ನಾನು 9 ವರ್ಷಗಳ ಹಿಂದೆಯೇ ಸತ್ತು ಹೋಗಿದ್ದೇನೆ; 4 ವರ್ಷದ ಹುಡುಗಿಯು ಮಾಡಿತು ದಾವೆ; ಪುನರ್ಜನ್ಮದ ಕಥೆ ಕೇಳಿ ಕುಟುಂಬವೇ ಶಾಕ್…!

ಪುನರ್ಜನ್ಮದ ಮೇಲೆ ಆಧಾರಿತ ಅನೇಕ ಚಲನ ಚಿತ್ರಗಳನ್ನು ಸಾಕಷ್ಟು ನೋಡಿರಬಹುದು, ಕೇಳಿರಬಹುದು. ಆದರೆ ನಿಜಜೀವನದಲ್ಲಿಯೇ ಪುನರ್ಜನ್ಮದ ಕಥೆ ಹೇಳುತ್ತಿರುವ ಪುಟ್ಟ ಬಾಲಕಿಯ ಕಥೆಯನ್ನು ಕೇಳಿ ಕುಟುಂಬದವರಿಗೆ ಹೇಗಾಗಿರಬೇಡ ನೀವೇ ಹೇಳಿ.

ಸದ್ಯ ರಾಜಸ್ಥಾನದಲ್ಲಿಯ ಪರಾವಲ್ ಹೆಸರಿನ ಊರಿನಲ್ಲಿ ವಾಸಿಸುತ್ತಿರುವ ನಾಲ್ಕು ವರ್ಷದ ಹುಡುಗಿಯೊಬ್ಬಳು ಮಾಡುತ್ತಿರುವ ಪುನರ್ಜನ್ಮದ ದಾವೆಯನ್ನು ಕೇಳಿ ಕುಟುಂಬದವರಿಗೆ ಶಾಕ್ ತಗುಲಿದೆ. ಈ ನಾಲ್ಕು ವರ್ಷದ ಪುಟ್ಟ ಬಾಲಕಿ ಕಿಂಜಲ್ ಮೇಲಿಂದ ಮೇಲೆ ತನ್ನ ಅಣ್ಣನಿಗೆ ಭೇಟಿಯಾಗುವ ಸಲುವಾಗಿ ಹಠ ಮಾಡುತ್ತಿದ್ದಳು.

ಅವಳ ಮಾತಿಗೆ ಒಂದು ದಿನ ಬೆಲೆ ಕೊಟ್ಟು ಆಕೆಯ ತಾಯಿಯು ನಿಮ್ಮ ತಂದೆಯನ್ನು ಕರೆದುಕೊ ಎಂದು ಹೇಳಿದಳು. ಅದಕ್ಕೆ ಕಿಂಜಲ್ ನನ್ನ ತಂದೆಯು ಪೀಪಲಾಂತ್ರಿ ಊರಲ್ಲಿ ಇದ್ದಾರೆ ಎಂದು ಹೇಳಿದಳು. ಪೀಪಾಲಾಂತ್ರಿ ಊರಲ್ಲಿ ಒಂಬತ್ತು ವರ್ಷಗಳ ಹಿಂದೆ ಉಷಾ ಹೆಸರಿನ ಮಹಿಳೆಯು ಅಗ್ನಿ ಅವಘಡದಲ್ಲಿ ತೀರಿಕೊಂಡಿದ್ದಳು. ಈ ಪೀಪಲಾಂತ್ರಿ ಊರು ಪರಾವಾಲ್ ನಿಂದ 30 ಕಿಲೋಮೀಟರ್ ಗಳ ಅಂತರದಲ್ಲಿದೆ.

ತನ್ನ ತಂದೆ ಪಿಪಲಾಂತ್ರಿ ಊರಲ್ಲಿ ಇದ್ದಾರೆ ಎಂದು ಹೇಳುತ್ತಿರುವ ಕಿಂಜಲ್ ಳ ಮಾತು ಕೇಳಿ ತಾಯಿಗೆ ಶಾಕ್ ಆಯಿತು. ನಂತರ ಕಿಂಜಲ್ ಳ ತಾಯಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸಿದಳು. ಆಗ ಕಿಂಜಲ್ ಳು ಪಿಪಲಾಂತ್ರಿ ಊರಲ್ಲಿ ನನ್ನ ತಾಯಿ, ತಂದೆ ಮತ್ತು ಅಣ್ಣ ಇವರೆಲ್ಲರೂ ಜೊತೆಗೂಡಿ ಇರುತ್ತಾರೆ ಎಂದು ಹೇಳಿದಳು. ಒಂಬತ್ತು ವರ್ಷಗಳ ಹಿಂದೆ ಒಂದು ದುರ್ಘಟನೆಯಲ್ಲಿ ನನ್ನ ಮೃತ್ಯು ಸಂಭವಿಸಿತು. ನಾನು ಅದರಲ್ಲಿ ಸುಟ್ಟುಹೋಗಿದ್ದೆ. ಇದನ್ನು ಕೇಳಿದ ನಂತರ ತಾಯಿ ದುರ್ಗಾ ಮತ್ತು ಕುಟುಂಬದವರು ಒಂದು ಕ್ಷಣ ನಡುಗಿಹೋದರು.

ಕಿಂಜಲ್ ಹೇಳಿದ ಸಂಪೂರ್ಣ ಘಟನೆಯನ್ನು ತಾಯಿ ದುರ್ಗಾ ತನ್ನ ಪತಿಯಾದ ರತನ್ ಸಿಂಹರಿಗೆ ಹೇಳಿದಳು. ರತನ್ ಸಿಂಹ ಮಗಳನ್ನು ಕರೆದುಕೊಂಡು ಡಾಕ್ಟರ್ ಕಡೆಗೆ ಹೋದರು. ಡಾಕ್ಟರ್ ಆಕೆಯ ಆರೋಗ್ಯ ತುಂಬಾ ಚೆನ್ನಾಗಿದೆ ಎಂದು ಹೇಳಿದರು. ಆದರೆ ಕಿಂಜಲ್ ಮಾತ್ರ ಸತತವಾಗಿ ತನ್ನ ಕುಟುಂಬದವರಿಗೆ ಭೇಟಿಯಾಗುತ್ತೇನೆ ಎಂದು ಹಠ ಮಾಡುತ್ತಿದ್ದಳು. ನನ್ನ ತವರು ಮನೆ ಪಿಪಲಾಂತ್ರಿ ಊರಲ್ಲಿ ಇದೆ. ಹಾಗೂ ಗಂಡನ ಮನೆ ಓಡನ್ ನಲ್ಲಿ ಇದೆ ಹೇಳುತ್ತಿದ್ದಳು.

ಕಿಂಜಲ್ ಳ ಕಥೆ ಪಿಪಲಾಂತ್ರಿಯಲ್ಲಿ ವಾಸಿಸುತ್ತಿರುವ ಪಂಕಜ್ ವರೆಗೆ ತಲುಪಿತು. ಆತ ಲಗುಬಗೆಯಿಂದ ಪರಾವಲ್ ಬಂದು ತಲುಪಿದ. ಊರಿನಿಂದ ಬಂದ ಪಂಕಜನಿಗೆ ನೋಡುತ್ತಲೇ ಕಿಂಜಲ್ ಳು ತುಂಬಾ ಖುಷಿ ಪಟ್ಟಳು. ಪಂಕಜ್ ತನ್ನ ಮೊಬೈಲ್ ನಲ್ಲಿರುವ ತಾಯಿ ಹಾಗೂ ಉಷಾಳ ಫೋಟೋ ತೋರಿಸಿದನು. ಆ ಫೋಟೋಗಳನ್ನು ನೋಡಿ ಕಿಂಜಲ್ ತುಂಬಾ ಅತ್ತುಬಿಟ್ಟಳು. ಇಷ್ಟೆಲ್ಲಾ ಆದ ನಂತರ ಜನವರಿ 14 ರಂದು ಕಿಂಜಲ್ ತನ್ನ ಕುಟುಂಬದ ಜೊತೆಗೆ ಪಿಪಲಾಂತ್ರಿಗೆ ಹೋದಳು.

ಕಿಂಜಲ್ ಊರಿಗೆ ಹೋದ ನಂತರ ಆಕೆ ಅನೇಕ ವರ್ಷಗಳಿಂದ ಅಲ್ಲಿಯ ತಿರುಗಾಡಿದಂತೆ ಹಾಗೂ ಎಲ್ಲವೂ ಗೊತ್ತಿರುವ ಹಾಗೆ ಆ ಊರಲ್ಲಿ ತಿರುಗಾಡುತ್ತಿದ್ದಳು. ಉಷಾ ಜೀವಂತವಿರುವಾಗ ಯಾವ ಮಹಿಳೆಯರ ಜೊತೆಗೆ ಮಾತನಾಡುತ್ತಿದ್ದಳೊ ಅದೇ ಮಹಿಳೆಯರ ಜೊತೆಗೆ ಕಿಂಜಲ್ ಮಾತನಾಡುತ್ತಿದ್ದಳು. ಉಷಾಳ ತಾಯಿ ಗೀತಾಳಿಗೆ ಈ ದೃಶ್ಯ ನೋಡಿ ತನ್ನ ಅಳು ತಡೆಯಲಾಗಲಿಲ್ಲ. 2013ರಲ್ಲಿ ಉಷಾ ತೀರಿಕೊಂಡಿದ್ದಳು. ಉಷಾ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಆದ ಅಗ್ನಿ ದುರಂತದಿಂದ ಸುಟ್ಟು ಸಾವಿಗೀಡಾಗಿದ್ದಳು. ಉಷಾಗೆ ಎರಡು ಮಕ್ಕಳಿವೆ.