ನಿಮ್ಮಲ್ಲಿರುವ ಟ್ಯಾಲೆಂಟ್ ತೋರಿಸಿ ಎಂದು ಶಿಕ್ಷಕರು ಆದೇಶಿಸಿದಾಗ…ಈ ಮಕ್ಕಳ ಟ್ಯಾಲೆಂಟ್ ನೋಡಿ ನಕ್ಕು ನಕ್ಕು ಸುಸ್ತಾಗುವಿರಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳು ಕೆಲವೊಂದು ಸಲ ಹೊಟ್ಟೆ ಹುಣ್ಣಾಗುವಂತೆ ನಗಿಸಿ ಬಿಡುತ್ತವೆ. ಕೆಲವೊಂದು ಈ ವಿಡಿಯೋಗಳಿಂದ ಜೀವನದ ಪಾಠಗಳನ್ನು ಕಲಿಯುತ್ತೇವೆ, ಇನ್ನೂ ಕೆಲವೊಂದು ಸಲ ಈ ವಿಡಿಯೋಗಳು ಜೀವನವನ್ನು ನಗೆಗಡಲಲ್ಲಿ ತೇಲಿಸುತ್ತದೆ. ನಕ್ಕು ನಗಿಸುವ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮಕ್ಕಳ ಈ ವಿಡಿಯೋ ಸದ್ಯ ನೇಟಿಜನ್ಸ್ ಗಳ ಮನವನ್ನು ಗೆದ್ದಿದೆ. ಈ ವಿಡಿಯೋ ಇಷ್ಟವಾಗಿ ಎಷ್ಟೋ ಜನರು ಸೋಶಿಯಲ್ ಮೀಡಿಯಾದ ವಿವಿಧ ಪ್ಲಾಟ್ ಫಾರ್ಮ ಗಳಲ್ಲಿ ಶೇರ್ ಸಹ ಮಾಡುತ್ತಿದ್ದಾರೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಿದ್ಯಾರ್ಥಿಗಳು ವರ್ಗದಲ್ಲಿ ತಮ್ಮಲ್ಲಿರುವ ಕಲೆಯನ್ನು ತೋರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಮಾಡುವ ಈ ಕಲೆಯನ್ನು ನೋಡಿ ಎಲ್ಲರಿಗೂ ನಗು ತಡೆಯಲು ಸಾಧ್ಯವಾಗುತ್ತಿಲ್ಲ. ವಿಡಿಯೋದಲ್ಲಿ ನಾಲ್ಕು ವಿದ್ಯಾರ್ಥಿಗಳಿಗೆ ಶಿಕ್ಷಕರು ಕರೆದು ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಲು ಹೇಳುತ್ತಾರೆ. ಶಿಕ್ಷಕರ ಈ ಆದೇಶವನ್ನು ತಲೆಯ ಮೇಲೆ ಹೊತ್ತು ಮಕ್ಕಳು ತಮ್ಮಲ್ಲಿರುವ ಕಲೆಯನ್ನು ತೋರಿಸಿದಾಗ ನೋಡುಗರಿಗೆ ಮಾತ್ರ ನಗು ತಡೆಯಲು ಸಾಧ್ಯವಾಗುವುದಿಲ್ಲ.

ವಿಡಿಯೋ ನೋಡಿ

ಈ ತಮಾಷೆಯ ವಿಡಿಯೋ ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ. ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬಾರಿ ಶೇರ್ ಸಹ ಮಾಡಿದ್ದಾರೆ. 32 ಸೆಕೆಂಡ್ ಗಳ ಈ ವಿಡಿಯೋ ತುಂಬಾ ಮಜವಾಗಿದೆ. ವಿಡಿಯೋದಲ್ಲಿ ಮೊದಲ ವಿದ್ಯಾರ್ಥಿಯು ನಾಯಿ ಬೊಗಳುವ ಶಬ್ದವನ್ನು ತೆಗೆಯುತ್ತಾನೆ. ತದನಂತರ ಉಳಿದ ವಿದ್ಯಾರ್ಥಿಗಳು ಸಹ ನಾಯಿಯು ಬೊಗಳುವ ಬೇರೆ ಬೇರೆ ಸ್ಟೈಲ್ ನ ಶಬ್ದ ಮಾಡಿ ತೋರಿಸುತ್ತಾರೆ. ಪ್ರತಿಯೊಂದು ವಿದ್ಯಾರ್ಥಿ ಬೇರೆಯಾದ ರೀತಿಯಲ್ಲಿ ಬೊಗಳುತ್ತಿರುವಾಗ ನಿಜವಾಗಿಯೂ ತುಂಬಾ ತಮಾಷೆಯಾಗಿ ಕಂಡು ಕೇಳಿಬರುತ್ತದೆ. ಕೊನೆಯ ವಿದ್ಯಾರ್ಥಿಯಂತೂ ಸೇಮ್ ಟು ಸೇಮ್ ನಾಯಿಮರಿಯು ಬೊಗಳುವ ಹಾಗೆಯೇ ಶಬ್ದ ಮಾಡಿ ತೋರಿಸಿದ್ದಾನೆ. ಆಗಂತೂ ನಗು ತಡೆದು ಕೊಳ್ಳುವದು ಸಾಧ್ಯವೇ ಆಗುವುದಿಲ್ಲ.