ನೀರಲ್ಲಿ ಬಿದ್ದ ಆಟಿಕೆ ಎತ್ತಿಕೊಳ್ಳಲು ಹೋದ ಪುಟ್ಟ ಬಾಲಕಿ, ಆದರೆ ಹಿಂದಿನಿಂದ ಓಡಿ ಬಂದ ನಾಯಿ ಮಾಡಿದ್ದೇನು? ವೈರಲ್ ಆಯ್ತು ವೀಡಿಯೋ
ಸಾಕುಪ್ರಾಣಿಗಳು ತಮ್ಮನ್ನು ಸಾಕಿದವರ ಮೇಲೆ ಸದಾ ವಿಶೇಷ ಕಾಳಜಿಯನ್ನು ತೋರಿಸುತ್ತವೆ. ಕೆಲವರು ಮನೆಯಲ್ಲಿ ತಾವು ಸಾಕುವ ಪ್ರಾಣಿಗಳನ್ನು ಕೂಡಾ ತಮ್ಮ ಮನೆಯ ಸದಸ್ಯರಂತೆಯೇ ಬಹಳ ಪ್ರೀತಿ ಹಾಗೂ ಅಪ್ಯಾಯತೆಯಿಂದ ನೋಡಿಕೊಳ್ಳುತ್ತಾ ಅವುಗಳ ಕಾಳಜಿಯನ್ನು ವಹಿಸುತ್ತಾರೆ. ಅವುಗಳನ್ನು ಬಹಳ ಪ್ರೀತಿಯಿಂದ ಆರೈಕೆ ಮಾಡುತ್ತಾರೆ. ಸಾಕು ಪ್ರಾಣಿಗಳ ವಿಷಯಕ್ಕೆ ಬಂದಾಗ ಬೇರೆಲ್ಲಾ ಪ್ರಾಣಿಗಳಿಗಿಂತ ಮನುಷ್ಯರಿಗೆ ಅನಾದಿ ಕಾಲದಿಂದಲೂ ಕೂಡಾ ಬಹಳ ಹತ್ತಿರವಾದ ಪ್ರಾಣಿಯೆಂದರೆ ಅದು ನಾಯಿ. ನಾಯಿಗಳು ಬೇರೆ ಪ್ರಾಣಿಗಳಿಗೆ ಹೋಲಿಕೆ ಮಾಡಿದಾಗ ಸ್ವಲ್ಪ ಹೆಚ್ಚು ಬುದ್ಧಿವಂತಿಕೆಯನ್ನು ತೋರಿಸುತ್ತದೆ. ಅಲ್ಲದೆ ತನ್ನನ್ನು ಸಾಕಿದವರ ಪರವಾಗಿ ಬಹಳ ನಿಷ್ಠೆಯಿಂದ ಇರುತ್ತದೆ. ಹಲವು ಸಂದರ್ಭಗಳಲ್ಲಿ ನಾಯಿಗಳು ತನ್ನನ್ನು ಸಾಕಿದವರಿಗಾಗಿ ಪ್ರಾಣವನ್ನು ನೀಡಲು ಕೂಡಾ ಮುಂದಾಗಿ ಬಿಡುತ್ತವೆ. ಅ ಪಾ ಯದ ಮುನ್ಸೂಚನೆ ಸಿಕ್ಕೊಡನೆ ರಕ್ಷಣೆಗೆ ಧಾವಿಸುತ್ತದೆ.
ಸೋಶಿಯಲ್ ಮೀಡಿಯಾ ಗಳಲ್ಲಿ ಆಗಾಗ ನಮ್ಮ ಕಣ್ಣಿಗೆ ಸಾಕಿದ ಪ್ರಾಣಿಗಳು ತಮ್ಮನ್ನು ಸಾಕಿದವರ ಮೇಲೆ ತೋರಿಸುವ ವಿಶೇಷ ಪ್ರೀತಿ ಹಾಗೂ ಕಾಳಜಿಯ, ಬಹಳ ವಿಶೇಷ ಹಾಗೂ ಅದ್ಭುತ ಎನಿಸುವಂತಹ ವೈರಲ್ ವೀಡಿಯೋಗಳು ಕಾಣುತ್ತಲೇ ಇರುತ್ತವೆ. ಇಂತಹ ವಿಡಿಯೋಗಳನ್ನು ನೋಡಿದಾಗ ಪ್ರಾಣಿಗಳಲ್ಲಿ ಇರುವಂತಹ ಕಾಳಜಿ ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಿ ಬಿಡುತ್ತದೆ. ಅದರಲ್ಲೂ ವಿಶೇಷವಾಗಿ ನಾಯಿಗಳು ಅಪಾಯದ ಸಂದರ್ಭದಲ್ಲಿ ಅದರ ಎದುರು ನಿಂತು ಸಾಕಿದವರ ರಕ್ಷಣೆಗೆ ಮುಂದಾಗುವ ದೃಶ್ಯಗಳನ್ನು ನೋಡಿದಾಗ ಮೆಚ್ಚುಗೆ ಸೂಚಿಸದೆ ಇರುವುದು ಅಸಾಧ್ಯ ಎನಿಸಿಬಿಡುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ವಿಶೇಷವಾದ ವಿಡಿಯೋಗಳನ್ನು ಶೇರ್ ಮಾಡುವುದರಲ್ಲಿ ಐಎಫ್ಎಸ್ ಅಧಿಕಾರಿ ಸುಸಾಂತ್ ನಂದ ಅವರು ಜನಪ್ರಿಯರಾಗಿದ್ದಾರೆ. ಈಗ ಅವರು ಶೇರ್ ಮಾಡಿಕೊಂಡಿರುವ ಒಂದು ಕಾಳಜಿಯ ವಿಡಿಯೋ ಸದ್ದು ಮಾಡುತ್ತಿದೆ.
ಈ ವೈರಲ್ ವೀಡಿಯೋ ನೋಡಿದಾಗ ಪುಟ್ಟ ಹುಡುಗಿಯೊಬ್ಬಳು ನೀರಿನಲ್ಲಿರುವ ಬಿದ್ದಿರುವ ತನ್ನ ಆಟಿಕೆಯನ್ನು ಎತ್ತಿಕೊಳ್ಳುವ ಸಲುವಾಗಿ ನೀರಿನ ಬಳಿ ಹೋಗಿದ್ದಾಳೆ. ಅಲ್ಲೇನಾದರೂ ಸ್ವಲ್ಪ ಕಾಲು ಜಾರಿದರೂ ಅ ಪಾ ಯ ತಪ್ಪಿದ್ದಲ್ಲ ಎನ್ನುವಂತಹ ಪ್ರದೇಶ ಅದು. ಆದರೆ ಪುಟ್ಟ ಹುಡುಗಿಯು ನೀರಿನ ಬಳಿ ಹೋಗಿದ್ದನ್ನು ಗಮನಿಸಿದ ನಾಯಿಯು ಕೂಡಲೇ ಅವಳ ಬಳಿಗೆ ಓಡಿ ಹೋಗಿದೆ. ಆಕೆ ಧರಿಸಿದ್ದ ಬಟ್ಟೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಎಳೆದುಕೊಂಡು ಬಂದು ಸ್ವಲ್ಪ ದೂರದಲ್ಲಿ ಬಾಲಕಿಯನ್ನು ನಿಲ್ಲಿಸಿದೆ. ಬಾಲಕಿ ಎಲ್ಲಿ ನೀರಿನೊಳಗೆ ಬಿದ್ದುಬಿಡುತ್ತಾಳೋ ಎನ್ನುವ ಭಯದಿಂದ ನಾಯಿ ತನ್ನ ಕಾಳಜಿಯನ್ನು ಮೆರೆದಿರುವುದನ್ನು ನಾವು ನೋಡಬಹುದು.
ಬಾಲಕಿಯನ್ನು ಎಳೆದು ತಂದ ನಾಯಿ ಅಷ್ಟಕ್ಕೆ ಸುಮ್ಮನಾಗದೆ ನೀರಿನಲ್ಲಿ ಬಿದ್ದಿದ್ದ ಆಟಿಕೆಯನ್ನು ತಾನೇ ನೀರಿನೊಳಕ್ಕೆ ಇಳಿದು ಬಾಯಲ್ಲಿ ಕಚ್ಚಿಕೊಂಡು ಕೊಂಡು ಹೊರಗೆ ಬಂದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡಾ ನಾಯಿಯ ಸಮಯಪ್ರಜ್ಞೆ ಹಾಗೂ ಅದು ತೋರಿಸಿದ ಕಾಳಜಿಯನ್ನು ಮುಕ್ತ ಮನಸ್ಸಿನಿಂದ ಹಾಡಿ ಹೊಗಳುತ್ತಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 56000 ಕ್ಕಿಂತ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದು, ಏಳು ಸಾವಿರಕ್ಕಿಂತ ಅಧಿಕ ಮಂದಿ ಮೆಚ್ಚುಗೆಗಳನ್ನು ಸೂಚಿಸಿದ್ದಾರೆ. ಸಾವಿರಾರು ಜನ ಈ ವಿಡಿಯೋವನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ.
ವಿಡಿಯೋ ನೋಡಿ
The best time to make friends is before you need them💕 pic.twitter.com/zlZlkM9IkY
— Susanta Nanda IFS (@susantananda3) February 22, 2021
ವಿಡಿಯೋ ನೋಡಿ ಕಾಮೆಂಟ್ ಗಳ ಮೂಲಕ ಅನೇಕರು ಪ್ರತಿಕ್ರಿಯೆಗಳನ್ನು ನೀಡುತ್ತಾ ಸಾಗಿದ್ದಾರೆ. ನೆಟ್ಟಿಗರೊಬ್ಬರು ಇಂದು ಮನುಷ್ಯರಿಗಿಂತ ಪ್ರಾಣಿಗಳೇ ಸುಂದರವಾಗಿವೆ, ಆದರೆ ನಾವೇ ಅವುಗಳನ್ನು ಹಿಂಸೆ ಮಾಡುತ್ತಿದ್ದೇವೆ ಎಂದಿದ್ದಾರೆ. ಮತ್ತೊಬ್ಬರು ಇತ್ತೀಚಿನ ದಿನಗಳಲ್ಲಿ ಮಾನವೀಯತೆ ಎನ್ನುವುದು ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳಲ್ಲಿ ಕಾಣುತ್ತಿದೆ ಎಂದಿದ್ದಾರೆ. ಇನ್ನೊಬ್ಬ ಟ್ವಿಟರ್ ಬಳಕೆದಾರರು ಈ ದೃಶ್ಯ ನಂಬಲು ಅಸಾಧ್ಯವಾದರೂ ಬಹಳ ಅದ್ಭುತವಾದ ದೃಶ್ಯ ಎಂದಿದ್ದಾರೆ. ಮತ್ತೆ ಒಬ್ಬ ಟ್ವಿಟರ್ ಬಳಕೆದಾರರು ಆ ಬಾಲಕಿ ಒಬ್ಬ ಅದ್ಭುತವಾದ ಸ್ನೇಹಿತನನ್ನು ಪಡೆದಿದ್ದಾರೆ ಎಂದಿದ್ದಾರೆ. ಒಟ್ಟಾರೆ ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.