“ನಾನು ವಿರಾಟ್ ಕೊಹ್ಲಿ ಆಗಿದಿದ್ದರೆ ಚಹಲ್ ಹಾಗೂ ಕುಲದೀಪ್ ಜಾಗಕ್ಕೆ ‘ಈ’ ಆಟಗಾರರನ್ನು ಆಯ್ಕೆ ಮಾಡುತ್ತಿದ್ದೆ!”
ಟಿ ಟ್ವೆಂಟಿ ವಿಶ್ವಕಪ್ 2021 ಗೆ ಇನ್ನೂ ಸಾಕಷ್ಟು ಸಮಯವಿದೆ. ಯಾವುದೇ ತಂಡದ ಪ್ಲೇಯಿಂಗ್ ಇಲೆವೆನ್ ಅಥವಾ ಟೂರ್ನಮೆಂಟ್ ಗಾಗಿ ಫೈನಲ್ 15 ಗಾಗಿ ಕೂಡಾ ಇನ್ನೂ ಯಾವುದೇ ಸಿದ್ಧತೆಗಳು ನಡೆದಿಲ್ಲ. ಆದರೆ ಇದಕ್ಕೂ ಮೊದಲು ಇಂಗ್ಲೆಂಡ್ ನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಒಬ್ಬರು ಭಾರತ ಕ್ರಿಕೆಟ್ ತಂಡದ ಬಗ್ಗೆ ಒಂದು ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಹಿರಿಯ ಹಾಗೂ ಮಾಜಿ ಆಟಗಾರ ಮಾಂಟಿ ಪನೇಸರ್, “ತಾನೇನಾದರೂ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆಗಿದಿದ್ದರೆ ಕುಲ್ ದೀಪ್ ಹಾಗೂ ಯಜ್ವೇಂದ್ರ ಚಹಲ್ ಜೋಡಿಯ ಬದಲಾಗಿ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರ ಜೋಡಿಯನ್ನು ಟೀ ಟ್ವೆಂಟಿ ವಿಶ್ವ ಕಪ್ ತಂಡದ ಸ್ಪಿನ್ನರ್ ಗಳಾಗಿ ಆಯ್ಕೆ ಮಾಡುತ್ತಿದ್ದೆ” ಎಂದು ಹೇಳಿದ್ದಾರೆ.
ಯಜ್ವೇಂದ್ರ ಚಹಲ್ ಹಾಗೂ ಕುಲದೀಪ್ ಸಿಂಗ್ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿಲ್ಲ. ಚಹಲ್ ಕಳೆದ ಹತ್ತು ಮ್ಯಾಚುಗಳಲ್ಲಿ ಕೇವಲ 9 ವಿಕೆಟುಗಳನ್ನು ಉರುಳಿಸುವಲ್ಲಿ ಸಫಲರಾಗಿದ್ದಾರೆ. ಕುಲದೀಪ್ ಸಿಂಗ್ ಕಳೆದ ಎರಡು ವರ್ಷಗಳಲ್ಲಿ ಕೇವಲ 4 ಸೀಮಿತ ಓವರುಗಳ ಪಂದ್ಯಗಳನ್ನು ಆಡಿದ್ದಾರೆ. ಇದೇ ವೇಳೆಯಲ್ಲಿ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇದೇ ಕಾರಣದಿಂದಲೇ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಅವರು ಸ್ಪಿನ್ ಜೋಡಿ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಿಗೆ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಎರಡನೇ ಅವಕಾಶವನ್ನು ನೀಡಬೇಕಾಗಿದೆ ಎಂದು ಮಾಂಟಿ ಪನೇಸರ್ ಹೇಳಿದ್ದಾರೆ. ಅಶ್ವಿನ್ ದೀರ್ಘಕಾಲದವರೆಗೆ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ ಎಂದು ಹೇಳಿದ್ದಾರೆ.

38 ವರ್ಷದ ಮಾಂಟಿ ಪನೆಸರ್ ಅವರು ಚಹಲ್ ಹಾಗೂ ಕುಲ್ ದೀಪ್ ಇಬ್ಬರಿಗೂ ಐಪಿಎಲ್ ಪಂದ್ಯಾವಳಿಗಳು ದೊಡ್ಡ ಲಿಟ್ಮಸ್ ಪರೀಕ್ಷೆಯಂತೆ ಆಗಲಿದೆ ಎಂದು ಹೇಳಿದ್ದು, ಈ ಸೀಸನ್ ನಲ್ಲಿ ಅವರು ಕಳಪೆ ಪ್ರದರ್ಶನವನ್ನು ತೋರಿದರೆ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಅವರು ಆಡುವುದು ಅನುಮಾನ ಎಂದಿದ್ದಾರೆ. ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ತಮ್ಮ ತಂಡಕ್ಕಾಗಿ ನಾಯಕ ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಸ್ಪಿನ್ನರ್ ಗಳನ್ನು ಆಯ್ಕೆಮಾಡಿಕೊಳ್ಳಲು ಬಯಸಿದ್ದಾರೆ. ಅದು ಯಾರಾಗಬಹುದೆಂಬುದು ಮುಖ್ಯ ವಿಷಯವಲ್ಲ, ವಿರಾಟ್ ಕೊಹ್ಲಿ ಅವರಿಗೆ ಒಬ್ಬ ಉತ್ತಮ ಪರ್ಫಾರ್ಮರ್ ನ ಅವಶ್ಯಕತೆ ಇದೆ. ಅವರ ತಂಡದಲ್ಲಿ ಈಗಾಗಲೇ ಸಾಕಷ್ಟು ವೇಗಿಗಳು, ಆಲ್‌ರೌಂಡರ್‌ಗಳು ಮತ್ತು ಬ್ಯಾಟ್ಸ್‌ಮನ್ ಗಳು ಇದ್ದಾರೆ.
ಪನೇಸರ್ ಆಂಗ್ಲ ಪತ್ರಿಕೆಯ ವೆಬ್ಸೈಟ್ ಒಂದರ ಜೊತೆಗೆ ಮಾತನಾಡುತ್ತಾ, ಸ್ಪಿನ್ನರ್ ಗಳ ಆಯ್ಕೆ ಅವರಿಗೆ ಚಿಂತೆಯನ್ನು ಉಂಟುಮಾಡಬಹುದು, ನಾನು ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಮೈದಾನದಲ್ಲಿ ಮತ್ತೊಮ್ಮೆ ನೋಡಲು ಇಷ್ಟಪಡುತ್ತೇನೆ. ನಾನೇನಾದರೂ ವಿರಾಟ್ ಕೊಹ್ಲಿ ಆಗಿದ್ದಾರೆ ಖಂಡಿತವಾಗಿ ಆರ್ ಅಶ್ವಿನ್ ಹಾಗೂ ಕುಲದೀಪ್ ಸಿಂಗ್ ಜೋಡಿಯನ್ನು ಸ್ಪಿನ್ನರ್ ಗಳಾಗಿ ಆಯ್ಕೆ ಮಾಡುತ್ತಿದ್ದೆ. ಇದಕ್ಕೆ ಕಾರಣ ಅವರ ಆಟ ಹಾಗೂ ಅನುಭವದಿಂದ ಬದಲಾಗುತ್ತಿರುವ ಅವರ ಸಾಮರ್ಥ್ಯ. ಅವರಿಬ್ಬರೂ ಎಲ್ಲಾ ರೀತಿಯ ಸಾಮರ್ಥ್ಯಗಳನ್ನು ಹೊಂದಿದ್ದು, ದೊಡ್ಡ ಪಂದ್ಯಗಳನ್ನು ಆಡಲು ಸಮರ್ಥರಾಗಿದ್ದು ಅವರಿಬ್ಬರನ್ನು ಏಕೆ ಆಯ್ಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ.