ನೇರ ಕಿರಾಣಿ ಅಂಗಡಿಯಲ್ಲಿ ಹೊಕ್ಕಿತು ಕಾರು; ಅಂಗಡಿ ಮಾಲೀಕ ಸ್ವಲ್ಪದರಲ್ಲಿಯೇ ಬಚಾವ್! ಮೈ ಕಂಪಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ…
ಅನೇಕ ಅಪಘಾತಗಳು ತುಂಬಾ ವಿಚಿತ್ರವಾಗಿರುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಬರೀ ರೋಡ್ ಮೇಲೆಯೇ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಂದು ಸಲ ನಮ್ಮ ವಿಚಾರಕ್ಕೂ ಮೀರಿ ದುರ್ಘಟನೆಗಳು ವಿಚಿತ್ರವಾಗಿ ನಡೆಯುತ್ತವೆ.
ಇಲ್ಲಿ ನೋಡುವ ವಿಡಿಯೋ ಸಹ ಇದೇ ರೀತಿಯ ಅಪಘಾತದಿಂದ ಕೂಡಿದೆ. ಪ್ರಸ್ತುತ ಘಟನೆ ಮಹಾರಾಷ್ಟ್ರದ ನಾಸಿಕ ಜಿಲ್ಲೆಯಲ್ಲಿ ನಡೆದಿದೆ. ಖೇರವಾಡಿ-ಚಂದೋರಿ ರಸ್ತೆಯ ಮೇಲೆ ಕಾರು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಾರು ನೇರವಾಗಿ ರಸ್ತೆಬದಿಗೆ ಇರುವ ಕಿರಾಣಿ ಅಂಗಡಿಯಲ್ಲಿಯೇ ನುಗ್ಗಿದೆ.
ಈ ಅವಘಡದಿಂದಾಗಿ ಕಿರಾಣಿ ಅಂಗಡಿ ಸಾಕಷ್ಟು ಹಾನಿಗೊಳಗಾಗಿದೆ. ಆದರೆ ಅದೃಷ್ಟ ಚೆನ್ನಾಗಿತ್ತು. ಅಲ್ಲಿರುವ ಅಂಗಡಿಯ ಮಾಲೀಕ ಮತ್ತು ಗ್ರಾಹಕ ಇಬ್ಬರು ಯಾವುದೇ ಗಾಯವಿಲ್ಲದೆ ಅನಾಹುತದಿಂದ ಪಾರಾಗಿ ಉಳಿದಿದ್ದಾರೆ. ಈ ಎದೆ ಡವಗುಟ್ಟುವ ದೃಶ್ಯ ಮಾತ್ರ ಅಲ್ಲಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣದಲ್ಲಿ ಕಾರು ಚಾಲಕನ ವಿರುದ್ಧ ಕೇಸು ದಾಖಲಾಗಿದೆ.
ಗ್ರಾಹಕನೊಬ್ಬ ಅಂಗಡಿಯ ಎದುರಿಗೆ ನಿಂತು ತನಗೆ ಬೇಕಾದ ವಸ್ತುವನ್ನು ಖರೀದಿಸುತ್ತಿದ್ದನು. ಅದೇ ಸಮಯದಲ್ಲಿ ಕಾರು ಶರವೇಗದಲ್ಲಿ ಬರುತ್ತಿರುವುದನ್ನು ಕಂಡ ಗ್ರಾಹಕ ಜೀವ ಉಳಿಸಿಕೊಳ್ಳಲು ಅಲ್ಲಿಂದ ಕ್ಷಣಾರ್ಧದಲ್ಲಿ ಪಲಾಯನ ಮಾಡಿದ್ದಾನೆ. ಇದನ್ನು ಗಮನಿಸಿದ ಅಂಗಡಿ ಮಾಲೀಕನೂ ಸಹ ಪ್ರಾಣ ಉಳಿಸಿಕೊಳ್ಳಲು ಕೌಂಟರ್ ಮೇಲಿಂದ ಜಿಗಿದು ಹೊರಗೆ ಬರುವಷ್ಟರಲ್ಲಿಯೇ ಕಾರು ಒಳಗೆ ನುಗ್ಗಿ ಬಿಟ್ಟಿತ್ತು. ಈ ಅವಘಡದಲ್ಲಿ ಅಂಗಡಿಯು ತುಂಬಾ ಜಖಮ್ ಗೊಂಡಿದೆ. ಆದರೆ ಇಬ್ಬರ ಜೀವ ಮಾತ್ರ ಯಾವುದೇ ಚಿಕ್ಕಪುಟ್ಟ ಗಾಯವೂ ಇಲ್ಲದೆ ಬದುಕಿದೆ.
ನೋಡಿ ಈ ವಿಡಿಯೋ…
VIDEO: थेट किराणा दुकानात घुसली कार, दुकानदार थोडक्यात बचावले, नाशिकमधील घटनेचा थरार सीसीटीव्हीत कैद
— LoksattaLive (@LoksattaLive) February 5, 2022
सविस्तर वृत्त वाचा…https://t.co/0gJ5npjz0X#Nashik #Accident #CCTV pic.twitter.com/ULAHqv9aBF
ಕಾರು ವೇಗವಾಗಿ ಒಳನುಗ್ಗಿ ಬರುವಾಗ ಅಂಗಡಿ ಮಾಲೀಕ ಅಂಗಡಿಯಲ್ಲಿ ಇದ್ದನು. ಸಮಯಕ್ಕೆ ಸರಿಯಾಗಿ ಅಂಗಡಿಯೊಳಗಿಂದ ಜಿಗಿದು ಹೊರಗೆ ಹಾರಿ ಬಂದದ್ದಕ್ಕಾಗಿ ಆತನಿಗೆ ಯಾವುದೇ ರೀತಿಯ ಗಾಯವಾಗಿಲ್ಲ. ಆದ್ದರಿಂದಲೇ ನಾವು ಎಷ್ಟೇ ಕಾಳಜಿ ವಹಿಸಿದರೂ ಅಪಘಾತಗಳು ಯಾವ ರೀತಿ, ಹೇಗೆ ಮತ್ತು ಎಲ್ಲಿ ಸಂಭವಿಸುತ್ತದೆ ಎಂಬುದು ಹೇಳಲಿಕ್ಕೆ ಸಾಧ್ಯವಿಲ್ಲ.