ನೀರು ಪಾಲಾಗುತ್ತಿದ್ದ ಜಿಂಕೆಮರಿಯ ಪ್ರಾಣ ಉಳಿಸಿ ನಾಯಿಯಾಯಿತು ಹೀರೋ! ನಾಯಿಯ ಈ ಶೌರ್ಯದ ವಿಡಿಯೋ ವೈರಲ್!

ಜಗತ್ತಿನಲ್ಲಿಯೇ ವಿಶ್ವಾಸಕ್ಕೆ ಪಾತ್ರವಾದ ಪ್ರಾಣಿಗಳಲ್ಲಿ ಮೊದಲ ನಂಬರ್ ನಾಯಿಯದೇ ಎಂದರೆ ತಪ್ಪಲ್ಲ. ಇದು ತುಂಬಾ ಜಾಣ ಪ್ರಾಣಿಯಾಗಿರುವುದರೊಂದಿಗೆ ತನ್ನ ಮಾಲೀಕನ ಜೊತೆಗೆ ಯಾವತ್ತೂ ನಿಷ್ಠೆಯಿಂದ ಇರುತ್ತದೆ. ಹೀಗಾಗಿ ಇದು ಮಾನವನ ನಿಜವಾದ ಮಿತ್ರನಾಗಿದೆ. ಈ ಪ್ರಾಣಿಯು ತನ್ನ ಮಾಲೀಕ ಅಪಾಯದಲ್ಲಿ ಸಿಲುಕಿದಾಗ ತನ್ನ ಪ್ರಾಣವನ್ನೂ ಸಹ ಲೆಕ್ಕಿಸದೆ ಮಾಲೀಕನ ಪ್ರಾಣ ಉಳಿಸುವುದಕ್ಕಾಗಿ ಹೋರಾಡಿದ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. ಸದ್ಯ ನಾಯಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಈ ವಿಡಿಯೋ ನೋಡಿದ ನೇಟಿಜನ್ಸ್ ಗಳು ಈ ನಾಯಿಯು ಶೌರ್ಯ ಚಕ್ರ ಅವಾರ್ಡ್ ಪಡೆಯಲು ಯೋಗ್ಯವಾದ ಪ್ರಾಣಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕಪ್ಪು ಬಣ್ಣದ ನಾಯಿಯೊಂದು ನೀರಿನ ಪ್ರವಾಹದಲ್ಲಿ ಸಿಲುಕಿದ ಜಿಂಕೆ ಮರಿಯನ್ನು ಉಳಿಸಲು ಯತ್ನಿಸಿ ಅದರಲ್ಲಿ ಯಶಸ್ವಿಯಾಗಿದೆ. ನಾಯಿ ಜಿಂಕೆ ಮರಿಯನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡು ಈಜಾಡುತ್ತಾ ದಡದವರೆಗೆ ತಂದು ತನ್ನ ಮಾಲಿಕನಿಗೆ ಒಪ್ಪಿಸಿದೆ. ನಾಯಿಯು ಮರಿಗಳಿಗೆ ತನ್ನ ಬಾಯಿಯಲ್ಲಿ ಹಿಡಿದು ತನ್ನ ಜಾಗವನ್ನು ಬದಲಾಯಿಸುವ ಹಾಗೆಯೇ ಜಿಂಕೆಮರಿಯನ್ನು ಬಾಯಿಯಲ್ಲಿ ಹಿಡಿದು ದಡದವರೆಗೆ ತಂದಿದೆ. ವಿಶೇಷವೆಂದರೆ ಜಿಂಕೆ ಮರಿಗೆ ತನ್ನ ಹಲ್ಲುಗಳು ತಾಗಬಾರದೆಂಬ ಕಾಳಜಿ ಸಹ ನಾಯಿಯು ಇಲ್ಲಿ ತೆಗೆದುಕೊಂಡಿದೆ. ಈ ಮನಮುಟ್ಟುವ ದೃಶ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ವೀಡಿಯೋ ನೋಡಿ

ಈ ವಿಡಿಯೋ ನೋಡಿದ ನೇಟಿಜನ್ಸ್ ಗಳು ನಾಯಿಯನ್ನು ಬಾಯಿತುಂಬಾ ಹೊಗಳುತ್ತಿದ್ದಾರೆ. ಈ ವಿಡಿಯೋವನ್ನು @FredSchultz35 ಹೆಸರಿನಿಂದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ 13 ಲಕ್ಷಕ್ಕೂ ಮೀರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ. 25 ಸಾವಿರಕ್ಕೂ ಮೇಲ್ಪಟ್ಟು ಈ ವಿಡಿಯೋಗೆ ಲೈಕ್ಸ್ ಗಳು ಬಂದಿವೆ. ಈ ನಾಯಿಯಂತೂ ನಿಜವಾದ ಹೀರೋ ಆಗಿದೆ ಎಂದು ಒಬ್ಬನು ಕಮೆಂಟ್ ಮಾಡಿದ್ದಾನೆ. ಇನ್ನೊಬ್ಬ ಈ ನಾಯಿ ನಿಜಕ್ಕೂ ಒಂದು ಚಮತ್ಕಾರವನ್ನೇ ಸಾಧಿಸಿದೆ ಎಂದು ಹೇಳಿದ್ದಾನೆ.