ನೀರಿನ ಬಾಟಲಿ ಅಂದುಕೊಂಡು ಗಂಟಲಪೂರ್ತಿ ರಮ್ ಕುಡಿದ ಮಂಗ, ಐದು ನಿಮಿಷಗಳ ನಂತರ ಮಂಗನ ಪರಸ್ಥಿತಿ ಏನಾಯ್ತು ನೋಡಿ!!
ಮಂಗಣ್ಣನ ಚೇಷ್ಟೆಗಳ ವಿಡಿಯೋಗಳು ನೆಟ್ಟಿಗರಿಗೆ ನೋಡಲು ತುಂಬಾ ಇಷ್ಟ. ಇದು ಒಂದು ರೀತಿಯಲ್ಲಿ ಗರಮಾ ಗರಮ್ ಟೇಸ್ಟಿ ಚೌ ಚೌ ಬಾತ್ ಇದ್ದ ಹಾಗೆ. ಕ್ಷಣದಲ್ಲಿ ಮಾರಾಟವಾಗಿ ಬಿಡುತ್ತೆ ಎನ್ನೋತರ. ಮಂಗನ ಅನೇಕ ಚೇಷ್ಟೆಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿಯ ಯೂಸರ್ಸ್ ಗಳಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತವೆ.
ಸದ್ಯ ಈ ವಿಡಿಯೋದಲ್ಲಿಯೂ ಮಂಗ ತನ್ನ ಗುಣಕ್ಕೆ ತಕ್ಕಂತೆ ಕುಚೇಷ್ಟೆ ಒಂದನ್ನು ಮಾಡಿದೆ. ಅದು ಮಾಡಿದ ಚೇಷ್ಟೆ ಮಹಾನುಭಾವನೊಬ್ಬ ಸರಿಯಾಗಿ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ. ಈ ವಿಡಿಯೋ ನೋಡಿದ ಮೇಲೆ ನೀವು ನಗದೆ ಇರಲಾರಿರಿ.
ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀವು ನೋಡಬಹುದು, ಒಂದು ಮಂಗನ ಕೈಗೆ ರಮ್ ಬಾಟಲಿ ಸಿಗುತ್ತದೆ ಈ ಬಾಟಲಿ ಅದರ ಕೈಗೆ ಹೇಗೆ ಸಿಕ್ಕಿದೆ ಎಂಬುದು ತಿಳಿದಿಲ್ಲ. ಮಂಗ ತನ್ನ ಕೈಗೆ ನೀರಿನ ಬಾಟಲಿಯೇ ಸಿಕ್ಕಿದೆ ಎಂದುಕೊಂಡು ಸ್ವಲ್ಪ್ ಕುಡಿದು ನೋಡುತ್ತೆ ಅದಕ್ಕೆ ಟೆಸ್ಟ್ ಯಾವ ರೀತಿ ಹತ್ತಿತೋ ಎಂಬುದು ಅದಕ್ಕೆ ಗೊತ್ತು. ತದನಂತರ ಆ ಬಾಟಲಿಯನ್ನು ತನ್ನ ಬಾಯಿಗೆ ಹಚ್ಚಿಕೊಂಡು ಸಂಪೂರ್ಣ ಬಾಟಲಿಯನ್ನೇ ಖಾಲಿ ಮಾಡುತ್ತದೆ. ಬಾಟಲಿಯನ್ನು ಖಾಲಿ ಮಾಡಿದ ನಂತರ ಅದಕ್ಕೆ ಸಾವಕಾಶವಾಗಿ ಮದ್ಯದ ನಶೆಯಾಗಲು ಶುರು ಮಾಡುತ್ತದೆ. ಆಗ ಮಂಗ ತನ್ನ ಕಣ್ಣುಗಳೆರಡು ಕುಡಿದ ವ್ಯಕ್ತಿಗಳು ಹೇಗೆ ಮಾಡುತ್ತಾರೆಯೋ ಅದೇ ತರಹ ಈ ಮಂಗವು ಸಹ ವರ್ತಿಸಲು ಶುರು ಮಾಡುತ್ತದೆ. ಅಷ್ಟೇ ಅಲ್ಲದೆ ಕುಡುಕರು ಹೇಗೆ ನೆಲದ ಮೇಲೆ ಬಿದ್ದು ಒದ್ದಾಡುತ್ತಾರೆಯೋ ಅದೇ ರೀತಿಯಲ್ಲಿ ಮಂಗವು ಸಹ ನೆಲದ ಮೇಲೆ ಬಿದ್ದು ಒದ್ದಾಡುತ್ತದೆ. ಒಟ್ಟಾರೆಯಾಗಿ ಈ ವಿಡಿಯೋ ನೋಡಿದ ಮೇಲೆ ಮನುಷ್ಯ ಮತ್ತು ಮಂಗ ಕುಡಿದ ಅಮಲಿನಲ್ಲಿ ಒಂದೇ ತರಹದ ವರ್ತನೆ ಮಾಡುತ್ತಾನೆ ಎಂಬುದು ತಿಳಿಯುತ್ತದೆ.
ವಿಡಿಯೋ ನೋಡಿ.
View this post on Instagram
ಪ್ರಸ್ತುತ ವೈರಲ್ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ pablo_fabian ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದ್ದು. ಇದುವರೆಗೆ ಇದನ್ನು ಸುಮಾರು ಒಂದು ಮಿಲಿಯನ್ ಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಸುಮಾರು ಇಪ್ಪತ್ತಾರು ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.