ನಿಮ್ಮ ಪ್ಲ್ಯಾನ್ ಗಿಂತ ಉತ್ತಮವಾದ ಪ್ಲ್ಯಾನ್ ದೇವರು ಮೊದಲೇ ಮಾಡಿರುತ್ತಾನೆ, ‘ದೇವರ ಆಟ ಬಲ್ಲವರಾರು’ ವಿಡಿಯೋ ನೋಡಿ!!!
ಸೋಶಿಯಲ್ ಮೀಡಿಯಾದಲ್ಲಿ ನಂಬಲು ಅಸಾಧ್ಯವಾದ ಕೆಲವೊಂದು ವಿಡಿಯೋಗಳು ಆಗಾಗ ಶೇರ್ ಆಗುತ್ತಿರುತ್ತವೆ. ಈ ವಿಡಿಯೋಗಳನ್ನು ನೋಡಿದಾಗ ನಿಜಕ್ಕೂ ನಮ್ಮ ಕಣ್ಣುಗಳಿಗೆ ವಿಶ್ವಾಸವಿಡಲು ಸಾಧ್ಯವೇ ಆಗುವುದಿಲ್ಲ. ಅಷ್ಟೊಂದು ಕನ್ಫ್ಯೂಸ್ ಮಾಡುತ್ತವೆ ಈ ವಿಡಿಯೋಗಳು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ತುಂಬಾ ರೋಚಕತೆಯಿಂದ ಕೂಡಿದೆ. ಈ ವಿಡಿಯೋ ನೋಡಿದಾಗ ಪ್ರಸ್ತುತ ರಸ್ತೆಯಲ್ಲಿ ಏನಾದರೂ ಒಂದು ರಹಸ್ಯ ಅಡಗಿದೆಯೇನೋ ಎಂಬಂತೆ ಪ್ರಶ್ನೆ ಹುಟ್ಟುತ್ತದೆ. ವಿಡಿಯೋದಲ್ಲಿ ಕಾಣಿಸುವ ದೃಶ್ಯ ನೋಡಿದಾಗ ಇದು ಹೇಗೆ ಆಗಲು ಸಾಧ್ಯ ಎಂಬ ಪ್ರಶ್ನೆ ಹುಟ್ಟಿ ನೆಟ್ಟಿಗರು ಪ್ರಸ್ತುತ ವಿಡಿಯೋವನ್ನು ಮೇಲಿಂದ ಮೇಲೆ ನೋಡುತ್ತಿದ್ದಾರೆ.
ದೇವರು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಅನ್ನೋದು ನಮಗೇಲ್ಲ ಗೊತ್ತೆ ಇದೆ. ದೇವರು ಎಲ್ಲರಿಗೆ ಒಳ್ಳೆಯದನ್ನೇ ಬಯಸುತ್ತಾನೆ ಆದ್ರೆ ಅದಕ್ಕಾಗಿ ಒಳ್ಳೆಯ ಸಮಯ ಬರಬೇಕು ಅಷ್ಟೇ, ಇದಕ್ಕೆ ಅದ್ಭುತವಾದ ಉದಾರಣೆ ಎಂದರೆ ಈ ವಿಡಿಯೋ. ಈ ವಿಡಿಯೋ ದಲ್ಲಿ ನಡೆದ ಘಟನೆ ನಿಜಕ್ಕೂ ದೇವರು ಇದ್ದಾನೆ ಅಂತ ನೀವೇ ಹೇಳುವಿರಿ.
ಈ ವಿಡಿಯೋದಲ್ಲಿ ಇಬ್ಬರು ದಂಪತಿಗಳು ರಸ್ತೆಯ ಬದಿಯಲ್ಲಿ ಇದ್ದಂತ ಸ್ಟ್ರೀಟ್ ಲೈಟ್ ಕಂಬದ ಕೆಳಗಡೆ ನಿಂತು ಜಗಳ ಮಾಡುತ್ತಿರುತ್ತಾರೆ, ಅವರು ಯಾವ ಕಾರಣಕ್ಕಾಗಿ ಜಗಳ ಮಾಡುತ್ತಿದ್ದರು ಅನ್ನೋದು ಗೊತ್ತಿಲ್ಲ ಆದರೆ ಅವರು ಜಗಳ ವಾಡುವ ಪರಿ ನೋಡಿದರೆ ಇಬ್ಬರು ದೂರವಾಗುವಂತೆ ಜಗಳ ಮಾಡುತ್ತಿದ್ದರು. ಅಲ್ಲಿ ಅವರ ಜಗಳವನ್ನು ಬಿಡಿಸಲು ಯಾರೂ ಇರಲಿಲ್ಲ. ಆಗ ದೇವರು ಒಂದು ಚಮತ್ಕಾರ ಮಾಡುತ್ತಾನೆ. ಅದೇ ಸಮಯದಲ್ಲಿ ಒಬ್ಬ ಅಜ್ಜಿಯು ರಸ್ತೆಯ ಆ ಬದಿಯಿಂದ ಈ ಬದಿಗೆ ರಸ್ತೆ ಕ್ರಾಸ್ ಮಾಡುತ್ತಿರುತ್ತಾಳೆ. ರಸ್ತೆಯ ಮದ್ಯದಲ್ಲಿ ಬರುತ್ತಿದ್ದ ಹಾಗೆ ಅಜ್ಜಿಯ ಕೈಯಲ್ಲಿದ್ದ ಕೈಚೀಲ ದಲ್ಲಿದ್ದ ಹಣ್ಣುಗಳು ಕೆಳಗಡೆ ಬಿದ್ದು ಎಲ್ಲೆಡೆಗೆ ಹರಡುತ್ತವೆ. ಇದನ್ನು ಗಮನಿಸಿದ ಇಬ್ಬರು ದಂಪತಿಗಳು ಕೆಲವು ಸೆಕೆಂಡ್ ಹಾಗೆ ನಿಲ್ಲುತ್ತಾರೆ ತದನಂತರ ಪತ್ನಿ ಆ ಅಜ್ಜಿಯ ಸಹಾಯಕ್ಕೆ ಹೋಗುತ್ತಾಳೆ. ಪತ್ನಿ ಸಹಾಯ ಮಾಡಲು ಹೋದದನ್ನು ಕಂಡು ಪತಿಯು ಸಹ ಸಹಾಯ ಮಾಡಲು ಹೋಗುತ್ತಾನೆ. ಆತನು ಹೋದ ಕ್ಷಣದಲ್ಲೆಯೇ ಆತನು ನಿಂತಿದ್ದ ಜಾಗದ ಮೇಲೆ ಲೈಟ್ ದೊಪ್ಪನೆ ಬೀಳುತ್ತದೆ. ಈ ಘಟನೆ ನೋಡಿ ತುಂಬಾ ಹೆದರುತ್ತಾರೆ. ಏಕೆಂದರೆ ಒಂದು ವೇಳೆ ಇಬ್ಬರು ಸಹ ಅದೇ ಜಾಗದಲ್ಲಿಯೇ ನಿಂತು ಜಗಳ ವಾಡುತ್ತಿದ್ದರೆ ಪತಿಯ ತಲೆಯ ಮೇಲೆ ಬೀಳುತ್ತಿತ್ತು. ಇದನ್ನು ಕಂಡು ದೇವರಿಗೆ ಧನ್ಯವಾದಗಳು ತಿಳಿಸುವದರ ಜೊತೆಗೆ ಅಜ್ಜಿಗೂ ಕೂಡಾ ತುಂಬಾ ಥ್ಯಾಂಕ್ಸ್ ಹೇಳುತ್ತಾರೆ.
ವಿಡಿಯೋ ನೋಡಿ.
View this post on Instagram
ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ katil__lover__x2 ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಈ ಅದ್ಭುತವಾದ ಡ್ಯಾನ್ಸ್ ವಿಡಿಯೋವನ್ನು ಇದುವರೆಗೆ ಸುಮಾರು ಐವತ್ತು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಈ ಚಮತ್ಕಾರದ ವಿಡಿಯೋ ಕಂಡು ಸುಮಾರು ಎಂಬತ್ತು ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದಾರೆ