ನೀರಿನ ಅಬ್ಬರದ ಸೆಳೆತಕ್ಕೆ ಆಟಿಗೆ ಸಾಮಾನಿನಂತೆ ಕೊಚ್ಚಿ ಹೋಗುತ್ತಿರುವ ಕಾರು; ವಿಡಿಯೋ ವೈರಲ್ !

ಮಳೆರಾಯ ದಿನದಿನಕ್ಕೆ ಮತ್ತಷ್ಟು ಅಬ್ಬರದಿಂದ ಸುರಿಯುತ್ತಿದ್ದಾನೆ. ಆತನ ಆರ್ಭಟ ಕಡಿಮೆಯಾಗುವ ಹೆಸರೇ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಈ ತೂಫಾನ್ ಮಳೆಯಲ್ಲಿ ನಡೆದ ಇನ್ಸಿಡೆಂಟ್ ಗಳ ಹೊಸ ಹೊಸ ವಿಶೇಷ ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಸದ್ಯ ಇದೇ ರೀತಿಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ತೀವ್ರವಾದ ಮಳೆಯಿಂದಾಗಿ ನೀರು ಹರಿದು ಹೋಗಲು ರಸ್ತೆಯನ್ನೇ ಬೃಹತ್ ಹಳ್ಳವಾಗಿ ಪರಿವರ್ತಿಸಿಕೊಂಡಿದೆ. ಈ ವಿಡಿಯೋ ಎಲ್ಲಿಯದು ಎಂಬುದು ಮಾತ್ರ ತಿಳಿದು ಬಂದಿಲ್ಲ. ಈ ವಿಡಿಯೋದಲ್ಲಿ ದೃಶ್ಯ ನೋಡಿದಾಗ ನಗಬೇಕೋ ಅಥವಾ ಅಯ್ಯೋ ಪಾಪ ಎನ್ನಬೇಕೋ ಒಂದು ತಿಳಿಯುತ್ತಿಲ್ಲ. ಕಾರಣ ಮಳೆಯ ಆರ್ಭಟಕ್ಕೆ ನೀರು ರಸ್ತೆಯ ಮೇಲಿಂದ ವೇಗವಾಗಿ ಹರಿಯುತ್ತಿದೆ. ಈ ಸಂದರ್ಭದಲ್ಲಿ ನೀರು ತನ್ನ ಜೊತೆಗೆ ಸಿಕ್ಕ ವಸ್ತುಗಳನ್ನೆಲ್ಲ ಯಾವುದೇ ರೀತಿಯ ಮುಲಾಜಿಲ್ಲದೆ ತೆಗೆದುಕೊಂಡು ಹೋಗುತ್ತಿದೆ. ಇಂಥದ್ದರಲ್ಲಿ ಕಾರೊಂದು ಆಟಿಗೆ ಸಾಮಾನಿನ ತರ ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ಈ ದೃಶ್ಯ ನೋಡಲು ತುಂಬಾನೇ ವಿಶೇಷವಾಗಿದೆ. ನೀರು ತನ್ನ ಜೊತೆಗೆ ಕಾರನ್ನು ತುಂಬಾ ಕೇವಲವಾಗಿ ತೆಗೆದುಕೊಂಡು ಹೋಗುತ್ತಿದೆ.

ನೋಡಿ ಈ ವಿಡಿಯೋ…

ಈ ಕಾರಿನ ವಿಚಿತ್ರ ಅವಸ್ಥೆಯ ಈ ವೀಡಿಯೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಎರಡು ಲಕ್ಷಕ್ಕೂ ಮೇಲ್ಪಟ್ಟು ಲೈಕ್ಸ್ ಗಳನ್ನು ಹೊಂದಿದರೆ ಮಿಲಿಯನ್ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದಿದೆ.