಬಾಲಚಂದ್ರ ಅವರಿಗೆ ಅರ್ಪಿಸುತ್ತೇನೆ ಎಂದು ರಜನಿಕಾಂತ್ ಹೇಳುತ್ತಾರೆ.

ಇದೇ ಸಂದರ್ಭದಲ್ಲಿ ನಾನು ಇನ್ನೂ ಕೆಲವರಿಗೆ ಧನ್ಯವಾದಗಳನ್ನು ಅರ್ಪಿಸುವೆ. ನನ್ನ ಈ ಚಿತ್ರ ಜಗತ್ತಿನ ಸಂಪೂರ್ಣ ಪ್ರವಾಸದಲ್ಲಿ ಸತತವಾಗಿ ಜೊತೆಯಲ್ಲಿದ್ದವರಿಗೂ ನನ್ನ ಧನ್ಯವಾದಗಳು. ನನ್ನ ಸಹೋದರ ಸತ್ಯನಾರಾಯಣ ಗಾಯಕ್ವಾಡ್ ಇವರು ನನಗೆ ನನ್ನ ತಂದೆಯಂತೆ ಇದ್ದಾರೆ. ಇವರು ನನಗೆ ಒಳ್ಳೆಯ ಸಂಸ್ಕಾರ ಮತ್ತು ಅಧ್ಯಾತ್ಮದ ಶಿಕ್ಷಣವನ್ನು ನೀಡಿ ಬೆಳೆಸಿದರು. ಇವರೊಂದಿಗೆ ಕರ್ನಾಟಕದಲ್ಲಿ ನನ್ನ ಮಿತ್ರ ಮತ್ತು ಸಹಕಾರಿ ರಾಜ ಬಹದ್ದೂರ್ (ಬಸ್ ಡ್ರೈವರ್) ಇವರಿಗೂ ನಾನು ಈ ಸಂದರ್ಭದಲ್ಲಿ ಧನ್ಯವಾದಗಳು ಅರ್ಪಿಸಲು ಇಚ್ಚಿಸುತ್ತೇನೆ. ಯಾಕೆಂದರೆ ನಾನು ಬಸ್ನಲ್ಲಿ ಕಂಡಕ್ಟರ್ ಇದ್ದಾಗ ನನ್ನಲ್ಲಿಯ ಅಭಿನಯ ಕೌಶಲ್ಯವನ್ನು ಗುರುತಿಸಿ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರೋತ್ಸಾಹಿಸಿದರು. ಇವರೆಲ್ಲರಿಗೂ ನಾನಿಂದು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ರಜನಿಕಾಂತ್ ಹೇಳುತ್ತಾರೆ.

ಇವರಷ್ಟೇ ಅಲ್ಲದೆ ಎಲ್ಲ ನಿರ್ಮಾಪಕರು, ದಿಗ್ದರ್ಶಕರು, ಮತ್ತು ಸಹ ಕಲಾವೃಂದ, ಟೆಕ್ನಿಷಿಯನ್ಸ್, ವಿತರಕರು, ಪ್ರದರ್ಶಕರು, ಮೀಡಿಯಾ ಹಾಗೂ ನನ್ನ ಅಭಿಮಾನಿ ಬಳಗಕ್ಕೆ ಮತ್ತು ತಮಿಳು ಭಾಷಿಕರು ಹೀಗೆ ಎಲ್ಲರಿಗೂ ನಾನು ಋಣಿಯಾಗಿದ್ದೇನೆ. ಇವರಿಲ್ಲದೆ ನಾನೇನು ಇಲ್ಲ, ಎಂದು ನಮ್ರತೆಯಿಂದ ಹೇಳುತ್ತಾರೆ ರಜನಿಕಾಂತ್. ಈ ಪುರಸ್ಕಾರದ ಸಂದರ್ಭದಲ್ಲಿ ನಟ ರಜನಿಕಾಂತ್ ಅವರಿಗೆ ಉಪಸ್ಥಿತರು ಮತ್ತು ಅಭಿಮಾನಿಗಳು ಎದ್ದುನಿಂತು ಗೌರವದ ವಂದನೆಯನ್ನು ಸಲ್ಲಿಸಿ ಸನ್ಮಾನಿಸಿದರು.