ನೀರಿನಲ್ಲಿಯೇ ಧೂಳ್ ಎಬ್ಬಿಸಿದ ಬಾತುಕೋಳಿಗಳ ಪುಟ್ಟ ಲವ್ ಡಾನ್ಸ್! ಸೂಪರ್, ಸಾಲಿಡ್ ಎನ್ನದೆ ಸಾಧ್ಯವೇ ಇಲ್ಲ…
ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಒಂದು ವಿಷಯ ವೈರಲ್ ಆಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಅದರಲ್ಲೂ ಡಾನ್ಸ್ ಗಳ ವಿಡಿಯೋ ಅಂತೂ ನೇಟಿಜನ್ಸ್ ಗಳು ಹುಚ್ಚೆದ್ದು ನೋಡುತ್ತಾರೆ. ಈಗಿನ ಜನರೇಶನ್ ನ ಹೆಚ್ಚುಕಡಿಮೆ ಎಲ್ಲರಿಗೂ ಡಾನ್ಸ್ ಎಂದರೆ ತುಂಬಾ ಇಷ್ಟವಾಗುತ್ತದೆ. ಇನ್ನು ಇದರಲ್ಲಿ ಕುಣಿಯುವುದು ಮತ್ತು ನೋಡುವುದು ಎರಡೂ ಬಂತು. ಮನುಷ್ಯನಿಗೆ ಅತಿ ಸಂತೋಷವಾದಾಗ ಆತ ತನ್ನ ಸಂತೋಷವನ್ನು ಅನೇಕ ರೀತಿಯಲ್ಲಿ ವ್ಯಕ್ತ ಮಾಡುತ್ತಾನೆ. ಕೆಲವರು ನೃತ್ಯ ಮಾಡಿ ತಮ್ಮ ಆನಂದವನ್ನು ದ್ವಿಗುಣಿತಗೊಳಿಸುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಖುಷಿಯಲ್ಲಿದ್ದಾಗ ಬಾತುಕೋಳಿಗಳು ಮಾಡಿದ ನೃತ್ಯ ಒಂದು ತುಂಬಾ ವೈರಲ್ ಆಗುತ್ತಿದೆ. ಬಾತುಕೋಳಿಗಳು ಖುಷಿಯಲ್ಲಿದ್ದಾಗ ತುಂಬಾ ಚೆನ್ನಾಗಿ ನೃತ್ಯವನ್ನು ಮಾಡಿವೆ. ಸದ್ಯ ಇದೇ ನೃತ್ಯ ಸೋಶಿಯಲ್ ಮೀಡಿಯಾದಲ್ಲಿ ಈಗ ಫೇಮಸ್ ಆಗಿದೆ.
ಈ ಎರಡೂ ಹಕ್ಕಿಗಳು ಕುಣಿತದ ಯಾವುದೇ ರೀತಿಯ ತರಬೇತಿಯನ್ನು ಪಡೆದಿಲ್ಲ. ಆದರೂ ನೇಟಿಜನ್ಸ್ ಗಳ ಮನಸ್ಸನ್ನು ಮೋಹಕಗೊಳಿಸುವ ತುಂಬಾ ಸುಂದರವಾದ ನೃತ್ಯವನ್ನು ನೀರಿನಿಂದ ತುಂಬಿದ ಕೆರೆಯಲ್ಲಿ ಸಾದರಪಡಿಸಿವೆ. ಈ ಹಕ್ಕಿಗಳ ಕುಣಿತಕ್ಕೆ ಹಿಂದಿನಿಂದ ಮ್ಯೂಸಿಕ್ ಮೇಕ್ ಓವರ್ ಮಾಡಿದ್ದಾರೆ. ಹೀಗಾಗಿ ಈ ಬಾತುಕೋಳಿಗಳ ನೃತ್ಯಕ್ಕೆ ಮತ್ತಷ್ಟು ಮೆರಗು ಬಂದಿದೆ. ಬಾತುಕೋಳಿಗಳು ಸಾದರ ಪಡಿಸಿದ ಅದ್ಭುತವಾದ ನೃತ್ಯ ಮನುಷ್ಯನಿಗೆ ಮಾಡಲು ತುಂಬಾ ಅಸಾಧ್ಯವಾದ ಮಾತು. ಕಾರಣ ಈ ಹಕ್ಕಿಗಳು ಯಾವುದೇ ರೀತಿಯ ತರಬೇತಿಯನ್ನು ಪಡೆಯದೆ ಹಾಗೆಯೇ ಮಾಡಿದ ತುಂಬಾ ನೈಸರ್ಗಿಕವಾದ ನೃತ್ಯ ಉಂಟು. ಬಾತುಕೋಳಿಗಳ ಈ ಕುಣಿತವು ನಿಜಕ್ಕೂ ಅದ್ಭುತವೇ ಎನ್ನಬಹುದು. ಈ ಡಾನ್ಸ್ ನೋಡುವಾಗ ವ್ಯಕ್ತಿ ತನ್ನಂತಾನೇ ಮಂತ್ರಮುಗ್ಧನಾಗುತ್ತಾನೆ, ಜೊತೆಗೆ ಈ ಕುಣಿತವು ಇಷ್ಟೇಕೆ ಬೇಗನೆ ಮುಗಿಯಿತು ಎಂಬ ಭಾವನೆ ನೋಡುಗನಲ್ಲಿ ವ್ಯಕ್ತವಾಗುತ್ತದೆ.
ವಿಡಿಯೋ ನೋಡಿ
Courtship dance of the hooded grebe. pic.twitter.com/ZydUetRu33
— Wonder of Science (@wonderofscience) March 18, 2022
ಬಾತುಕೋಳಿಗಳ ಸುಂದರವಾದ ಕುಣಿತದ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಆದ ಟ್ವಿಟರ್ನಲ್ಲಿ “ವಂಡರ್ ಆಫ್ ಸೈನ್ಸ್” ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 7 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು ಲಕ್ಷ ಲಕ್ಷ ಜನರು ಲೈಕ್ ಮಾಡಿದ್ದಾರೆ.