ನೀರಿನಲ್ಲಿಳಿದು ಪಾಚಿ & ಬಳ್ಳಿ ತೆಗೆದು ಸ್ವಚ್ಚಗೊಳಿಸುತ್ತಿದ್ದರು ಯುವಕರು…ಹಠಾತ್ ನಡೆದ ದೃಶ್ಯ ಕ್ಯಾಮೆರಾದಲ್ಲಿ ಸೆರೆ.

ಪ್ರತಿಯೊಂದು ಕೆಲಸ ಮಾಡುವಾಗ ಸದ್ಯ ಮೊದಲು ಕ್ಯಾಮೆರಾ ರೆಡಿಯಾಗಿರುತ್ತದೆ. ಹೀಗಾಗಿ ಕೆಲಸ ಮಾಡುವಾಗ ನಡೆದ ರೋಚಕ ದೃಶ್ಯಗಳು ಕ್ಯಾಮೆರಾದಲ್ಲಿ ತಾನಾಗಿಯೇ ಸೆರೆಯಾಗುತ್ತಿವೆ. ನಂತರ ಆ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಸಮಯ ಹತ್ತುವದಿಲ್ಲ. ಸದ್ಯ ಇದೇ ರೀತಿಯ ಒಂದು ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ.

ಇಬ್ಬರು ಯುವಕರು ಕೂಡಿ ನಾಲೆಯಲ್ಲಿ ಬೆಳೆದ ಬೇಡವಾದ ಬಳ್ಳಿ ಮತ್ತು ಹಸಿರು ಪಾಚಿಯನ್ನು ತಳ್ಳುತ್ತಾ ಸ್ವಚ್ಛಗೊಳಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಯುವಕನ ಜೊತೆಗೆ ನಡೆದ ಒಂದು ರೋಚಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ನೋಡಿದಾಗ ಹಠಾತ್ ಹೆದರಿಕೆಯಾಗುತ್ತದೆ. ಯುವಕರಿಬ್ಬರು ಕೂಡಿ ನಿಧಾನವಾಗಿ ನೀರ ಮೇಲೆ ಹಬ್ಬಿದ ವನಸ್ಪತಿಯನ್ನು ತಳ್ಳುತ್ತಿರುವಾಗ ಹಠಾತ್ತನೇ ಮೀನೊಂದು ವ್ಯಕ್ತಿಯ ಮೇಲೆ ಅಟ್ಯಾಕ್ ಮಾಡಿದೆ. ಮೊದಲ ನೋಟಕ್ಕೆ ಅದು ದೊಡ್ಡದಾದ ಮೊಸಳೆ ಇರಬೇಕೆಂಬ ಸಂಶಯ ಮೂಡುತ್ತದೆ. ಆದರೆ ಈ ವಿಡಿಯೋ ಒಂದೆರಡು ಬಾರಿ ನೋಡಿದಾಗ ಗೊತ್ತಾಗುತ್ತದೆ ಅದು ಮೀನಿದೆ ಎಂದು. ಒಂದು ವೇಳೆ ಮೀನಿನ ಬದಲಾಗಿ ಮೊಸಳೆ ಇದ್ದರೆ ವ್ಯಕ್ತಿಯ ಅವಸ್ಥೆ ಏನಾಗಬಹುದು ಎಂಬ ವಿಚಾರ ಮನಸ್ಸಿನಲ್ಲಿ ಬಂದು ಹೋಗುತ್ತದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು instagram ನಲ್ಲಿ ಡೈಲಿಬಾಸ್ಅಫೀಸಿಯಲ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 36 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ಇದೇ ವಿಡಿಯೋಗೆ ಸುಮಾರು 9 ಲಕ್ಷಕ್ಕೂ ಮೀರಿ ಲೈಕ್ಸ್ ಗಳು ದೊರಕಿವೆ.