ನಾಯಿ ತನ್ನ ಮಾಲೀಕನ ವಿರುದ್ಧ ವರ್ತಿಸಿ ಉಳಿಸಿತು ಮೀನುಗಳ ಜೀವ! ಮನಕಲಕುವ ದೃಶ್ಯ ನೋಡಿ ಈ ವಿಡಿಯೋದಲ್ಲಿ.

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಕ್ಯೂಟ್ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತವೆ. ಈ ರೀತಿಯ ವಿಡಿಯೋಗಳು ಪೋಸ್ಟ್ ಮಾಡುವುದೇ ತಡ ನೋಡು ನೋಡುವಷ್ಟರಲ್ಲಿ ವೈರಲ್ ಆಗಿಬಿಡುತ್ತವೆ. ಈ ಪ್ರಾಣಿಗಳ ಮುಗ್ಧತೆ ನೋಡಿಗರಿಗೆ ತುಂಬಾ ಹಿತವೆನಿಸುತ್ತದೆ. ಮತ್ತು ಈ ವಿಡಿಯೋಗಳು ಮನುಷ್ಯನಿಗೆ ಅನೇಕ ರೀತಿಯ ಜೀವನದ ಪಾಠಗಳನ್ನು ಹೇಳಿಕೊಡುತ್ತೇವೆ. ಸದ್ಯ ಇಂಟರ್ನೆಟ್ ನಲ್ಲಿ ನಾಯಿಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋ ನಿಜಕ್ಕೂ ನಮ್ಮ ಹೃದಯವನ್ನು ತಟ್ಟುವುದರಲ್ಲಿ ಸಂಶಯವೇ ಇಲ್ಲ. ಕಾರಣ ತನ್ನ ಮಾಲೀಕನನ್ನು ಎದುರು ಹಾಕಿಕೊಂಡು ಒಂದು ಒಳ್ಳೆಯ ಕೆಲಸವನ್ನು ನಾಯಿಯು ಇಲ್ಲಿ ಮಾಡಿದೆ. ಅದೇನು ನೋಡಿ ಮುಂದೆ.

ನಾಯಿಯು ಒಂದು ಜೀವ ಉಳಿಸಲು ತನ್ನ ಮಾಲೀಕನ ಮನಸ್ಸಿನ ವಿರುದ್ಧ ವರ್ತಿಸಿತು.

ಒಂದು ನೀರಿನ ಹೊಂಡದ ಬಳಿ ಕುಳಿತು ವ್ಯಕ್ತಿಯೊಬ್ಬ ಮೀನು ಹಿಡಿಯುತ್ತಿದ್ದಾನೆ. ಆತನ ಪಕ್ಕದಲ್ಲಿ ಒಂದು ಗೋಲ್ಡನ್ ರಿಟ್ರೀವರ್ ಪ್ರಜಾತಿಯ ನಾಯಿಯು ಕಂಡುಬರುತ್ತಿದೆ. ವಿಡಿಯೋದ ಪ್ರಾರಂಭದಲ್ಲಿ ವ್ಯಕ್ತಿಯು ಮೀನನ್ನು ಹಿಡಿದು ತನ್ನ ಬದಿಗಿರುವ ಪ್ಲಾಸ್ಟಿಕ್ ಟಬ್ ನಲ್ಲಿ ಹಾಕಿರುತ್ತಾನೆ. ಏತನ್ಮಧ್ಯೆ ಈ ನಾಯಿಯ ದೃಷ್ಟಿ ಆ ಮೀನುಗಳು ಇರುವ ಟಬ್ ಮೇಲೆ ಬೀಳುತ್ತದೆ. ಅಲ್ಲಿ ಮೀನುಗಳು ಸಾವು ಬದುಕಿನ ಹೋರಾಟದಲ್ಲಿ ಒಂದೇ ಸಮನೆ ಚಡಪಡಿಸುತ್ತಿರುತ್ತವೆ. ಆಗ ನಾಯಿಯು ಸ್ವಲ್ಪ ಆ ಮೀನುಗಳನ್ನು ಮೂಗಿನಿಂದ ವಾಸನೆ ನೋಡಿ ತದನಂತರ ಅತ್ತಿತ್ತ ದೃಷ್ಟಿ ಹಾಕಿ ಪ್ಲಾಸ್ಟಿಕ್ ಟಬ್ಬನ್ನು ನೀರಿನಲ್ಲಿ ನೂಕಿ ಬಿಡುತ್ತದೆ. ಇದನ್ನು ನೋಡಿದ ಮಾಲೀಕ ತಕ್ಷಣ ಎದ್ದು ಆ ಮೀನುಗಳು ಇರುವ ಟಬ್ ನ್ನು ಹೇಗಾದರೂ ಮಾಡಿ ನೀರಿನಿಂದ ತೆಗೆದುಕೊಳ್ಳಬೇಕೆಂದು ಪ್ರಯತ್ನಿಸುತ್ತಾನೆ. ಆದರೆ ನಾಯಿಯೂ ಆತನನ್ನು ಹೀಗೆ ಮಾಡಲು ಬಿಡುವುದೇ ಇಲ್ಲ.

ವಿಡಿಯೋ ನೋಡಿ

ಮಾನವನಿಗಿಂತ ಪ್ರಾಣಿಗಳಲ್ಲಿಯೇ ಮಾನವೀಯತೆ ಹೆಚ್ಚಾಗಿದೆ ಎಂದು ನೆಟ್ಟಿಗರು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ‘Morissa Schwartz’ ಹೆಸರಿನ ಅಕೌಂಟ್ ನಿಂದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಕ್ಯಾಪ್ಷನ್ ನಲ್ಲಿ ‘ಅವುಗಳಿಗೆ ಏಕಾಂಗಿಯಾಗಿ ಬಿಟ್ಟು ಬಿಡು ಹ್ಯೂಮನ್’ ಎನ್ನಲಾಗಿದೆ. ವಿಡಿಯೋ ನೋಡಿದ ನೆಟಿಜನ್ಸ್ ಗಳು ಅನೇಕ ಪ್ರಕಾರದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಒಬ್ಬನು ‘ನಾಯಿಗಳಲ್ಲಿ ಮನುಷ್ಯನಿಗಿಂತ ಹೆಚ್ಚು ಮಾನವೀಯತೆ ಇದೆ’ ಎಂದಿದ್ದಾನೆ. ಇನ್ನೊಬ್ಬ ‘ಇವತ್ತಿನ ದಿವಸ ಇದು ನನ್ನ ಹೀರೋ ಆಗಿದೆ’ ಎಂದಿದ್ದಾನೆ.