ನಾಯಿಗೆ ಶೂಸ್ ತೊಡಿಸಿದ ನಂತರ ಆಯಿತು ಹೀಗೆ ಫಜೀತಿ! ಈ ತಮಾಷೆಯ ವೈರಲ್ ವಿಡಿಯೋ ನೋಡಿದ ನಂತರ ನಿಮಗೂ ನಗು ತಡೆಯುವುದು ಆಗುತ್ತದೆ ಅಸಾಧ್ಯ….!
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ನಾಯಿಯ ವಿಡಿಯೋ ಒಂದು ತುಂಬಾನೇ ಸಂಚಲನ ಮೂಡಿಸಿದೆ. ಈ ನಾಯಿಯ ವಿಡಿಯೋ ನೋಡಲು ತುಂಬಾ ತಮಾಷೆಯದ್ದಾಗಿದೆ. ಇದೇ ಕಾರಣದಿಂದ ಇದು ತುಂಬಾ ವೈರಲ್ ಸಹ ಆಗುತ್ತಿದೆ. ಈ ವಿಡಿಯೋದಲ್ಲಿ ನಾಯಿಯ ನಾಲ್ಕು ಕಾಲುಗಳಿಗೆ ಶೂಸ್ ತೊಡಿಸಿದ್ದಾರೆ. ಈ ಬದಲಾವಣೆಯಿಂದ ನಾಯಿ ತುಂಬಾ ಅನ್ ಕಂಫರ್ಟ್ ಆಗಿಬಿಟ್ಟಿದೆ. ಮತ್ತು ಶೂಸ್ ಹಾಕಿಕೊಂಡು ನಡೆಯುವುದೆಂದರೆ ಅದಕ್ಕೆ ತುಂಬಾ ವಿಚಿತ್ರವೆನಿಸುತ್ತಿದೆ. ಅದಕ್ಕೆ ಸರಿಯಾಗಿ ನಡೆಯಲುಬಾರದೆ ಕಾಲುಗಳು ಒಂದೇ ಸವನೆ ಜಾರುತ್ತಿವೆ. ಈ ವಿಡಿಯೋದಲ್ಲಿ ನಾಯಿ ತುಂಬಾ ಅಸ್ವಸ್ಥವಾಗಿರುವುದು ಕಂಡುಬರುತ್ತಿದೆ.
ಪ್ರಸ್ತುತ ವಿಡಿಯೋ ಅಮೆರಿಕೆಯ ನಾರ್ತ್ ಡಕೋಟಾದ ಸೂಪರ್ ಸ್ಟೋರ್ ನಲ್ಲಿ ಶೂಟ್ ಮಾಡಲಾಗಿದೆ. ಮೊಂಟಾನ ಹೆಸರಿನ ಈ ನಾಯಿಯ ಜೊತೆಗೆ ಅದರ ಮಾಲಿಕನು ಸಹ ಈ ದೃಶ್ಯ ನೋಡಲು ತುಂಬಾ ಉತ್ಸಾಹಿತನಾಗಿದ್ದನು.
ವಿಡಿಯೋ ನೋಡಿ
ಈ ವಿಡಿಯೋವನ್ನು ವೈರಲ್ ಹಾಗ್ ಹೆಸರಿನ ಯುಟ್ಯೂಬ್ ಚಾನೆಲ್ ಮುಖಾಂತರ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. 45 ಸಾವಿರಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋವನ್ನು ಇಲ್ಲಿಯವರೆಗೆ ವೀಕ್ಷಿಸಿದ್ದಾರೆ. ವೀಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ಕಮೆಂಟ್ ಮಾಡುತ್ತಿದ್ದಾರೆ. ನಾಯಿಯ ಈ ವಿಡಿಯೋ ತಮಾಷೆಯಾಗಿರುವುದರಿಂದ ನೇಟಿಜನ್ಸ್ ಗಳಿಗೆ ಈ ವಿಡಿಯೋ ತುಂಬಾನೇ ಇಷ್ಟವಾಗಿದೆ.