ನೆರೆಮನೆಯವರ ಜಗಳದಲ್ಲಿ ಬೆಕ್ಕು ಮಾಡಿದ ಪ್ರ್ಯಾಂಕ್; ನೋಡಿ ಈ ವೈರಲ್ ವಿಡಿಯೋ…

ಸೋಶಿಯಲ್ ಮೀಡಿಯಾದಲ್ಲಿ ಬೆಕ್ಕಿನ ವಿಡಿಯೋ ಒಂದು ತುಂಬಾನೇ ವೈರಲ್ ಆಗುತ್ತಿದೆ. ಅದನ್ನು ನೋಡಿ ನಿಮಗೂ ಸಹ ನಗು ತಡೆಯಲಾಗುವುದಿಲ್ಲ. ಈ ವಿಡಿಯೋದಲ್ಲಿ ಬೆಕ್ಕಿನ ಚಲನವಲನ ನೋಡಿ ನಿಜಕ್ಕೂ ಅಚ್ಚರಿ ಎನಿಸುವುದು. ಈ ವೀಡಿಯೋ ನೋಡಿದ ಮೇಲೆ ಕಲಿಯುಗದಲ್ಲಿ ಎಲ್ಲವೂ ಸಾಧ್ಯವಿದೆ ಎಂದೆನಿಸುವುದು. ಕೆಲವು ಬೆಕ್ಕುಗಳು ಪರದೆ ಹಿಂದಿನಿಂದ ತಮ್ಮ ಮುಂದುಗಡೆ ನಡೆಯುತ್ತಿರುವ ಜಗಳವನ್ನು ನೋಡುತ್ತಿವೆ. ಅಲ್ಲಿ ನಡೆದಿರುವ ಜಗಳವನ್ನು ತುಂಬಾ ಶಾಂತವಾಗಿ ವೀಕ್ಷಿಸುತ್ತಿವೆ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.

ಈ ವೈರಲ್ ವಿಡಿಯೋದಲ್ಲಿ ಮೊದಮೊದಲು ಬೆಕ್ಕುಗಳು ಶಾಂತವಾಗಿ ಏನನ್ನು ನೋಡುತ್ತಿವೆ ಎಂಬುದು ಗೊತ್ತಾಗುವುದಿಲ್ಲ. ನಂತರ ವಿಡಿಯೋ ಮುಂದೆ ಸಾಗಿದಂತೆ ಎರಡನೆಯ ಬೆಕ್ಕೊಂದು ತನ್ನ ಎರಡು ಕಾಲುಗಳ ಮೇಲೆ ನಿಂತು ನೆರೆಯ ಬೆಕ್ಕುಗಳ ಕಡೆಗೆ ಗಮನವಿಟ್ಟು ನೋಡುತ್ತಿದೆ. ಇದರ ಮೇಲಿಂದ ಬಾಗಿಲಲ್ಲಿ ನಿಂತ ಬೆಕ್ಕಿನ ಮನೆಯಲ್ಲಿ ಯಾವುದೋ ವಿಷಯಕ್ಕೆ ಸಂಬಂಧಿಸಿ ಜಗಳದ ಶಬ್ದ ಕೇಳಿಬರುತ್ತಿದೆ. ಈ ಜಗಳದ ಶಬ್ದ ನೆರೆಮನೆಗೆ ಕೇಳಿಸಿದಾಗ ನೆರೆಮನೆಯಲ್ಲಿಯ ಬೆಕ್ಕು ಜಗಳ ನೋಡಲು ಅವರ ಪಡಸಾಲೆಯಲ್ಲಿ ಬಂದಿದೆ.

ಅದೇ ಸಮಯಕ್ಕೆ ನೆರೆಮನೆಯ ಬೆಕ್ಕು ಶಾಂತವಾಗಿ ತನ್ನ ಸ್ಥಳದಲ್ಲಿ ನಿಂತಿದೆ. ಹೀಗೆ ಬೆಕ್ಕುಗಳು ಜಗಳ ನಡೆದಾಗ ಪರಸ್ಪರ ನೋಡುತ್ತಿವೆ. ವಿಡಿಯೋದಲ್ಲಿನ ಈ ದೃಶ್ಯವು ನೋಡಲು ತುಂಬಾ ಚೆನ್ನಾಗಿದೆ. ಏಕೆಂದರೆ ಈ ರೀತಿಯ ಪ್ರಸಂಗಗಳು ಎಷ್ಟೋ ಸಲ ನಮ್ಮ ನಿಮ್ಮ ಮನೆ ಹತ್ತಿರ ನಡೆಯುತ್ತವೆ. ಆ ಸಮಯದಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿಯ ಜನರು ಇಚ್ಛೆ ಇದ್ದರೂ ಜಗಳ ಬಿಡಿಸಲಿಕ್ಕೆ ಮುಂದಾಗುವುದಿಲ್ಲ. ಇದೇ ರೀತಿಯ ಪ್ರಸಂಗವು ಬೆಕ್ಕುಗಳ ಮುಖಾಂತರ ವಿಡಿಯೋದಲ್ಲಿ ನೋಡಲು ಸಿಗುವುದು.

ವಿಡಿಯೋ ನೋಡಿ

ಈ ವಿಡಿಯೋವನ್ನು ಐಪಿಎಸ್ ಅಧಿಕಾರಿಯಾದ ರೂಪಿನ್ ಶರ್ಮ ಅವರು ಅಕ್ಟೋಬರ್ 23 ರಂದು ತಮ್ಮ ಸೋಶಿಯಲ್ ಮಿಡಿಯಾ ಟ್ವೀಟರ್ ಅಕೌಂಟ್ ಮೂಲಕ ಮಾಡಿದ್ದಾರೆ.