ನಿಮ್ಮ ವಾಹನದಲ್ಲಿ LPG/CNG ಅಳವಡಿಸುವ ವಿಚಾರ ಮಾಡುತ್ತಿದ್ದೀರಾ? ಹಾಗಾದರೆ ಮೊದಲು ಈ ವಿಡಿಯೋ ನೋಡಿ…
ಇವತ್ತಿನ ಸಮಯದಲ್ಲಿ ಇಂಧನ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರಿಂದ ವಾಹನ ಚಲಾಯಿಸುವದು ಮಾಲೀಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ಮುಕ್ತಿ ಪಡೆಯುವ ಸಲುವಾಗಿ ವಾಹನ ಮಾಲೀಕರು ಬದಲಿ ಉಪಾಯಗಳಾದಂಥ LPG ಅಥವಾ CNG ಟ್ಯಾಂಕ್ ಅಳವಡಿಸುವ ವಿಚಾರ ಮಾಡುತ್ತಾರೆ. ಇಂಧನ ಬೆಲೆ ಗಗನಕ್ಕೆ ಹೋಗಿ ಮುಟ್ಟುತ್ತಿರುವಾಗ ನಾಲ್ಕು ದುಡ್ಡು ಹೇಗಾದರೂ ಮಾಡಿ ಉಳಿತಾಯ ಮಾಡಿಕೊಳ್ಳುವ ಸಲುವಾಗಿ ಮತ್ತು ಕೆಲಸದಲ್ಲಿ ಹೆಚ್ಚುವರಿ ಲಾಭಗಳಿಸುವ ವಿಚಾರ ಮಾಡುವದರಲ್ಲಿ ಯಾವ ತಪ್ಪೂ ಇಲ್ಲವೆನಿಸುತ್ತದೆ.
ಆದರೆ ಇದನ್ನು ಮಾಡುವಾಗ ಸ್ವಂತದ ಪ್ರಾಣಕ್ಕೂ ಜೊತೆಗೆ ಇನ್ನೊಬ್ಬರ ಸುರಕ್ಷತೆಗೂ ಆದ್ಯತೆ ನೀಡುವುದು ಪ್ರಾಮುಖ್ಯ.
ಹಣ ಉಳಿಸುವ ಹಾಗೂ ಹೆಚ್ಚುವರಿ ಗಳಿಕೆಯ ವಿಚಾರ ಬರೀ ಇವುಗಳನ್ನೇ ಗಮನದಲ್ಲಿಟ್ಟು ಸರಿಯಾದ, ಉತ್ತಮ ಗುಣಮಟ್ಟವನ್ನು ಆಯ್ಕೆ ಮಾಡುವಲ್ಲಿ ವಿಫಲರಾಗಿದ್ದೇ ಆದರೆ ಅಲ್ಲಿ ಆರ್ಥಿಕ ನಷ್ಟದ ಜೊತೆಗೆ ಪ್ರಾಣ ಹಾನಿಯೂ ಸಂಭವಿಸುವುದು.
ಇಲ್ಲಿ ನೋಡುವ ಈ ವೈರಲ್ ವಿಡಿಯೋದಲ್ಲಿ ಕಂಡು ಬರುವ ಹಾಗೆ, LPG/CNG ಅಳವಡಿಸಿದ ವಾಹನ ಒಂದು ರಸ್ತೆಯ ಮೇಲೆ ಚಲಿಸುತ್ತಿರುವಾಗಲೇ ಬ್ಲಾಸ್ಟ್ ಆಗಿದೆ. ಈ ದೃಶ್ಯ ದಾರಿಯ ಬದಿಗೆ ಅಳವಡಿಸಿದ CCTV ಯಲ್ಲಿ ಸೆರೆಯಾಗಿದೆ.
ವೀಡಿಯೋ ನೋಡಿ
ಆದ್ದರಿಂದಲೇ ನೀವೂ ಒಂದು ವೇಳೆ ನಿಮ್ಮ ಯಾವುದೇ ವಾಹನದಲ್ಲಿ LPG/CNG ಅಳವಡಿಸುವ ವಿಚಾರ ಮಾಡುತ್ತಿದ್ದರೆ ಈ ಕೆಳಗಿನ 3 ವಿಷಯಗಳ ಕಡೆಗೆ ಗಮನ ನೀಡುವದು ಅವಶ್ಯಕವಾಗಿದೆ.
- ಒಳ್ಳೆಯ ಗುಣಮಟ್ಟಕ್ಕೆ ಮಹತ್ವ ನೀಡಿ. ಕಾರಣ ಜೀವನ ಮುಖ್ಯ. ಅದರ ಜೊತೆಗೆ ರಾಜಿ ಬೇಡ.
- ಇದನ್ನು ಅಳವಡಿಸುವಾಗ ಒಳ್ಳೆಯ ತಜ್ಞ ಮತ್ತು ಅಥೋರೈಸ್ಡ್ ಪರ್ಸನ್ ನಿಂದಲೇ ಅಳವಡಿಸಿಕೊಳ್ಳಿ.
- ಅಳವಡಿಸಿದ ಕಿಟ್ ಸಮಯ ಸಮಯಕ್ಕೆ ಚೆಕ್ ಮಾಡುತ್ತೀರಿ.