ನಿಮಗೆ ಹೆಸರಾಂತ ಕಂಪೆನಿಗಳಲ್ಲಿ ಜಾಬ್ ಬೇಕಾ? ಈ ಗೂಗಲ್ ಕೋರ್ಸ್‌ಗಳು ಖಂಡಿತವಾಗಿಯೂ ನಿಮಗೆ ನೌಕರಿ ನೀಡುತ್ತವೆ……!!!
ಈ ಸ್ಪರ್ಧೆಯ ಯುಗದಲ್ಲಿ ಕೆಲಸ ಸಿಗುವುದು ಕಷ್ಟಕರವಾಗಿದೆ. ಇದರ ಎಲ್ಲಕ್ಕೂ ಮುಖ್ಯ ಕಾರಣ ವೆಂದರೆ ವಿವಿಧ ಪ್ರಕಾರದ ನೌಕರಿಯ ಸಲುವಾಗಿ ವಿವಿಧ ಪ್ರಕಾರದ ಕೌಶಲ್ಯಗಳು ಇರುತ್ತವೆ. ಈ ಕೌಶಲ್ಯಗಳ ಪ್ರಭಾವದಿಂದ ಅನೇಕ ಸಲ ಅಭ್ಯರ್ಥಿಗಳಿಗೆ ನೌಕರಿ ಸಿಗುತ್ತಿರುತ್ತವೆ. ಆದರೆ ಗೂಗಲ ಈ ವಿಷಯದ ಕುರಿತು ದೋಷ ನೀಡುವ ಬದಲಾಗಿ ಇದಕ್ಕೆ ಸಮಾಧಾನ ಹುಡುಕಿದೆ. ಆದ್ದರಿಂದ ಗೂಗಲ್ ಈ ವಿವಿಧ ಪ್ರಕಾರದ ಕೌಶಲ್ಯಗಳ ಕೋರ್ಸ್ ರಚನೆ ಮಾಡಿ ಅವುಗಳ ಸಲುವಾಗಿ ಸರ್ಟಿಫಿಕೇಟ್ ಸಹ ನೀಡುತ್ತದೆ. ಈ ಎಲ್ಲ ಕೋರ್ಸಗಳು ಆನ್ಲೈನ್ ಪದ್ಧತಿಯಲ್ಲಿ ಉಪಲಬ್ಧ ಮಾಡಿಕೊಟ್ಟಿದೆ. ಈ ಅಭ್ಯಾಸಕ್ರಮ ಪ್ರಾರಂಭ ಮಾಡಿದ್ದಾಗಿನಿಂದ ಯಾವುದೇ ಅನುಭವವಿಲ್ಲದೆ ಮತ್ತು ಯಾವುದೇ ಪ್ರಕಾರದ ಡಿಗ್ರಿ ಪಡೆಯದೆ ನೇರವಾಗಿ ಉತ್ತಮ ಕಂಪನಿಯಲ್ಲಿ ನೌಕರಿ ದೊರೆಯುವ ಅವಕಾಶ ಉಪಲಬ್ಧವಾಗುತ್ತದೆ ಎಂದು ಗೂಗಲ್ ತಿಳಿಸಿದೆ.
ಈ ಅಭ್ಯಾಸಕ್ರಮ ವಿವಿಧ ಉದ್ಯೋಗಗಳಲ್ಲಿಯ ಕಾರ್ಯಪ್ರಣಾಲಿ ಲಕ್ಷ್ಯದಲ್ಲಿ ತಗೆದುಕೊಂಡು ಅಭ್ಯರ್ಥಿಗಳಿಗೆ ಆ ಕಾರ್ಯದ ಸಲುವಾಗಿ ತರಬೇತಿ ನೀಡುವ ಉದ್ದೇಶದಿಂದ ರಚನೆ ಮಾಡಲಾಗಿದೆ. ಐಟಿ ದಿಂದ ಬಿಜ್ನೆಸ್ ವರೆಗಿನ ಅನೇಕ ವಿಷಯಗಳು ಈ ಅಭ್ಯಾಸಕ್ರಮದಲ್ಲಿ ಅಳವಡಿಸಿಲಾಗಿದ್ದು ನಿಮಗೆ ಇಷ್ಟವಾದ ಕೋರ್ಸ್ ನ್ನು ನೀವು ಆಯ್ಕೆ ಮಾಡಬಹುದು. ಈ ಆನ್‌ಲೈನ್ ಕೋರ್ಸ್‌ಗಳು ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರಿಗೆ ಅತ್ಯಂತ ಸಹಾಯಕವಾಗಿವೆ. ವಿಶೇಷವೆಂದರೆ ಈ ಕೋರ್ಸ್ ಪೂರ್ಣಗೊಳಿಸಲು ಯಾವುದೇ ಪೈಪೋಟಿ ಇಲ್ಲ. ನಾವು ನಮ್ಮದೇ ವೇಗದಲ್ಲಿ ಕೋರ್ಸ್ ನ್ನು ಪೂರ್ಣಗೊಳಿಸಬಹುದು. ಹೊಸ ಕ್ಷೇತ್ರದ ಮಾಹಿತಿಯನ್ನು ಕಡಿಮೆ ಅವಧಿಯಲ್ಲಿ ತಿಳಿಸುವ ಪ್ರಯತ್ನ ಇದಾಗಿದೆ. ಗೂಗಲ್‌ನಂತಹ ಪ್ರತಿಷ್ಠಿತ ಕಂಪನಿಯಿಂದ ಈ ಕೋರ್ಸ್‌ಗಳನ್ನು ರಚನೆ ಮಾಡಿದ್ದರಿಂದ ಖಂಡಿತವಾಗಿಯೂ ನಿಮಗೆ ಉದ್ಯೋಗ ಪಡೆಯಲು ಸಹಾಯ ಮಾಡುತ್ತವೆ. ಈ ವೃತ್ತಿಪರ ತರಬೇತಿ ನೀಡುವ ಕೋರ್ಸ್‌ಗಳು ವಿವಿಧ ಎಡ್ ಟೆಕ್ ಪ್ಲೇಟ್ ಫಾರ್ಮ್ ಗಳಲ್ಲಿ ಉಪಲಬ್ಧವಿವೆ. ಕೋರ್ಸ್ ಪೂರ್ಣ ಮಾಡಿದ ನಂತರ Google ನಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಕೋರ್ಸ್‌ಗಳು ಇಲ್ಲಿವೆ…..
1 Google UX Design Professional Certificate Google UX
ಈ ಡಿಸೈನ್ ಪ್ರೊಫೆಷನಲ್ ಪ್ರಮಾಣಪತ್ರ ಕೋರ್ಸ್ ಮೂಲಕ ಎಕ್ಸಪಿರಿಯನ್ಸ್ ಡಿಸೈನರ್, ಯುಜರ್ ಇಂಟರಫೆಸ್ ಡಿಸೈನರ್ ಅಲ್ಲದೆ ವ್ಹಿಜ್ಯುಅಲ್ ಡಿಸೈನರ್ ಆಗಲು ತರಬೇತಿ ನೀಡಲಾಗುತ್ತದೆ. ಕೋರ್ಸ್‌ಗೆ ಪ್ರವೇಶ ಪಡೆಯಲು ನಿಮಗೆ ಪದವಿ ಅಥವಾ ಯಾವುದೇ ಪೂರ್ವ ಅನುಭವದ ಅಗತ್ಯವಿಲ್ಲ. ಇದರಲ್ಲಿ ವಾಯರ್ ಫ್ರೆಮ್, ಲೋ-ಫಿಡೆಲಿಟಿ ಪ್ರೊಟೊಟೈಪಿಂಗ್, UX ಸಂಶೋಧನೆ ಹೇಗೆ ಮಾಡುವದು ಮುಂತಾದವುಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಇದು ಸುಮಾರು 200 ತಾಸಿನ ಸ್ಟಡಿ ಪ್ರೋಗ್ರಾಮ್ ಇದೆ.
2 Google Project Management Professional Certificate
ಇದು ಸುಮಾರು 140 ತಾಸಿನ ಸ್ಟಡಿ ಪ್ರೋಗ್ರಾಮ್ ಇದೆ. ಆರು ತಿಂಗಳಿಗಿಂತ ಕಡಿಮೆ ಕಾಲಾವಧಿಯಲ್ಲಿ ಎಂಟ್ರಿ-ಲೇವಲ್ ಪ್ರೊಜೆಕ್ಟ್ ಮ್ಯಾನೇಜ್ಮೆಂಟ್ ರೋಲ್ ಶುರು ಮಾಡುವ ಸಲುವಾಗಿ ಅವಶ್ಯಕ ಕೌಶಲ್ಯಗಳು ಇದರಲ್ಲಿ ಕಲಿಸಲಾಗುತ್ತದೆ. ಪ್ರೊಜೆಕ್ಟ್ ನಿರ್ಮಾಣ, ಯೋಜನೆ, ಪ್ರತ್ಯಕ್ಷ ಕಾರ್ಯಾಚರಣೆ ಮಾಡುವದನ್ನು ಸಹ ಈ ಕೋರ್ಸ್ ನಲ್ಲಿ ಕಲಿಯಲು ದೊರೆಯುತ್ತದೆ. ಇದರಲ್ಲಿ ಪ್ರೊಜೆಕ್ಟ್ ಮ್ಯಾನೇಜರ್ , ಸ್ಕ್ರಮ್ ಮಾಸ್ಟರ್ಸ್, ಪ್ರೋಗ್ರಾಮ್ ಮ್ಯಾನೇಜರ ಮತ್ತು ಪ್ರೊಜೆಕ್ಟ್ ಅನಾಲಿಸ್ಟ್ ನ ಜವಾಬ್ದಾರಿಗಳ ಸಮಾವೇಶ ಈ ಕೋರ್ಸ್ ನಲ್ಲಿ ಮಾಡಲಾಗಿದೆ.
3 Google Data Analytics Professional Certificate
ಇದರ ಮೂಲಕ ವ್ಯವಸಾಯದ ನಿರ್ಣಯ ತಗೆದುಕೊಳ್ಳಲು ಸಹಾಯ ಮಾಡುವ ಸಲುವಾಗಿ ಡೇಟಾದ ಪ್ರಕ್ರಿಯೆ ಮತ್ತು ವಿಶ್ಲೇಷಣೆ ಮಾಡುವ ತರಬೇತಿ ಇಲ್ಲಿ ನೀಡಲಾಗುತ್ತದೆ. ಈ ಕೋರ್ಸ್ ಮಾಡುವ ಸಲುವಾಗಿ ಯಾವುದೇ ಅನುಭವದ ಅವಶ್ಯಕತೆ ಇಲ್ಲದಿದ್ದರೂ ಸಹ, ವ್ಯವಸ್ಥಿತವಾಗಿ ಆಕಲನದ ಸಲುವಾಗಿ Google Analytic ನ ಮೂಲಭೂತ ಮಾಹಿತಿ ಇರುವದು ಈ ಅಭ್ಯಾಸದ ಸಲುವಾಗಿ ಅವ್ಯಶ್ಯಕವಾಗಿದೆ. ಅಸೋಷಿಯಟ್ ಡೇಟಾ ಅನಾಲಿಸ್ಟ್, ಡೇಟಾ ತಂತ್ರಜ್ಞ ಮತ್ತು ಮಾರ್ಕೆಟಿಂಗ್ ಅನಾಲಿಸ್ಟ್ ಈ ತರಹದ ನೌಕರಿ ಮಾಡಲು ಬೇಕಾಗುವ ಕೌಶಲ್ಯಗಳ ಮಾಹಿತಿ ಈ ಕೋರ್ಸ್ ಮುಖಾಂತರ ದೊರೆಯುತ್ತದೆ. ಅಭ್ಯಾಸಕ್ರಮ ಪೂರ್ಣ ಮಾಡಿದ ನಂತರ ಪ್ರಮಾಣಪತ್ರದ ಸಲುವಾಗಿ ಪ್ರತಿಯೊಂದು ಮೌಲ್ಯಮಾಪನದ ಮೇಲೆ 80 % ಅಥವಾ ಅದಕ್ಕಿಂತ ಹೆಚ್ಚು ಗುಣಗಳು ಗಳಿಸುವದು ತುಂಬಾ ಅವಶ್ಯಕವಾಗಿದೆ.
4 Associate Android developer certificate
ಈ ಕೋರ್ಸ್ ಗೂಗಲ್ ಆಫರ್ ಮಾಡಿದೆ. ಈ ಕೋರ್ಸ್ ನಲ್ಲಿ ಕೋಟಲಿನ್ ಪ್ರೋಗ್ರಾಮಿಂಗ್ ಭಾಷೆಯ್ ಮೂಲಭೂತ ವಿಷಯ ಮತ್ತು android ಅಪ್ಸ್ ವಿಕಸಿತ ಮಾಡುವದು, ಚಾಚಣಿ ಮಾಡುವದು ಮತ್ತು ಡಿಬಗ್ ಮಾಡುವದು ಈ ಕುರಿತು ಕಲಿಸಲಾಗುತ್ತದೆ. ಇಲ್ಲಿ ನೀವು ಆಂಡ್ರಾಯ್ಡ್ ಕೆಯರ್, ಯುಜರ್ ಇಂಟರಫೆಸ್, ಡೇಟಾ ಮ್ಯಾನೇಜ್ಮೆಂಟ್, ಡಿಬಗಿಂಗ್ ಮತ್ತು ಟೆಸ್ಟಿಂಗ್ ಇಂತಹ ಪ್ರಕಾರದ ಅವಶ್ಯಕ ವಿಷಯಗಳನ್ನು ನೀವು ಕಲಿಯಬಹುದು.