ನಿಮ್ಮದೇ ಆದ ಬ್ಯುಸಿನೆಸ್ ಆರಂಭಿಸುವ ಆಲೋಚನೆ ಇದ್ದರೆ, 25 ಸಾವಿರದಲ್ಲಿ ಈ ಉದ್ಯಮ ಆರಂಭಿಸಿ, 1.40 ಲಕ್ಷ ಲಾಭ ಗಳಿಸಬಹುದು!
ನೀವೊಂದು ಉತ್ತಮವಾದ ಬ್ಯುಸಿನೆಸ್ ಆರಂಭಿಸುವ ಆಲೋಚನೆಯನ್ನು ಮಾಡುತ್ತಿದ್ದರೆ, ನೀವು ಅವಲಕ್ಕಿ ತಯಾರಿಸುವ ಒಂದು ಘಟಕವನ್ನು ಪ್ರಾರಂಭಿಸಬಹುದಾಗಿದೆ. ಅವಲಕ್ಕಿಯನ್ನು ಒಂದು ಪೌಷ್ಟಿಕ ಆಹಾರ ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಅವಲಕ್ಕಿಯನ್ನು ಲಘು ಉಪಾಹಾರದಲ್ಲಿ ಮತ್ತು ಬೆಳಗಿನ ತಿಂಡಿಯಾಗಿ ಹೆಚ್ಚು ಬಳಸಲಾಗುತ್ತದೆ. ಅವಲಕ್ಕಿಯಿಂದ ಆಹಾರವನ್ನು ತಯಾರಿಸುವುದು ಸುಲಭ ಅದೇ ರೀತಿ ಜೀರ್ಣಿಸಿಕೊಳ್ಳುವುದು ಸಹ ಸುಲಭ. ಆದ್ದರಿಂದಲೇ ಮಾರುಕಟ್ಟೆಯಲ್ಲಿ ಅವಲಕ್ಕಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅವಲಕ್ಕಿಯನ್ನು ಉತ್ಪಾದನೆ ಮಾಡುವ ಘಟಕವನ್ನು ನೀವು ಸ್ಥಾಪನೆ ಮಾಡುವ ಮೂಲಕ ಒಂದು ಉತ್ತಮ ವ್ಯವಹಾರಕ್ಕೆ ಅಡಿಪಾಯವನ್ನು ಹಾಕಬಹುದಾಗಿದೆ. ಹಾಗಿದ್ದಲ್ಲಿ ಈ ವ್ಯವಹಾರವನ್ನು ಆರಂಭಿಸುವುದು ಹೇಗೆ?? ಮತ್ತು ಅದರಿಂದ ಆಗುವ ಲಾಭಗಳ ಕುರಿತಾಗಿ ಒಂದಷ್ಟು ಮಾಹಿತಿಯನ್ನು ತಿಳಿಯೋಣ.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಸಿದ್ಧಪಡಿಸಿದ ಯೋಜನೆಯ ವಿವರ ವರದಿಯ ಪ್ರಕಾರಣ ಅವಲಕ್ಕಿ ಉತ್ಪಾದನಾ ಘಟಕವನ್ನು ತೆರೆಯಲು 2.43 ಲಕ್ಷ ರೂಪಾಯಿಗಳ ಬಂಡವಾಳದ ಅವಶ್ಯಕತೆಯಿದ್ದು, ಇದರಲ್ಲಿ 90% ಸರ್ಕಾರದ ಕಡೆಯಿಂದ ಸಾಲವಾಗಿ ದೊರೆಯುತ್ತದೆ. ಅಂದರೆ ಈ ಘಟಕವನ್ನು ಸ್ಥಾಪನೆ ಮಾಡಲು ನೀವು ತೊಡಗಿಸಬೇಕಾದಂತಹ ಬಂಡವಾಳ ಕೇವಲ 25 ಸಾವಿರ ರೂಪಾಯಿಗಳು ಮಾತ್ರ. ಕೆವಿಐಸಿ ವರದಿಯ ಪ್ರಕಾರ ಕೇವಲ 2.43 ಲಕ್ಷಗಳ ಹೂಡಿಕೆಯೊಂದಿಗೆ ಸುಮಾರು 500 ಚದರ ಅಡಿ ಜಾಗದಲ್ಲಿ ಈ ಅವಲಕ್ಕಿ ಉತ್ಪಾದನಾ ಘಟಕವನ್ನು ಸ್ಥಾಪಿಸಬಹುದಾಗಿದೆ.
ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ನೀವು ಒಂದು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ನಂತರ ಅವಲಕ್ಕಿ ಯಂತ್ರ, ಜರಡಿ, ಪ್ಯಾಕಿಂಗ್ ಮಿಷನ್, ಡ್ರಮ್ ಇನ್ನಿತರೆ ವಸ್ತುಗಳಿಗಾಗಿ ಒಂದು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಹಾಇಗೆ ನಿಮ್ಮ ಒಟ್ಟು ಹೂಡಿಕೆಗಾಗಿ ಎರಡು ಲಕ್ಷ ರೂಪಾಯಿಗಳು ಖರ್ಚಾಗುತ್ತದೆ. ಇನ್ನು ಉಳಿದ 43 ಸಾವಿರ ರೂಪಾಯಿಗಳನ್ನು ಕಾರ್ಯನಿರತ ಬಂಡವಾಳವಾಗಿ ಖರ್ಚು ಮಾಡಲಾಗುತ್ತದೆ. ಯೋಜನಾ ವರದಿಯ ಪ್ರಕಾರ ಘಟಕವನ್ನು ಸ್ಥಾಪನೆ ಮಾಡಿದ ಮೇಲೆ ನೀವು ಕಚ್ಚಾ ವಸ್ತುಗಳನ್ನು ಖರೀದಿ ಮಾಡಬೇಕಾಗುತ್ತದೆ.
ಘಟಕ ಸ್ಥಾಪನೆಯ ನಂತರ ಸುಮಾರು 6 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗಿರುತ್ತದೆ, ಇದಲ್ಲದೇ ಸುಮಾರು 50 ಸಾವಿರ ರೂಪಾಯಿಗಳನ್ನು ಸಹ ನೀವು ಬೇರೆ ಕೆಲಸಗಳಿಗಾಗಿ ಖರ್ಚು ಮಾಡಬೇಕಾಗುತ್ತದೆ. ಹೀಗೆ ನೀವು ಸುಮಾರು 1000 ಕ್ವಿಂಟಾಲ್ ಅವಲಕ್ಕಿಯನ್ನು ಉತ್ಪಾದನೆ ಮಾಡಬಹುದಾಗಿರುತ್ತದೆ. ಇದಕ್ಕಾಗಿ ಉತ್ಪಾದನಾ ವೆಚ್ಚವು ಸುಮಾರು 8.60 ಲಕ್ಷ ರೂಪಾಯಿಗಳು ಆಗುತ್ತದೆ. 1000 ಕ್ವಿಂಟಾಲ್ ಅವಲಕ್ಕಿಯನ್ನು 10 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಬಹುದು. ಅಂದರೆ ಅವಲಕ್ಕಿಯ ಮಾರಾಟದಿಂದ 1.40 ಲಕ್ಷ ರೂಪಾಯಿಗಳ ಲಾಭವನ್ನು ಗಳಿಸಬಹುದು.
ಕೆವಿಐಸಿಯ ವರದಿಯ ಪ್ರಕಾರ ನೀವು ಯೋಜನಾ ವರದಿಯನ್ನು ಸಿದ್ಧಪಡಿಸಿದ ನಂತರ ಗ್ರಾಮೋದ್ಯೋಗ ಉದ್ಯೋಗ ಯೋಜನೆ ಅಡಿಯಲ್ಲಿ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿದರೆ, ನೀವು ಸಾಲದ 90% ಹಣವನ್ನು ಪಡೆಯಬಹುದಾಗಿರುತ್ತದೆ. ಗ್ರಾಮೀಣ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಹಾಗೂ ಗ್ರಾಮೀಣಾಭಿವೃದ್ಧಿಗಾಗಿ ಕೆವಿಐಸಿಯ ಪ್ರತಿವರ್ಷ ಸಾಲವನ್ನು ನೀಡುತ್ತದೆ. ನೀವು ಸಹ ಅವಶ್ಯಕತೆ ಇದ್ದರೆ ಈ ಸಾಲವನ್ನು ಸದುಪಯೋಗಪಡಿಸಿಕೊಳ್ಳುವ ಸದವಕಾಶವನ್ನು ಪಡೆಯುವ ಮೂಲಕ ಒಂದು ಉತ್ತಮ ಬ್ಯುಸಿನೆಸ್ ಸ್ಥಾಪನೆ ಮಾಡಬಹುದಾಗಿದೆ.