ನಿಮಗೆ ಗೊತ್ತಾ? ಚಲನಚಿತ್ರಗಳ ಶೂಟಿಂಗ್ ಮುಗಿದ ನಂತರ ನಟ-ನಟಿಯರು ತೊಟ್ಟ ಬಟ್ಟೆಗಳನ್ನು ಏನು ಮಾಡುತ್ತಾರೆ?

ಎರಡೂವರೆ ಮೂರು ಗಂಟೆಯ ಒಂದು ಚಲನಚಿತ್ರವನ್ನು ತಯಾರಿಸಬೇಕಾದರೆ 6 ತಿಂಗಳು, ವರ್ಷ, ಒಮ್ಮೊಮ್ಮೆ ಎರಡೆರಡು ವರ್ಷಗಳವರೆಗೆ ಶೂಟಿಂಗ್ ನಡೆಯುತ್ತದೆ. ಶೂಟಿಂಗ್ ನಡೆಯುವ ಅನೇಕ ಸಲ ರಿಟೇಕ್ ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿಯೊಂದು ಸೀನ್ ಗಳನ್ನು ಶೂಟ್ ಮಾಡಬೇಕಾದರೆ ಡ್ರೆಸ್ ಡಿಸೈನರ್ ಗಳ ಸಹಾಯ ತೆಗೆದುಕೊಳ್ಳಬೇಕಾಗುತ್ತದೆ. ಎಷ್ಟೋ ಸಲ ಒಂದೇ ಹಾಡಿನ ಶೂಟಿಂಗ್ ಕಂಪ್ಲೀಟ್ ಮಾಡಿಕೊಳ್ಳುವ ಸಲುವಾಗಿ ನಟ-ನಟಿಯರು ಎಂಟು ಹತ್ತು ಸಲ ಒಮ್ಮೊಮ್ಮೆ ಅದಕ್ಕೂ ಹೆಚ್ಚು ಬಾರಿ ತಮ್ಮ ಬಟ್ಟೆಗಳನ್ನು ಬದಲಾಯಿಸುತ್ತಾರೆ.

ಈ ಚಲನಚಿತ್ರಗಳಲ್ಲಿ ನಟ-ನಟಿಯರು ತೊಟ್ಟ ಬಟ್ಟೆಗಳನ್ನು ಮುಂದೆ ಏನು ಮಾಡುತ್ತಾರೆ? ಎಂಬ ಪ್ರಶ್ನೆ ಒಮ್ಮೆಯಾದರೂ ನಿಮ್ಮ ಮನಸ್ಸಿನಲ್ಲಿ ಹುಟ್ಟಿರಬಹುದು ಅಲ್ವಾ? ಈ ಲೇಖನದಲ್ಲಿ ನಿಮ್ಮ ಇದೇ ಪ್ರಶ್ನೆಗೆ ಉತ್ತರವನ್ನು ಹುಡುಕಿ ತಂದಿದ್ದೇವೆ, ಮುಂದೆ ಓದಿ ಹಾಗಾದರೆ.

ಬಟ್ಟೆಗಳು ಎಲ್ಲಿಂದ ಬರುತ್ತದೆ?

ಚಲನಚಿತ್ರಗಳಿಗಾಗಿ ಹಾಗೂ ಟಿವಿ ಧಾರಾವಾಹಿಗಳಿಗಾಗಿ ಬಟ್ಟೆಗಳನ್ನು, ಉಡುಪುಗಳನ್ನು ಪ್ರೊಡಕ್ಷನ್ ಹೌಸ್ ಪೂರೈಕೆ ಮಾಡುತ್ತದೆ. ಇದರ ಬದಲಾಗಿ ಪ್ರೊಡಕ್ಷನ್ ಹೌಸ್ ಬಾಡಿಗೆಯ ರೂಪದಲ್ಲಿ ಹಣವನ್ನು ತೆಗೆದುಕೊಳ್ಳುತ್ತದೆ. ನಟಿಯರು ತೊಟ್ಟುಕೊಳ್ಳುವ ಬ್ಲೌಸ್ ಮತ್ತು ಇನ್ನಿತರ ಬಟ್ಟೆಗಳು ಸಾಮಾನ್ಯ ಸೈಜಿನದಾಗಿರುತ್ತವೆ. ಹೀಗಾಗಿ ಶೂಟಿಂಗ್ ನಂತರ ನಟಿಯರ ಆಕಾರಕ್ಕೆ ತಕ್ಕಂತೆ ಅವುಗಳನ್ನು ಹೆಚ್ಚು ಕಡಿಮೆ ಮಾಡಿ ಉಪಯೋಗಿಸಲಾಗುತ್ತದೆ.

ಈ ಬಟ್ಟೆಗಳನ್ನು ಮತ್ತೆ ಮತ್ತೆ ಉಪಯೋಗ ಮಾಡುತ್ತಾರೆಯೇ?

ಬಹಳಷ್ಟು ಸಲ ಉಪಯೋಗಿಸಿದ ಬಟ್ಟೆಗಳನ್ನು ಮತ್ತೆ ಮತ್ತೆ ಉಪಯೋಗ ಮಾಡಲಾಗುತ್ತದೆ. ಪ್ರೊಡಕ್ಷನ್ ಹೌಸ್ ಬಟ್ಟೆಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತದೆ. ಹಾಗೂ ಶೂಟಿಂಗ್ ನಂತರ ಅವುಗಳನ್ನು ಚೆನ್ನಾಗಿ ತೆಗೆದು ಇಡಲಾಗುತ್ತದೆ. ಎಷ್ಟೋ ಸಲ ಸೈಡ್ ಆರ್ಟಿಸ್ಟ್ ಗಳು ಆ ಉಪಯೋಗಿಸಿದ ಬಟ್ಟೆಗಳಲ್ಲಿ ಕಂಡುಬರುತ್ತಾರೆ. ಒಮ್ಮೆ ಶೂಟಿಂಗ್ ಮುಗಿದ ನಂತರ ಆ ಬಟ್ಟೆಗಳನ್ನು ಉಪಯೋಗಿಸುವುದೇ ಇಲ್ಲ ಎಂದು ತಿಳಿಯಬೇಡಿ.

ಈ ಬಟ್ಟೆಗಳನ್ನು ಮನೆಗೆ ತೆಗೆದುಕೊಂಡು ಹೋಗಲಾಗುತ್ತದೆ-

ಕೆಲವೊಂದು ಸಲ ಶೂಟಿಂಗ್ ಸಮಯದಲ್ಲಿ ತುಂಬಾ ವಿಶೇಷವಾದ ಪ್ರಸಂಗಗಳು ನಡೆಯುತ್ತವೆ. ಅವುಗಳ ಸವಿನೆನಪಿಗಾಗಿ ನಟ ಅಥವಾ ನಟಿಯರು ಅಂಥ ಬಟ್ಟೆಗಳನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗುತ್ತಾರೆ.

ಕೆಲವೊಮ್ಮೆ ಈ ಬಟ್ಟೆಗಳಿಗಾಗಿ ಹರಾಜು ನಡೆಯುತ್ತದೆ.

ಅನೇಕ ಡಿಸೈನರ್ಸ್ ಗಳ ಬಟ್ಟೆಗಳನ್ನು ಡಿಸೈನರ್ ಬ್ರಾಂಡ್ ಎಂದು ಉಪಯೋಗಿಸುತ್ತಾರೆ. ಅನೇಕ ಬಾರಿ ಈ ವಿಶೇಷವಾದ ಬಟ್ಟೆಗಳನ್ನು ಹರಾಜು ಮಾಡಲಾಗುತ್ತದೆ. ಎಷ್ಟೋ ಸಲ ಈ ನಟ ನಟಿಯರು ತೊಟ್ಟ ಬಟ್ಟೆಗಳು ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತವೆ. ಅಂಥ ಸಂದರ್ಭದಲ್ಲಿ ಅಭಿಮಾನಿಗಳಿಗೆ ಇಷ್ಟವಾದ ಬಟ್ಟೆಗಳನ್ನು ಹರಾಜು ಮಾಡಲಾಗುತ್ತದೆ. ಇಲ್ಲಿ ತುಂಬಾ ಹೆಚ್ಚು ಬಲೆಗೆ ಈ ಬಟ್ಟೆಗಳು ಮಾರಾಟವಾಗುತ್ತವೆ.