ನೋಡುಗರ ಎದೆ ಬಡಿತ ಹೆಚ್ಚಿಸೋ ಹೆಜ್ಜೆಗಳನ್ನು ಹಾಕಿದ ಧನಾಶ್ರೀ ವರ್ಮಾರ ಮತ್ತೊಂದು ಡಾನ್ಸ್ Video Viral!
ಆಕೆಯನ್ನು ಸದ್ಯಕ್ಕೆ ಸೋಶಿಯಲ್ ಮೀಡಿಯಾದ ಡಾನ್ಸಿಂಗ್ ಸೆನ್ಸೇಷನ್ ಅಂತ ಬೇಕಿದ್ರೂ ಕರೀಬಹುದು, ಅಥವಾ ಡಾನ್ಸ್ ಪ್ರೇಮಿಗಳ ಡಾನ್ಸ್ ದೀವಾ ಅಂತ ಬೇಕಾದ್ರೂ ಹೇಳಬಹುದು. ಯಾಕೆ ಅಂತೀರಾ? ಕಾರಣ ಖಂಡಿತ ಇದೆ. ಅದೇನೆಂದ್ರೆ ಆಕೆಯ ಡಾನ್ಸ್ ವೀಡೀಯೋಗಳು ಒಂದಾದ ಮೇಲೆ ಇನ್ನೊಂದು ಸೋಶಿಯಲ್ ಮೀಡಿಯಾದಲ್ಲೊಂದು ಸಂಚಲನವನ್ನು ಹುಟ್ಟು ಹಾಕ್ತಾ, ನೃತ್ಯ ಪ್ರೇಮಿಗಳು ಹುಚ್ಚೆದ್ದು ಕುಣಿಯೋ ಹಾಗೆ ಮಾಡ್ತಾ ಇದ್ದಾವೆ. ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಹೊಸ ಟ್ರೆಂಡ್ ಸೃಷ್ಟಿ ಮಾಡ್ತಾ ಇದ್ದಾವೆ. ಹಾಗಾದ್ರೆ ಯಾರು ಆ ಡಾನ್ಸರ್ ಅಂತೀರಾ, ಅದು ಮತ್ತಾರೂ ಅಲ್ಲ ಭಾರತದ ಕ್ರಿಕೆಟ್ ಆಟಗಾರ ಯಜ್ವೇಂದ್ರ ಚಹಲ್ ಅವರ ಭಾವೀ ಪತ್ನಿ, ಸುಪ್ರಸಿದ್ಧ ಯೂಟ್ಯೂಬರ್ ಆಗಿರೋ ಧನಾಶ್ರೀ ವರ್ಮಾ.
ಕಳೆದ ಕೆಲವು ತಿಂಗಳುಗಳಿಂದ ಕೂಡಾ ಧನಾಶ್ರೀ ಅವರ ಡಾನ್ಸ್ ವೀಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇವೆ. ಅದೇ ಸಾಲಲ್ಲಿ ಈಗ ಮತ್ತೊಂದು ಹಾಡಿಗೆ ಧನಾಶ್ರೀ ವರ್ಮಾ ಮಾಡಿರೋ ಸಖತ್ ಡಾನ್ಸ್ ನೋಡುಗನ ಹೃದಯ ಬಡಿತವನ್ನು ಹೆಚ್ಚಿಸಿ, ಹೆಜ್ಜೆ ಹಾಕೋ ಹಾಗೆ ಮಾಡ್ತಾ ನೆಟ್ಟಿಗರ ಮೇಲೆ ತನ್ನ ಮೋಡಿಯನ್ನು ಮಾಡ್ತಾ ಇದೆ. ಧನಾಶ್ರೀ ವರ್ಮಾ ರೆಡ್ ಜಾಕೆಟ್ , ಬ್ಲಾಕ್ ಡ್ರೆಸ್ ಹಾಕಿ ಈ ಬಾರಿ ಬಾಲಿವುಡ್ ನ ಕಲಂಕ್ ಸಿನಿಮಾದ ಫಸ್ಟ್ ಕ್ಲಾಸ್ ಹಾಡಿಗೆ ಫಸ್ಟ್ ಕ್ಲಾಸ್ ಅನಿಸೋಂತ ಸ್ಟೆಪ್ ಗಳನ್ನು ಹಾಕಿದ್ರೆ ಅದನ್ನು ನೋಡಿದ ಡಾನ್ಸ್ ಅಭಿಮಾನಿಗಳು ಕೂಡಾ ಧನಾಶ್ರೀ ಡಾನ್ಸ್ ಫಸ್ಟ್ ಕ್ಲಾಸ್ ಅನ್ನೋ ಕಾಮೆಂಟ್ ಗಳನ್ನು ನೀಡ್ತಾ ಇದ್ದಾರೆ ಅನ್ನೋದು ಕೂಡಾ ನಿಜ.
ಈ ಹಾಡಿನಲ್ಲಿ ಮೊದಲು ಧನಾಶ್ರೀ ವರ್ಮ ತನ್ಮ ಇಡೀ ಡಾಮ್ಸ್ ತಂಡದೊಂದಿಗೆ ಡಾನ್ಸ್ ಆರಂಭ ಮಾಡ್ತಾರೆ. ಹಾಗೇ ಹಾಡು ಮುಂದುವರೆದಂತೆ ಆಕೆ ಸಿಂಗಲ್ ಆಗಿ ಧೂಳೆಬ್ಬಿಸೋ ರೇಂಜ್ ಗೆ ಹೆಜ್ಜೆ ಹಾಕಿದ್ದಾರೆ. ಈ ಡಾನ್ಸ್ ನಲ್ಲಿ ಆಕೆಯ ಡಾನ್ಸ್ ಮೂವ್ಸ್ ನೋಡಿದ ಅಭಿಮಾನಿಗಳು ಅದನ್ನು ಬಹಳ ಅಂದ್ರೆ ಬಹಳ ಮೆಚ್ಚಿ ಕೊಂಡಿದ್ದಾರೆ. ಮುಂಬೈ ಡಾನ್ಸರ್ಸ್ ಧನಾಶ್ರೀ ಅವರ ಈ ಸೂಪರ್ ಡಾನ್ಸ್ ನ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದು, ಅದನ್ನು ನೋಡಿದ ಅಸಂಖ್ಯಾತ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆಗಳನ್ನು ಕೂಡಾ ನೀಡುವ ಮೂಲಕ ಮತ್ತೊಂದು ಸಲ ಧನಾಶ್ರೀ ವರ್ಮಾ ಅವರ ವೀಡಿಯೋನ ವೈರಲ್ ಮಾಡಿದ್ದಾರೆ.
ವಿಡಿಯೋ ನೋಡಿ….
ಧನಾಶ್ರೀ ವರ್ಮಾ ಜನಪ್ರಿಯತೆ ಯೂಟ್ಯೂಬರ್ ಆಗಿರುವುದರ ಜೊತೆಗೆ ಅವರೊಬ್ಬ ಅದ್ಭುತ ಡಾನ್ಸರ್ ಅನ್ನೋದನ್ನು ಈಗಾಗಲೇ ಸಾಕಷ್ಟು ವೀಡಿಯೋಗಳ ಮೂಲಕ ಸಾಬೀತು ಮಾಡಿದ್ದಾರೆ. ಡಾಕ್ಟರ್ ಆಕೆ ಅಂತ ಹೇಳಿದ್ರೆ ನಂಬೋರು ಕಡಿಮೆ ಯಾಕಂದ್ರೆ ಆಕೆ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿರೋದು ತನ್ನ ಡಾನ್ಸ್ ಗಳ ಮೂಲಕ. ಧನಾಶ್ರೀ ವರ್ಮಾ ಡಾನ್ಸ್ ವೀಡಿಯೋಗಳು ಇತ್ತೀಚಿನ ದಿನಗಳಲ್ಲಿ ವೈರಲ್ ಆಗ್ತಾನೇ ಇದ್ದು ಸದಾ ಸುದ್ದಿಯಲ್ಲಿ ಅಂತೂ ಇದ್ದೇ ಇರುತ್ತೆ. ಕೆಲವೇ ಸಮಯದ ಹಿಂದೆ ಅವರು ಕ್ರಿಕೆಟರ್ ಯಜ್ವೇಂದ್ರ ಚಹಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಆಗ ನಿಶ್ಚಿತಾರ್ಥದ ಫೋಟೋಗಳು ಕೂಡಾ ವೈರಲ್ ಆಗಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.