ನಿತ್ಯಾನಂದ ಸ್ವಾಮಿಯ ರಿಸರ್ವ್ ಬ್ಯಾಂಕಿನಲ್ಲಿ ಖಾತೆ ತೆರೆಯ ಬೇಕೆಂದರೆ ‘ಈ’ ಕೆಲಸಗಳನ್ನು ಮಾಡಲೇಬೇಕು!
ಎಷ್ಟು ಜನರಿಗೆ ಗೊತ್ತು 250 ₹ ಗಳಿಗೆ ಮೊಬೈಲ್ ಫೋನ್ ಒಂದು ಮಾರಾಟಕ್ಕೆ ಬರುವ ಮುಂಚೆ ಲಕ್ಷಾವಧಿ ಜನರು ಅಡ್ವಾನ್ಸ್ ಹಣ ಪೇಡ್ ಮೋಸ ಹೋದದ್ದು.
ಬದಲಾದ ಕಾಲಕ್ಕೆ ತಕ್ಕಂತೆ ಮೋಸ ಮಾಡುವವರು ಸಹಿತ ಹೊಸ ಹೊಸ ಐಡಿಯಾಗಳನ್ನು ಮೋಸ ಮಾಡುವವರಿಗಾಗಿ ತಯಾರು ಮಾಡುತ್ತಾ ಬರುತ್ತಾರೆ.
ಭಾರತದಲ್ಲಿ ಇಂಥ ಫೇಮಸ್ ಸ್ವಾಮಿಗಳು ತುಂಬಾ ಇದ್ದಾರೆ. ಇವರಲ್ಲಿ ನಿತ್ಯಾನಂದ ಸ್ವಾಮಿಗಳಂತೂ ಎಲ್ಲರಿಗೂ ಚಿರಪರಿಚಿತರೇ ಆಗಿದ್ದಾರೆ. ಸದ್ಯಕ್ಕೆ ನಿತ್ಯಾನಂದ ಸ್ವಾಮಿಗಳು ನಮ್ಮ ದೇಶದಲ್ಲಿಲ್ಲ. ಮಾಧ್ಯಮಗಳ ಪ್ರಕಾರ ಅವರು ನೇಪಾಳದ ಮಾರ್ಗವಾಗಿ ಪಲಾಯನ ಮಾಡಿ ಈಗ ಒಂದು ಹೊಸ ದೇಶವನ್ನು ನಿರ್ಮಾಣ ಮಾಡಿದ್ದಾರೆ. ಈ ಗಣೇಶ ಚತುರ್ಥಿ ಮಹೂರ್ತವನ್ನು ಸಾಧಿಸಿ ಕೈಲಾಸ ಹೆಸರಿನ ಹೊಸದಾದ ಸ್ವಯಂಘೋಷಿತ ದೇಶವೊಂದನ್ನು ಹುಟ್ಟುಹಾಕಿದ್ದಾರೆ. ಜೊತೆಗೆ ಅಲ್ಲೊಂದು ರಿಸರ್ವ್ ಬ್ಯಾಂಕ್ ಓಪನ್ ಮಾಡಿದ್ದಾರೆ. ಹಾಗೆ ಕೈಲಾಸ್ ಡಾಲರ್ ಎಂಬ ಹೆಸರಿನ ಕರೆನ್ಸಿಯನ್ನು ಸಹಿತ ಮಾರ್ಕೆಟಿನಲ್ಲಿ ತಂದಿದ್ದಾರೆ.

ನಿತ್ಯಾನಂದ ಸ್ವಾಮಿಗಳ ಈ ದೇಶ ಎಲ್ಲಿದೆ ಗೊತ್ತಾ?
ನಿತ್ಯಾನಂದ ಸ್ವಾಮಿಗಳು ಈಕ್ವೆಡೋರ್ ನಲ್ಲಿ ಒಂದು ದೀಪವನ್ನು ಖರೀದಿಸಿ ಅದಕ್ಕೆ ಕೈಲಾಶ್ ಎಂದು ಹೆಸರಿಸಿ ತನ್ನದೇ ಆದ ಸ್ವತಂತ್ರ ದೇಶವೆಂದು ಘೋಷಿಸಿದ್ದಾರೆ. ಇದು ಟ್ರಿನಿದದ್ ಮತ್ತು ಟೊಬೆಗೊ ದ್ವೀಪಗಳ ಸಮೀಪದಲ್ಲಿ ಬರುತ್ತದೆ.
ಈ ದೇಶದ ನಿರ್ಮಾಣದ ಉದ್ದೇಶದ ಬಗ್ಗೆ ನಿತ್ಯಾನಂದಸ್ವಾಮಿ ಹೇಳುತ್ತಾರೆ, ಜಗತ್ತಿನಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಯುವುದಕ್ಕಾಗಿ ಬರಿ ಹಿಂದೂಗಳ ಸ್ವತಂತ್ರ ರಾಷ್ಟ್ರದ ಉನ್ನತಿಗಾಗಿ ಈ ದೇಶ ಹುಟ್ಟಿದೆ ಎನ್ನುತ್ತಾರೆ.
ಕಾರ್ಯಕಾರಿ ಮಂಡಳಿಯ ನಿರ್ಮಿತಿ.
ನಿತ್ಯಾನಂದ ಸ್ವಾಮಿಗಳು ಅನೇಕ ರೀತಿಯ ವಿವಾದಗಳಲ್ಲಿ ಸಿಕ್ಕರು ಸಹಿತ ಅವರು ಪ್ರಜಾಪ್ರಭುತ್ವದ ಮೇಲೆ ತಮ್ಮ ವಿಶ್ವಾಸವನ್ನು ತೋರಿಸುತ್ತಾರೆ. ವಿವಿಧ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಹಾಗೆ ಈ ದೇಶದಲ್ಲಿಯೂ ಸಹಿತ ಅನೇಕ ರೀತಿಯ ಸರಕಾರಿ ಹುದ್ದೆಗಳನ್ನು ನಿರ್ಮಿಸಿ ಹುದ್ದೆಗಳಲ್ಲಿ ವಿವಿಧ ವ್ಯಕ್ತಿಗಳನ್ನು ನೇಮಕ ಮಾಡಲಾಗಿದೆ. ಉದಾಹರಣೆಗಾಗಿ ಪ್ರಧಾನಮಂತ್ರಿ ಕ್ಯಾಬಿನೆಟ್ ಮಂತ್ರಿ ಹಾಗೂ ವಿವಿಧ ಸಚಿವಾಲಯಗಳನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲ ಸೈನ್ಯ ಅಧಿಕಾರಿಗಳನ್ನು ಸಹಿತ ನೇಮಿಸಲಾಗಿದೆ. ಇಲ್ಲಿಯ ಪ್ರಧಾನ ಮಂತ್ರಿಯ ಹೆಸರು ‘ಮಾ’ ಆಗಿದೆ. ಈ ವ್ಯಕ್ತಿ ನಿತ್ಯಾನಂದ ಸ್ವಾಮಿಯ ತುಂಬಾ ನಿಕಟವರ್ತಿಯೆಂದು ತಿಳಿಯಲಾಗಿದೆ.

ಇಲ್ಲಿದೆ ನಿತ್ಯಾನಂದ ಸ್ವಾಮಿಗಳ ಸ್ವಂತದ ಕಾಯಿದೆ ಕಾನೂನು ಮತ್ತು ಸಂವಿಧಾನ ಪುಸ್ತಕ.
ಒಂದು ದೇಶದ ಕಾಯ್ದೆ ಕಾನೂನುಗಳ ವ್ಯವಸ್ಥೆಯನ್ನು ಕಾಪಾಡಲು ಆ ದೇಶ ತನ್ನದೇ ಆದ ಒಂದು ಸಂವಿಧಾನವನ್ನು ಹೊಂದುವುದು ಅವಶ್ಯಕತೆ ಇರುತ್ತದೆ. ಒಂದು ದೇಶದ ಸಂವಿಧಾನವನ್ನು ನಿರ್ಮಿಸಬೇಕಾದರೆ ವಿವಿಧ ರೀತಿಯಲ್ಲಿ ಅಭ್ಯಾಸವನ್ನು ಮಾಡಿ ಆ ದೇಶದ ಸಂವಿಧಾನವನ್ನು ರಚಿಸಬೇಕಾಗುತ್ತದೆ. ನಿತ್ಯಾನಂದ ಸ್ವಾಮಿಗಳು ತಮ್ಮ ದೇಶದ ಸಂವಿಧಾನವನ್ನು ಬರೀ ಮೂರ್ನಾಲ್ಕು ತಿಂಗಳಗಳಲ್ಲಿಯೇ ಬರೆದು ಅದನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಸಹಿತ ಮಾಡಿದರು.
ಈ ಸಂವಿಧಾನದಲ್ಲಿರುವ ಮಹತ್ವದ ಅಂಶಗಳು ಒಮ್ಮೆ ನೋಡಿಕೊಳ್ಳಿ.
ಬಾವುಟ,
ದೇಶ ಅಂದಾಗ ಅದಕ್ಕೆ ಒಂದು ಬಾವುಟ ಬೇಕೇ ಬೇಕು. ಹಾಗೆ ನಿತ್ಯಾನಂದರು ಸಹಿತ ತಮ್ಮ ದೇಶದ ಒಂದು ಬಾವುಟವನ್ನು ಪ್ರಸಿದ್ಧಿ ಪಡಿಸಿದ್ದಾರೆ. ತ್ರಿಕೋನಾಕಾರದ ಈ ಬಾವುಟಕ್ಕೆ ವೃಷಭಧ್ವಜ ಎಂದು ಹೆಸರಿಡಲಾಗಿದೆ. ಅದರ ಮೇಲೆ ಪರಮಶಿವ ಅವತಾರದಲ್ಲಿ ಅವರದೇ ಆದ ಫೋಟೋ ಇದ್ದು ಬದಿಗೆ ಶಂಕರನ ವಾಹನವಾದ ನಂದಿ ಇದೆ.
ಪಾಸ್ಪೋರ್ಟ್,
ಇವರು ತಮ್ಮ ದೇಶದ ಪಾಸ್ಪೋರ್ಟ್ ಸಹಿತ ಅಧಿಕೃತವಾಗಿ ಸಾರ್ವಜನಿಕ ಮಾಡಿದ್ದಾರೆ. ಇದಕ್ಕೆ ಪಾರ ಪತ್ರಮ್ ಎಂದು ಮತ್ತು ಇಂಗ್ಲಿಷ್ನಲ್ಲಿ ಪಾಸ್ಪೋರ್ಟ್ ಎಂದೇ ಕರೆಯಲಾಗಿದೆ.
ರಾಷ್ಟ್ರೀಯ ಚಿಹ್ನೆಗಳ ಘೋಷಣೆ ಸಹಿತ ಮಾಡಿದ್ದಾರೆ ಈ ಕೈಲಾಸ ದೇಶದ ವಿವಿಧ ರಾಷ್ಟ್ರೀಯ ಚಿಹ್ನೆಗಳು ಯಾವವು ಎಂಬುದನ್ನು ನೋಡುವ.
ರಾಷ್ಟ್ರೀಯ ಹೂವು – ಕಮಲ
ರಾಷ್ಟ್ರೀಯ ಪ್ರಾಣಿ- ನಂದಿ
ರಾಷ್ಟ್ರೀಯ ವೃಕ್ಷ- ಆಲದ ಮರ
ರಾಷ್ಟ್ರೀಯ ಬ್ಯಾಂಕ್- ರಿಸರ್ವ್ ಬ್ಯಾಂಕ್ ಆಫ್ ಕೈಲಾಶ್.
ರಾಷ್ಟ್ರೀಯ ಚಿಹ್ನೆ- ಪರಮಶಿವ
ಯಾರಾಗಬಹುದು ಈ ದೇಶದ ನಾಗರಿಕ?
ಈ ದೇಶದ ನಾಗರಿಕತ್ವವನ್ನು ಸ್ವೀಕರಿಸುವ ಸಲುವಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುವುದು. ಅದರಲ್ಲಿ ಮೊದಲನೆಯದಾಗಿ ಈ ದೇಶಕ್ಕಾಗಿ ದೇಣಿಗೆ ಕೊಡಬೇಕಾಗುವುದು. ಜೊತೆಗೆ ಸನಾತನ ಧರ್ಮದ ರಕ್ಷಣೆಯನ್ನು ಮಾಡುವ ಉದ್ದೇಶವನ್ನು ಹೊಂದಿರಬೇಕು. ಇಲ್ಲಿ ಜಗತ್ತಿನ ಎಲ್ಲಾ ಹಿಂದುಗಳಿಗೆ ಸ್ವಾಗತವಿದೆ ಎಂದು ನಿತ್ಯಾನಂದರು ಹೇಳುತ್ತಾರೆ. ಇಲ್ಲಿಯ ಅರ್ಥವ್ಯವಸ್ಥೆಯು ಧಾರ್ಮಿಕ ಅರ್ಥವ್ಯವಸ್ಥೆಯ ಮೇಲೆ ನಿಲ್ಲಿಸಲಾಗುವುದು ಎಂಬ ವಿಚಾರವನ್ನು ಹೇಳಿದ್ದಾರೆ. ಆದರೆ ಅದರ ಸ್ವರೂಪದ ಬಗ್ಗೆ ಯಾವುದೇ ಮಾಹಿತಿ ಇಲ್ಲಿಯವರೆಗೆ ತಿಳಿದುಬಂದಿಲ್ಲ. ಇಲ್ಲಿ ಅಕ್ಷರದಾಸೋಹ ದಿಂದ ಹಿಡಿದು ಅನ್ನದಾಸೋಹದ ವರೆಗೆ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಸ್ವಾಮಿಗಳು ಹೇಳುತ್ತಾರೆ.
ಇಷ್ಟೆಲ್ಲಾ ಆದಮೇಲೆ ನಿತ್ಯಾನಂದ ಸ್ವಾಮಿಗಳ ವಿಚಾರವನ್ನು ಸ್ವಲ್ಪ ಬದಿಗಿಟ್ಟು ದೇಶ ಹೇಗೆ ನಿರ್ಮಾಣವಾಗುತ್ತದೆ ಅಥವಾ ದೇಶ ತಯಾರಾಗಲು ಬೇಕಾದ ಅರ್ಹತೆಗಳೇನು ಎಂಬುದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳುವ.
ರಾಜ್ಯಶಾಸ್ತ್ರದ ಅಭ್ಯಾಸದ ಪ್ರಕಾರ, ನಿಶ್ಚಿತವಾದ ಭೂಪ್ರದೇಶ, ಜನಸಂಖ್ಯೆ, ಸರಕಾರದ ವ್ಯವಸ್ಥೆ, ಮತ್ತು ಪ್ರಜಾಪ್ರಭುತ್ವ ಎಲ್ಲ ವಿಷಯಗಳಿಂದ ಕೂಡಿ ದೇಶ ತಯಾರಾಗುತ್ತದೆ. ಇನ್ನು ರಿಸರ್ವ್ ಬ್ಯಾಂಕ್ ವಿಷಯದ ಬಗ್ಗೆ ತಿಳಿಯುವುದಾದರೆ, ಯಾವುದೇ ದೇಶದಲ್ಲಿ ರಿಸರ್ವ್ ಬ್ಯಾಂಕ್ ತಯಾರಿಸಬೇಕಾದರೆ ಅಥವಾ ರಿಸರ್ವ್ ಬ್ಯಾಂಕ್ ಹೊಂದಬೇಕಾದರೆ ಅಲ್ಲಿ ಸಾರ್ವಭೌಮ ಸಂಸತ್ತು ಇರಬೇಕಾದದ್ದು ಅಗತ್ಯ. ಅದಕ್ಕೆ ಯುನೋ ದ ಮಾನ್ಯತೆ ಇರಬೇಕು. ಅಂದಾಗ ಇದರ ಮೇಲಿಂದ ಇದೆಲ್ಲವೂ ಸತ್ಯ ಅಥವಾ ಸುಳ್ಳು ನೀವೇ ನಿರ್ಧರಿಸಿ.

ಇಷ್ಟಕ್ಕೂ ನಿತ್ಯಾನಂದ ಸ್ವಾಮಿಗಳು ಕೈಲಾಶ್ ಹೆಸರಿನ ಹೊಸ ದೇಶವೊಂದನ್ನು ನಿರ್ಮಿಸುವುದರ ಬಗ್ಗೆ ಎಲ್ಲ ಮೀಡಿಯಾಗಳು ಹೇಳಿದ್ದೇ ಹೇಳಿದ್ದು. ಆದರೆ ಮುಂಬರುವ ದಿನಗಳಲ್ಲಿ ನಿತ್ಯಾನಂದ ಸ್ವಾಮಿಗಳು ತಯಾರಿಸಿದ ಕೈಲಾಸ ದೇಶದ ಬಗ್ಗೆ ಇನ್ನು ಯಾವ ರೀತಿಯ ಸುದ್ದಿಗಳು ಬರುತ್ತವೆ ಕಾದು ನೋಡಬೇಕು.