ನಿತ್ಯೋತ್ಸವದ ಉತ್ಸವಕ್ಕೆ ತೆರೆ!! K S ನಿಸಾರ್ ಅಹಮದ್ ಇನ್ನಿಲ್ಲ!!

ಕನ್ನಡದ ಖ್ಯಾತ ಕವಿ “ನಿತ್ಯೋತ್ಸವ ಕವಿ” ಎಂದೇ ಕನ್ನಡಿಗರಿಗೆ ಚಿರಪರಿಚಿತರಾದ ಹೆಮ್ಮೆಯ ಕನ್ನಡದ ಮಣ್ಣಿನ ಮತ್ತು ತಮ್ಮ ರಸವತ್ತಾದ ಹಾಡುಗಳಿಂದ ಕನ್ನಡಿಗರ ಮನಮನದಲ್ಲಿ ಸ್ಥಾನ ಪಡೆದು ಕೊಂಡಿರುವ K S ನಿಸಾರ ಅಹಮದ್(83) ಇಂದು ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ಬೆಂಗಳೂರಿನ ಸಮೀಪ ದೇವನಹಳ್ಳಿಯಲ್ಲಿ 5 ಫೆಬ್ರುವರಿ 1936 ರಲ್ಲಿ ಜನಿಸಿದ್ದರು.ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಮುಗಿಸಿ ಅನೇಕ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ನಂತರ ತಮ್ಮ ಮನೆಯಲ್ಲೇ ಕೊನೆಯ ಉಸಿರು ಎಳೆದರು.