ನೆರೆಮನೆಯಾಕೆ ಜೊತೆ ಅಫೇರ್ ಇಟ್ಟು ಕೊಂಡು, ಯಾರಿಗೂ ತಿಳಿಯದಂತೆ ಭೇಟಿ ಮಾಡಲು ಆಕೆಯ ಬೆಡ್ ರೂಂ ಗೆ ಸುರಂಗ ತೋಡಿದ ಭೂಪ!

ಕೆಲವರು ತಮ್ಮ ಚ ಟ ಅಥವಾ ತಮ್ಮ ದು ರ ಭ್ಯಾ ಸ ಗಳನ್ನು ತೀರಿಸಿಕೊಳ್ಳಲು ಯಾವುದೇ ರೀತಿಯ ರಿ ಸ್ಕ ನ್ನು ಕೂಡ ತೆಗೆದುಕೊಳ್ಳಲು ಹಿಂದು ಮುಂದು ನೋಡುವುದಿಲ್ಲ. ಕೆಲವೊಮ್ಮೆ ಇಂತಹವರು ಮಾಡುವ ಕೆಲಸಗಳು ಮಾಧ್ಯಮಗಳಲ್ಲಿ ಸುದ್ದಿಯಾದಾಗ ಅದು ಎಲ್ಲರ ಗಮನವನ್ನು ಸೆಳೆಯುವುದು ಮಾತ್ರವೇ ಅಲ್ಲದೇ, ಅವರು ಮಾಡಿದ ಕೆಲಸಗಳನ್ನು ನೋಡಿ ಜನ ಆಶ್ಚರ್ಯ ಪಡುವುದು ಒಂದೆಡೆಯಾದರೆ, ಮತ್ತೊಂದು ಕಡೆ ಇಂತಹವರು ಕೂಡ ಇರುತ್ತಾರೆಯೇ ಎನ್ನುವ ಒಂದು ಆಲೋಚನೆ ಕೂಡ ಮಾಡುವಂತಹ ಪರಿಸ್ಥಿತಿ ಎದುರಾಗುತ್ತದೆ. ಇಂತಹುದೇ ಒಂದು ವಿಚಿತ್ರವಾದ ಘಟನೆಯೊಂದು ಎಲ್ಲೆಡೆ ಸುದ್ದಿಯಾಗಿದ್ದು, ಇಲ್ಲಿ ರಸಿಕ ಮಹಾಶಯನೊಬ್ಬನು ನೆರೆಮನೆಯಾಕೆಯನ್ನು ಕದ್ದು ಮುಚ್ಚಿ ಭೇಟಿಯಾಗಲು ಸುರಂಗ ಮಾರ್ಗವನ್ನೇ ತೋಡಿದ್ದ, ಜನರು ನಗು, ಆಶ್ಚರ್ಯ ಎರಡೂ ಪಡುವಂತಾಗಿದೆ.

ಈ ವಿಚಿತ್ರವಾದ ಘಟನೆ ನಡೆದಿರುವುದು ಮೆಕ್ಸಿಕೋದಲ್ಲಿ. ಮೆಕ್ಸಿಕೋ ಟಿಯುವಾನ್ ನಗರದಲ್ಲಿ ವಾಸವಿರುವ ಆಲ್ಬರ್ಟೋ ಎನ್ನುವ ವ್ಯಕ್ತಿ, ತನ್ನ ಮನೆಯ ಬಳಿಯಲ್ಲಿ ವಾಸವಿದ್ದ ಪಮೇಲಾ ಎನ್ನುವ ವಿವಾಹಿತ ಮಹಿಳೆಯೊಂದಿಗೆ ಅಫೇರ್ ಇಟ್ಟುಕೊಂಡಿದ್ದ. ಆಲ್ಬರ್ಟ್ ಗೆ ಕೂಡಾ ಅದಾಗಲೇ ಮದುವೆಯಾಗಿದ್ದರೂ ಕೂಡಾ ಆತ ಅದರ ಹೊರತಾಗಿಯೂ ನೆರೆಮನೆಯಾಕೆಯೊಡನೆ ಪ್ರೇಮಪಾಶದಲ್ಲಿ ಸಿಲುಕಿದ್ದ. ಆಲ್ಬರ್ಟ್ ಆಕೆಯನ್ನು ಭೇಟಿ ಮಾಡಲು ಯಾರಿಗೂ ತಿಳಿಯದಂತೆ ಹೋಗಲು, ತಮ್ಮ ಭೇಟಿಯ ಸುಳಿವು ಕೂಡಾ ಯಾರಿಗೂ ಸಿಗಬಾರದೆಂದು ನೆಲದೊಳಗೆ ಬಂದು ಸುರಂಗ ಮಾರ್ಗವನ್ನೇ ತೋಡಿಬಿಟ್ಟಿದ್ದಾನೆ.

ತಾನು ತೋಡಿದ ಈ ಸುರಂಗಮಾರ್ಗದ ಸಹಾಯದಿಂದ ಆಲ್ಬರ್ಟ್ ಸದ್ದುಗದ್ದಲವಿಲ್ಲದೆ ನೆರೆಮನೆಯಾಕೆಯನ್ನು ಆಕೆಯ ಪತಿ ಇಲ್ಲದಿರುವಾಗ ಭೇಟಿ ಮಾಡಿ ಬರುತ್ತಿದ್ದ. ಆದರೆ ಹೀಗೆ ನಡೆಯುತ್ತಿದ್ದ ಅವರ ನಡುವಿನ ಈ ಕಳ್ಳಾಟವನ್ನು ಪಮೇಲಾ ಳ ಪತಿ ರೆಡ್ ಹ್ಯಾಂಡಾಗಿ ಹಿಡಿದು ಹಾಕಿದ್ದಾನೆ. ಪಮೇಲಾಳ ಪತಿ ಜಾರ್ಜ್ ಭದ್ರತಾ ಸಿಬ್ಬಂದಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದು, ಆತ ಒಂದು ದಿನ ತಲೆ ಕೆಲಸದಿಂದ ಬೇಗ ಬಂದಿದ್ದಾನೆ. ಆಗ ರೂಮಿನಲ್ಲಿ ಮಂಚದ ಬಳಿ ಆಲ್ಬರ್ಟ್ ಅಡಗುತ್ತಿರುವುದನ್ನು ನೋಡಿದ್ದಾನೆ. ಆದರೆ ಅಡಗಿಕೊಂಡ ಆಲ್ಬರ್ಟ್ ಕಣ್ಮರೆಯಾಗಿದ್ದನ್ನು ಗಮನಿಸಿ ಜಾರ್ಜ್ ಇಡೀ ಕೋಣೆಯನ್ನೆಲ್ಲಾ ಹುಡುಕಿದರೂ ಕೂಡ ಆಲ್ಬರ್ಟ್ ನಾಪತ್ತೆಯಾಗಿಲ್ಲ.

ಕಣ್ಣೆದುರಲ್ಲೇ ಕಂಡು, ಕೆಲವೇ ಕ್ಷಣಗಳಲ್ಲಿ ಕಣ್ಮರೆಯಾದ ಆಲ್ಬರ್ಟ್, ಅಲ್ಲಿಂದ ಹೇಗೆ ತಪ್ಪಿಸಿಕೊಂಡ ಎಂಬುದನ್ನು ಜಾರ್ಜ್ ಕೈಯಿಂದ ಜೀರ್ಣಿಸಿಕೊಳ್ಳಲಾಗದೆ, ಆತ ಇಡೀ ಕೋಣೆಯಲ್ಲಿ ಎಲ್ಲಾ ಕಡೆ ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದಾರೆ. ಹಾಗೆ ಹುಡುಕಾಡುವಾಗ ಮಂಚದ ಕೆಳಗೆ ಅವರಿಗೆ ಸುರಂಗ ಕಂಡುಬಂದಿದೆ. ಜಾರ್ಜ್ ಆ ಸುರಂಗದೊಳಗೆ ಇಳಿದು ನಡೆದು ಕೊಂಡು ಹೋದಾಗ ಅವರು ನೇರವಾಗಿ ಆಲ್ಬರ್ಟ್ ನ ಮನೆಯನ್ನು ತಲುಪಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ ಆಲ್ಬರ್ಟ್ ಸುರಂಗವನ್ನು ಬಹಳ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿಸಿದ್ದನು ಎನ್ನಲಾಗಿದೆ.

ಜಾರ್ಜ್ ಕೈಗೆ ಸಿಕ್ಕಿಹಾಕಿಕೊಂಡ ಆಲ್ಬರ್ಟ್ ಜಾರ್ಜ್ ನ ಬಳಿ ತಾನು ಪಮೇಲಾ ಜೊತೆಗೆ ಸಂಬಂಧ ಅಫೇರ್ ಇಟ್ಟುಕೊಂಡ ವಿಷಯವನ್ನು ತನ್ನ ಹೆಂಡತಿಗೆ ಮಾತ್ರ ತಿಳಿಸದಂತೆ ಪರಿಪರಿಯಾಗಿ ಮನವಿಯನ್ನು ಮಾಡಿಕೊಂಡಿದ್ದಾನೆ. ಆದರೆ ಜಾರ್ಜ್ ಮಾತ್ರ ಆತನ ಮನವಿಯನ್ನು ಕೇಳಿಲ್ಲ. ಬದಲಾಗಿ ಜಾರ್ಜ್ ಆಲ್ಬರ್ಟ್ ನ ಎಲ್ಲಾ ವಿಷಯವನ್ನೂ ಕೂಡ ಆತನ ಪತ್ನಿಗೆ ತಿಳಿಸಿದ್ದಾರೆ. ಅನಂತರ ಅವರಿಬ್ಬರ ನಡುವೆ ಇದು ಜಗಳಕ್ಕೆ ಕಾರಣವಾಯಿತು ಎನ್ನಲಾಗಿದೆ. ಒಟ್ಟಾರೆ ಆಲ್ಬರ್ಟ್ ನೆರಮನೆಯಾಕೆಗಾಗಿ ಮಾಡಿದ ಕೆಲಸ ರಹಸ್ಯವಾಗಿ ಮಾತ್ರ ಉಳಿದಿಲ್ಲ. ಆತ ಮಾಡಿದ ಕೆಲಸಕ್ಕೆ ಈಗ ಎಲ್ಲೆಡೆ ಜನರು ಗೇಲಿ ಮಾಡುವಂತೆ ಆಗಿದೆ.