ನೀವು ಏನು ಮಾಡಿದರೂ ಸಹಿಸಿಕೊಳ್ಳಲಿಕ್ಕೆ ನಾವೇನು ಬಿಟ್ಟಿ ಬಿದ್ದೀದ್ದಿವಾ ಮನೇಲಿ? ಒನ್ಲಿ ಕ್ಯಾಟ್ ಲವರ್ಸ್ ಗಳಿಗಾಗಿ ಈ ವಿಡಿಯೋ…

 

ಸಾಕು ಪ್ರಾಣಿಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಸದ್ಯ ಬೆಕ್ಕಿನ ತಮಾಷೆಯ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಪುಟ್ಟ ಮಗು ಹಾಗೂ ಒಂದು ಕಪ್ಪು ಬೆಕ್ಕು ಇವೆ. ಬೆಕ್ಕು ಹಾಸಿಗೆಯ ಮೇಲೆ ಕುಳಿತರೆ ಮಗು ಅಲ್ಲಿಯೇ ನಿಂತು ಬೆಕ್ಕಿನ ಕೂದಲನ್ನು ಹಿಡಿದು ಜಗ್ಗುತ್ತಿದೆ. ಮಗುವಿನ ಈ ಆಟ ಬೆಕ್ಕಿಗೆ ಯಾಕೋ ಸಹಿಸಿಕೊಳ್ಳಲು ಆಗಿಲ್ಲ. ಹೀಗಾಗಿ ಅದು ತನ್ನ ಮುಂದಿನ ಕಾಲಿನಿಂದ ಮಗುವಿನ ತಲೆಗೆ ಒಂದು ಪಂಚ್ ನೀಡುತ್ತದೆ. ಆ ಏಟಿಗೆ ಮಗು ತಬ್ಬಿಬ್ಬು! ನೀವು ಏನೇ ಮಾಡಿದರೂ ಸುಮ್ಮನೆ ಕುಳಿತುಕೊಳ್ಳಲಿಕ್ಕೆ ನಾವೇನು ಬಿಟ್ಟಿ ಬಿದ್ದೀದ್ದಿವಾ? ಎನ್ನುವ ಹಾಗಿದೆ ಬೆಕ್ಕಿನ ವರಸೆ.

ಈ ಸಂದರ್ಭದಲ್ಲಿ ಮಗುವಿನ ರಿಯಾಕ್ಷನ್ ನಿಜಕ್ಕೂ ನೋಡುವಂತಿದೆ. ಈ ತಮಾಷೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪ್ಲಾನೆಟ್ ಕ್ಯಾಟ್ ಕ್ಲಬ್ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ನೋಡುಗರಿಗೆ ಮಾತ್ರ ತುಂಬಾ ಇಷ್ಟವಾಗಿದೆ. ಈ ವಿಡಿಯೋಗೆ ಇಲ್ಲಿಯವರೆಗೆ ಮೂರೂವರೆ ಲಕ್ಷಕ್ಕಿಂತ ಹೆಚ್ಚು ಲೈಕ್ ಗಳಾಗಿವೆ.

ವಿಡಿಯೋ ನೋಡಿ

 

View this post on Instagram

 

A post shared by Planet Cats 🐾 (@planetcats.club)