ನೋಡನೋಡುತ್ತಲೇ ಕಾಗದದ ಹಾಗೆ ಹರಿದುಹೋದ ದೊಡ್ಡ ಬ್ರಿಡ್ಜ್! ಭೀಕರ ದೃಶ್ಯ CCTVಯಲ್ಲಿ ಸೆರೆ; ನೋಡಿ ಈ ವೈರಲ್ ವಿಡಿಯೋ…
ಸಿಸಿಟಿವಿ ಕ್ಯಾಮೆರಾಗಳು ಬಂದು ಆಗಿ ಹೋದ ಘಟನೆಗಳನ್ನು ಮತ್ತೊಮ್ಮೆ ಮಗದೊಮ್ಮೆ ನೋಡಲು ಸಹಾಯವಾಗುತ್ತಿವೆ. ಕೆಲವಂತೂ ಘಟನೆಗಳು ತುಂಬಾ ಭಯಾನಕವಾಗಿರುತ್ತವೆ. ಇಂಥ ವಿಡಿಯೋಗಳು ನೋಡಿದಾಗ ಕೆಲವರು ಶಾಕ್ ಆಗುವುದು ನಿಜ. ಕೆಲವೊಂದು ವಿಡಿಯೋಗಳು ನೋಡಿದಾಗ ನಮ್ಮ ಕಣ್ಣುಗಳೇ ನಂಬುವುದಿಲ್ಲ. ಇದೇ ರೀತಿಯ ಒಂದು ಶಾಕ್ ನೀಡುವ ವಿಡಿಯೋ ಈ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ವಿಡಿಯೋದಲ್ಲಿ ದೊಡ್ಡ ಬ್ರಿಡ್ಜ್ ಹರಿಯುವ ನೀರಿನ ಪ್ರವಾಹದ ಅಷ್ಟೇ ಅಷ್ಟೇಲ್ಲಿ ಕಾಗದ ಹರಿದು ಹೋದಂತೆ ಕೊಚ್ಚಿ ಹೋಗಿಬಿಟ್ಟಿದೆ. ಅಷ್ಟೇ ಅಲ್ಲ ಆ ಬ್ರಿಜ್ ಮೇಲೆ ತಿರುಗಾಡುತ್ತಿರುವ ಕೆಲವು ಜನರು ಸಹ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಎಲ್ಲ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ನೋಡಿದಾಗ ಭಯ ಆವರಿಸುವುದು ನಿಜ.
ವಿಡಿಯೋದಲ್ಲಿ ಕಾಣುವ ಹಾಗೆ ಅಲ್ಲಿಯ ಹವಾಮಾನವು ತುಂಬಾ ವಿಪರೀತವಾಗಿ ಬಿಟ್ಟಿದೆ. ರಸ್ತೆಯ ಬದಿಗೆ ವ್ಯಕ್ತಿಯೊಬ್ಬ ವಾಹನವನ್ನು ನಿಲ್ಲಿಸಿ ಯಾರದೋ ದಾರಿ ಕಾಯುವಂತೆ ಕಾಣುತ್ತಿದೆ. ಇನ್ನೊಂದು ಕಡೆ ಬ್ರಿಜ್ ಮೇಲಿನಿಂದ ಜನರು ಹೋಗಿ ಬರುವುದು ಸತತವಾಗಿ ನಡೆದಿದೆ. ಬ್ರಿಜ್ ಮೇಲೆ ಅಷ್ಟೊಂದು ಜನಜಂಗುಳಿ ಇಲ್ಲದೆ ಇದ್ದರೂ ನೀರಿನ ಪ್ರವಾಹದ ರಭಸಕ್ಕೆ ನೋಡನೋಡುತ್ತಿದ್ದಂತೆ ಒಮ್ಮೆಲೆ ಸೇತುವೆ ಜಲಸಮಾಧಿ ಆಗಿಬಿಡುತ್ತದೆ. ಇದ್ಯಾವುದನ್ನು ಲೆಕ್ಕಿಸದೆ ಅಲ್ಲಿಯೇ ನಿಂತ ಜನರು ನಂತರ ಹೆದರಿ ಓಡಿ ಹೋಗಲು ಯತ್ನಿಸುತ್ತಾರೆ. ಸೇತುವೆ ನೀರಿನಲ್ಲಿ ಹರಿದು ಹೋಗುವಾಗ ಆ ನೀರಿನ ಜೊತೆಗೆ ಸೇತುವೆ ಮೇಲಿನವರು ಸಹ ಕೊಚ್ಚಿ ಹೋಗುತ್ತಾರೆ.
memewalanews ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಈ ವೈರಲ್ ವಿಡಿಯೋವನ್ನು ಶೇರ್ ಮಾಡಲಾಗಿದೆ. ವಿಡಿಯೋದ ಕ್ಯಾಪ್ಷನ್ ನಲ್ಲಿ ಪ್ರಸ್ತುತ ಘಟನೆ ಬ್ರಜಿಲ್ ದೇಶದಲ್ಲಿಯದಿದೆ ಎಂದು ಹೇಳಲಾಗಿದೆ. ಈ ವಿಡಿಯೋ ಪೋಸ್ಟ್ ಮಾಡಿದ ನಂತರ ಒಂದೇ ಸಮನೆ ವೈರಲ್ ಆಗುತ್ತಿದೆ.
ನೋಡಿ ಈ ವೈರಲ್ ವಿಡಿಯೋ..