ನೀರಿನ ಹೊರಗೆ ಚಡಪಡಿಸುತ್ತ ಬಿದ್ದ ಮೀನಿನ ಜೀವ ಉಳಿಸಿತು ಪುಟ್ಟ ಆಮೆ! ನೋಡಿ ಪುಟ್ಟ ಆಮೆಯು ಸಹಾಯ ಮಾಡಿದ ಈ ವೈರಲ್ ವಿಡಿಯೋ…

ಫೋನ್ಗಳಲ್ಲಿ ಹೆಚ್ಚಾಗಿ ವೈರಲ್ ವಿಡಿಯೋ ಮತ್ತು ಫೋಟೋಗಳನ್ನು ನೋಡಲಾಗುತ್ತದೆ. ಯಾವ ವಿಡಿಯೋ ಅಥವಾ ಫೋಟೋ ಟ್ರೆಂಡಿಂಗ್ ನಲ್ಲಿ ಇರುತ್ತದೆ ಅದನ್ನೇ ನಮ್ಮ ಮುಂದೆ ನೋಡಲು ತಂದಿಡುತ್ತದೆ ನಮ್ಮ ಫೋನ್. ಇವುಗಳಲ್ಲಿ ಅನೇಕ ವಿಡಿಯೋಗಳು ಆಶ್ಚರ್ಯವನ್ನು ಉಂಟು ಮಾಡುತ್ತವೆ. ಸದ್ಯ ಮೀನಿನ ಜೀವ ಉಳಿಸಿದ ಆಮೆಯ ವಿಡಿಯೋ ಒಂದು ನೇಟಿಜನ್ಸ್ ಗಳಿಗೆ ತುಂಬಾನೇ ಆಶ್ಚರ್ಯವನ್ನು ನೀಡುತ್ತಿದೆ. ಈ ವಿಡಿಯೋ ನೋಡಿ ನೀವು ಸಹಿತ ಬೆರಗಾಗುವುದು ನಿಶ್ಚಿತ. ಈ ವಿಡಿಯೋದಲ್ಲಿ ಪುಟ್ಟ ಆಮೆಯ ಮರಿಯೊಂದು ಮೀನಿನ ಜೀವವನ್ನು ಉಳಿಸಲು ಕಾರಣವಾಗಿದೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕೆರೆಯ ಒಂದು ಕಲ್ಲಿನ ಮೇಲೆ ಮೀನೊಂದು ನಿಶ್ಚೇಷ್ಟಿತವಾಗಿ ಬಿದ್ದಿರುವುದು ಕಂಡು ಬರುತ್ತದೆ. ಮೀನಿನ ಅರ್ಧಭಾಗವು ನೀರಿನಿಂದ ಹೊರಗೆ ಬಿದ್ದಿರುವ ಕಾರಣದಿಂದಾಗಿ ಮೀನಿಗೆ ತುಂಬಾ ನೋವಾಗುತ್ತಿತ್ತು ಏನೋ ಎಂಬಂತೆ ತಿಳಿದುಬರುತ್ತದೆ. ಮೀನು ಈ ರೀತಿಯ ಸಂಕಟದ ಸಮಯದ ಪರಿಸ್ಥಿತಿಯಲ್ಲಿ ಇದ್ದು ಒದ್ದಾಡುತ್ತಿರುವಾಗ ಅದರ ಸಹಾಯಕ್ಕೆ ಆಮೆಯೊಂದು ಬಂದಿದೆ. ನೀರಿನ ಹೊರಗೆ ಮೂರ್ಚಿತಾವಸ್ಥೆಯಲ್ಲಿ ಬಿದ್ದಿರುವ ಮೀನಿಗೆ ಆಮೆಯು ಬಂದು ಬಾಯಿಯಿಂದ ನೀರಿನೊಳಗೆ ಜಗ್ಗಿದೆ. ಆಮೆ ಮಾಡಿದ ಈ ಕೃತಿಯಿಂದ ಮೀನು ಮತ್ತೆ ಪೂರ್ವ ಸ್ಥಿತಿಗೆ ಬಂದಿದೆ. ಈ ಕೃತ್ಯದ ನಂತರ ಮೀನು ಸಹಜವಾಗಿಯೇ ನೀರಿನಲ್ಲಿ ಈಜಾಡುತ್ತಾ ಮುಂದೆ ಹೋಗಿದೆ. ಹೀಗಾಗಿ ಆ ಮೀನಿನ ಜೀವ ಉಳಿದಿದೆ.

ವಿಡಿಯೋ ನೋಡಿ

 

View this post on Instagram

 

A post shared by Discover Animal (@discover.animal)

ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿ ಲೈಕ್ ಸಹ ಮಾಡಿದ್ದಾರೆ. ವಿಡಿಯೋ ನೋಡಿದ ಅನೇಕ ಯೂಸರ್ಸ್ ಗಳು ತಮ್ಮ ಮನಸ್ಸಿಗೆ ಬಂದ ಪ್ರತಿಕ್ರಿಯೆಗಳನ್ನು ರಿಪ್ಲೈ ನಲ್ಲಿ ನೀಡಿದ್ದಾರೆ. ಅನೇಕ ಯೂಸರ್ಸ್ ಗಳು ಆಮೆಯನ್ನು ಬಾಯಿತುಂಬಾ ಹೊಗಳಿದ್ದಾರೆ.