ನೂರು ಕೋಟಿ ರೂಪಾಯಿಗಳ ಬಂಗಲೆಯಿಂದ ಹಿಡಿದು ದುಬಾರಿ ವ್ಯಾನಿಟಿ ವ್ಯಾನ್! ಅಲ್ಲು ಅರ್ಜುನ್ ಅವರ ಒಟ್ಟು ಸಂಪತ್ತು ಎಷ್ಟು ಗೊತ್ತಾ? ನೋಡಿ ಅವರ ಲಕ್ಸುರಿ ಲೈಫ್ ಸ್ಟೈಲ್!
ಪುಷ್ಪ ಚಿತ್ರದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಕಳೆದ ಕೆಲವು ದಿವಸಗಳಿಂದ ತುಂಬಾ ಚರ್ಚೆಯಲ್ಲಿ ಇದ್ದಾರೆ. ಪುಷ್ಪ ಚಿತ್ರದಲ್ಲಿಯ ಅವರ ನಟನೆ ಭಾರತೀಯರಿಗೆ ತುಂಬಾನೇ ಮೋಡಿ ಮಾಡಿದೆ. ಅಲ್ಲು ಅರ್ಜುನ್ ಅವರು ತಮ್ಮ ಲಕ್ಸುರಿ ಲೈಫ್ ಸ್ಟೈಲ್ ನಿಂದಾಗಿ ಯಾವತ್ತೂ ಚರ್ಚೆಯಲ್ಲಿ ಇರುತ್ತಾರೆ. ಅವರ ದುಬಾರಿಯಾದ ಲೈಫ್ ಸ್ಟೈಲ್ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಅಲ್ಲು ಅರ್ಜುನ್ ಅವರ ಕಡೆಗೆ ಸ್ವಂತದ್ದಾದ ವ್ಯಾನಿಟಿ ವ್ಯಾನ್ ಇದೆ. ಪ್ರಸ್ತುತ ಈ ವ್ಯಾನ್ ಕಪ್ಪು ಬಣ್ಣದ್ದಾಗಿದ್ದು ಅದರ ಮೇಲೆ AA ಎಂದು ಬರೆಯಲಾಗಿದೆ. ಈ ವ್ಯಾನ್ ಎಲ್ಲಾ ಸೌಲಭ್ಯಗಳಿಂದ ಕೂಡಿದೆ. ಅಲ್ಲು ಅರ್ಜುನ್ ಅವರು ಉಪಯೋಗಿಸುವ ಈ ವ್ಯಾನ್ ಬೆಲೆ ಸುಮಾರು 7 ಕೋಟಿ ರೂಪಾಯಿಗಳೆಂದು ತಿಳಿದುಬಂದಿದೆ.
ಇವರ ಸುಂದರವಾದ ಬಂಗಲೆ ಹೈದರಾಬಾದ್ ನಲ್ಲಿದೆ. ಅಲ್ಲು ಅರ್ಜುನ್ ಅವರು ತಮ್ಮ ಮಕ್ಕಳ ಜೊತೆಗಿನ ಮನೆಯಲ್ಲಿಯ ಅನೇಕ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಮನೆಯಲ್ಲಿ ಒಂದು ಥಿಯೇಟರ್ ಮತ್ತು ಮಕ್ಕಳ ಆಟಕ್ಕಾಗಿ ಬೇರೆಯಾದ ಕೋಣೆಗಳಿವೆ. ರಿಲೇಟಿವ್ಸ್ ಸಲುವಾಗಿ ಬೇರೆ ಕೋಣೆಗಳು ಮತ್ತು ಒಳಗೆ ಒಂದು ಸ್ವಿಮ್ಮಿಂಗ್ ಪೂಲ್ ಸಹ ಇದೆ. ಈ ಸುಂದರವಾದ ಭವ್ಯ ಬಂಗಲೆಯ ಬೆಲೆ ನೂರು ಕೋಟಿ ರೂಪಾಯಿಗಳಷ್ಟು ಇದೆ.
ಜೊತೆಗೆ ಅಲ್ಲು ಅರ್ಜುನ್ ಅವರ ಕಡೆಗೆ ದುಬಾರಿಯಾದ ಲಕ್ಸುರಿ ಕಾರುಗಳಿವೆ. ಅವರ ಹತ್ತಿರ ರೇಂಜ್ ರೋವರ್, ಮರ್ಸಿಡಿಸ್ 200 ಸಿಡಿಆಯ್ ರೀತಿಯ ಅನೇಕ ದುಬಾರಿ ಕಾರುಗಳು ಇವೆ. ಇದರ ಹೊರತಾಗಿ 75 ಲಕ್ಷ ರೂಪಾಯಿ ಬೆಲೆಯುಳ್ಳ ಹ್ಯಾಮ್ಮರ್ ಎಚ್ 2 ಕಾರು ಸಹ ಇದೆ. ಅಲ್ಲು ಅರ್ಜುನ್ ಅವರು ವರ್ಷಕ್ಕೆ ಸುಮಾರು 35 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. ಅವರ ಕಡೆಗೆ ಒಟ್ಟು 350 ಕೋಟಿ ರೂಪಾಯಿಗಳ ಸಂಪತ್ತಿದೆ ಎಂದು ಹೇಳಲಾಗುತ್ತದೆ. ವರ್ಷವೊಂದಕ್ಕೆ ಸುಮಾರು 30 ರಿಂದ 35 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. ಒಂದು ಚಿತ್ರಕ್ಕಾಗಿ ಅವರು 15 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಾರೆ.