ನಾರಾಯಣ್-ಸುಧಾ ಮೂರ್ತಿ ಅಳಿಯ ಋಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆ; ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ..!

ರಿಷಿ ಸುನಕ್ ಬ್ರಿಟನ್ನಿನ ಮೊದಲ ಭಾರತೀಯ ಮೂಲದ ಪ್ರಧಾನ ಮಂತ್ರಿಯಾದ ನಂತರ ಭಾರತ ದೇಶದಲ್ಲಷ್ಟೇ ಅಲ್ಲ ಪಾಕಿಸ್ತಾನದಲ್ಲಿಯೂ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ಸದ್ಯ ಎಲ್ಲೆಡೆಯೂ ಇದೇ ಚರ್ಚೆ ಜೋರಾಗಿ ನಡೆದಿದೆ. ಇದಕ್ಕೆ ಒಂದು ಮಹತ್ವದ ಕಾರಣ ಇರುವುದರಿಂದ ಭಾರತದ ಜೊತೆಗೆ ಪಾಕಿಸ್ತಾನದಲ್ಲಿಯೂ ಕೂಡ ಜೋಶ್ ನಿಂದ ಸಂಭ್ರಮಾಚರಣೆ ನಡೆದಿರುವುದು ನಿಜ.

ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ಸದ್ಯದ ಪಾಕಿಸ್ತಾನದ ಪಂಜಾಬ್ ಪ್ರಾಂತದ ಗುಜರನ್ವಾಲಾ (Gujranwala) ದಲ್ಲಿ ರಿಷಿ ಸುನಕ್ ಅವರ ಅಜ್ಜ ಅಜ್ಜಿಯ ಜನ್ಮವಾಗಿದೆ. ಈ ಕಾರಣದಿಂದಾಗಿ ಬ್ರಿಟನ್ನಿನ ನೂತನ ಪ್ರಧಾನಮಂತ್ರಿ ರಿಷಿ ಅವರು ಇತ್ತ ಭಾರತಿಯ ಹಾಗೂ ಪಾಕಿಸ್ತಾನಿ ಎರಡೂ ಆಗಿದ್ದಾರೆ.

ಇಲ್ಲಿಯವರೆಗೆ ರಿಷಿ ಸುನಕ್ ಅವರ ಬಗ್ಗೆ ತುಂಬಾ ಕಡಿಮೆ ಮಾಹಿತಿ ದೊರಕಿದೆ. ಕ್ವೀನ್ ಲೈನೆಸ್ 86 ಹೆಸರಿನ ಟ್ವಿಟರ್ ಹ್ಯಾಂಡಲ್ ನೀಡಿದ ಮಾಹಿತಿ ಪ್ರಕಾರ, ರಿಷಿ ಅವರ ಅಜ್ಜ ರಾಮದಾಸ್ ಸುನಕ್ 1935 ರಲ್ಲಿ ನೈರೋಬಿಯಲ್ಲಿಯ ಕ್ಲರ್ಕ್ ನೌಕರಿ ಪಡೆಯುವ ಸಲುವಾಗಿ ಪಾಕಿಸ್ತಾನವನ್ನು ತೊರೆದರು. ರಿಷಿ ಅವರ ಜನ್ಮ 1980 ರಲ್ಲಿ ಸೌತೆಂಪ್ಟನ್ ನಲ್ಲಿ ಆಗಿದೆ. ಆದರೆ ಪಾಕಿಸ್ತಾನ ಅಧಿಕೃತವಾಗಿ ರಿಷಿ ಅವರ ಬಗ್ಗೆ ಯಾವುದೇ ರೀತಿಯ ದಾವೆ ಮಾಡಿಲ್ಲ.

ಒಬ್ಬ ಟ್ವಿಟರ್ ಯೂಸರ್, “ನನ್ನ ಪ್ರಕಾರ ಪಾಕಿಸ್ತಾನವು ಸಹ ಬ್ರಿಟನ್ನಿನ ಪ್ರಧಾನ ಮಂತ್ರಿ ಒಬ್ಬ ಪಾಕಿಸ್ತಾನಿಯಾಗಿದ್ದಾರೆ ಎಂಬ ದಾವೆಯನ್ನು ಮಾಡಬೇಕು” ಎನ್ನುತ್ತಿದ್ದಾನೆ.

ಸದ್ಯಕ್ಕೆ ಇಂಟರ್ನೆಟ್ ನಲ್ಲಿ ಮಾತ್ರ ಜನರು ಎರಡು ದೇಶಗಳು ಗರ್ವಪಡುವಂತಹ ವಿಷಯವಾಗಿದೆ ಎಂದಿದ್ದಾರೆ.