ನೋಡು ನೋಡುತ್ತಲೇ ಇಡೀ ಮೊಟ್ಟೆಯನ್ನೇ ನುಂಗಿ ಹಾಕಿದ ಸಣ್ಣ ಹಾವು: ವೈರಲ್ ಆಯ್ತು ರೋಚಕ ವೀಡಿಯೋ

ಹುಟ್ಟಿದ ಪ್ರತಿಯೊಂದು ಜೀವಿಯೂ ಕೂಡಾ ಈ ಭೂಮಿಯ ಮೇಲೆ ಬದುಕಿ ಜೀವನವನ್ನು ಸಾಗಿಸಬೇಕಾದರೆ ಅವುಗಳಿಗೆ ಕೆಲವು ಮೂಲಭೂತವಾದಂತಹ ಅಗತ್ಯಗಳು ಇದ್ದೇ ಇರುತ್ತವೆ.‌ ಇಂತಹ ಮೂಲಭೂತ ಅಗತ್ಯಗಳಲ್ಲಿ ಒಂದು ಆಹಾರ. ಜೀವಿಗಳಿಗೆ ತಮಗೆ ಕೆಲಸ ಮಾಡಲು ಬೇಕಾದ ಶಕ್ತಿಯನ್ನು ಒದಗಿಸುವ ಪ್ರಮುಖ ಮೂಲ ಆಹಾರವಾಗಿರುತ್ತದೆ. ಆಹಾರದ ವಿಷಯಕ್ಕೆ ಬಂದರೆ ವಿವಿಧ ಜೀವಿಗಳ ಆಹಾರ ಕ್ರಮವು ಭಿನ್ನ ವಿಭಿನ್ನವಾಗಿರುತ್ತದೆ ಕೆಲವು ಜೀವಿಗಳು ತಮ್ಮ ಜೀವನ ಕ್ರಮದಲ್ಲಿ ಕೇವಲ ಸಸ್ಯಾಹಾರದ ಮೇಲೆ ಅವಲಂಬಿತವಾಗಿದ್ದರೆ, ಇನ್ನು ಕೆಲವು ಜೀವಿಗಳ ಮುಖ್ಯ ಆಹಾರವು ಮಾಂ ಸವಾಗಿರುತ್ತದೆ.‌ ಆದರೆ ಕೆಲವು ಜೀವಿಗಳು ಮಾತ್ರ ಸಸ್ಯ ಹಾಗೂ ಮಾಂಸ ಎರಡನ್ನು ಕೂಡ ಆಹಾರದಲ್ಲಿ ಬಳಸಿಕೊಳ್ಳುವುದು ಕೂಡಾ ಉಂಟು.

ಆಹಾರವು ಎಷ್ಟೇ ವಿಧದಲ್ಲಿ ಇದ್ದರೂ ಕೂಡಾ ಪ್ರತಿಯೊಂದು ಜೀವಿಗೂ ಕೂಡ ಅದರದೇ ಆದಂತಹ ಇಷ್ಟವಾದ ವಿಶೇಷ ಆಹಾರ ಎಂಬುದು ಇದ್ದೇ ಇರುತ್ತದೆ. ಹಾಗೆಯೇ ಕೆಲವು ಜೀವಿಗಳ ವಿಶೇಷ ಆಹಾರ ಏನು ಎಂದು ಕೇಳಿದರೆ ನಾವು ಕೂಡಾ ಅದನ್ನು ಹೇಳಬಲ್ಲೆವು‌. ಉದಾಹರಣೆಗೆ ಬೆಕ್ಕಿಗೆ ಹಾಲು, ನಾಯಿಗೆ ಬಿಸ್ಕೆಟ್ ಹೀಗೆ‌. ಇನ್ನು ಇದೇ ರೀತಿಯಲ್ಲಿ ಹಾವಿನ ವಿಷಯ ಬಂದಾಗ ನಾವು ಥಟ್ಟನೆ ಉತ್ತರಿಸುವುದು ಹಾವಿನ ಪ್ರಮುಖ ಆಹಾರ ಎಂದರೆ ಅದು ಹಾಲು ಮತ್ತು ಮೊಟ್ಟೆ ಎಂದು. ಹಾವು ಮೊಟ್ಟೆಯನ್ನು ತಿನ್ನುತ್ತದೆ ಎಂಬುದನ್ನು ನಾವು ಈಗಾಗಲೇ ತಿಳಿದಿದ್ದೇವೆ. ಅಲ್ಲದೆ ಹಾವುಗಳು ಮೊಟ್ಟೆಯನ್ನು ಸೇವಿಸುವ ಕೆಲವು ವಿಡಿಯೋಗಳನ್ನು ಕೂಡಾ ಸೋಶಿಯಲ್ ಮೀಡಿಯಾ ಗಳಲ್ಲಿ ನಮಗೆ ನೋಡಲು ಸಿಗುತ್ತವೆ.

ಇದೀಗ ಹಾವು ಮೊಟ್ಟೆ ತಿನ್ನುವಂತಹ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿರುವುದನ್ನು ನಾವು ಗಮನಿಸಬಹುದು. ಈ ವೀಡಿಯೋ ಜನರ ಗಮನವನ್ನು ತನ್ನ ಕಡೆಗೆ ಸೆಳೆದಿರುವುದು ಮಾತ್ರವೇ ಅಲ್ಲದೇ ಜನರು ಆಶ್ಚರ್ಯ ದಿಂದ ವೀಡಿಯೋವನ್ನು ನೋಡುವಂತೆ ಮಾಡಿದೆ. ಈ ವೈರಲ್ ವಿಡಿಯೋದಲ್ಲಿ ಹಾವೊಂದು ಇಡಿಯ ಮೊಟ್ಟೆಯನ್ನೇ ಹೇಗೆ ನುಂಗಿ ಬಿಡುತ್ತದೆ ಎಂಬುದನ್ನು ನಾವು ನೋಡಬಹುದಾಗಿದೆ. ಹೌದು ವಿಡಿಯೋದಲ್ಲಿ ಗಮನಿಸಿದಾಗ ವ್ಯಕ್ತಿಯೊಬ್ಬರು ಯಾವುದೋ ಒಂದು ಹಕ್ಕಿಯ ಸಣ್ಣ ಮೊಟ್ಟೆಯೊಂದನ್ನು ಒಂದು ಸಣ್ಣ ಹಾವಿನ ಮರಿಯ ಮುಂದೆ ಆಹಾರವಾಗಿ ಇಟ್ಟಿದ್ದಾರೆ. ಸಹಜವಾಗಿಯೇ ಮೊಟ್ಟೆ ಎಂದರೆ ಇಷ್ಟಪಡುವ ಹಾವು ಆ ಮೊಟ್ಟೆಯ ಕಡೆಗೆ ಬಂದಿದೆ.

ಹಾವಿನ ಮರಿಯು ತನ್ನ ಬಾಯನ್ನು ತೆರೆದು ಸ್ವಲ್ಪ ಸ್ವಲ್ಪವೇ ಮೊಟ್ಟೆಯನ್ನು ಬಾಯೊಳಗೆ ತೆಗೆದುಕೊಳ್ಳುತ್ತಾ, ನಿಧಾನವಾಗಿ ಆ ಇಡಿಯ ಮೊಟ್ಟೆಯನ್ನೇ ನುಂಗಿ ಹಾಕುತ್ತದೆ. ಆ ಮೊಟ್ಟೆಯನ್ನು ನುಂಗಿದ ಮೇಲೆ ಹಾವಿನ ದೇಹದೊಳಗೆ ಕೂಡ ಯಾವ ಭಾಗದಲ್ಲಿ ಮೊಟ್ಟೆ ಇರುತ್ತದೋ ಆ ಭಾಗವು ಮೊಟ್ಟೆಯಕಾರದಲ್ಲೇ ಉಬ್ಬಿರುವುದನ್ನು ಕೂಡಾ ನಾವು ಗಮನಿಸಬಹುದು.ಒಟ್ಟಾರೆ ಮೊಟ್ಟೆ ನುಂಗಿದ ಹಾವಿನ ಈ ವೀಡಿಯೋ ಬಹಳಷ್ಟು ಜನರ ಗಮನವನ್ನು ಸೆಳೆದಿದ್ದು, ಲಕ್ಷ ಲಕ್ಷ ಸಂಖ್ಯೆಗಳಲ್ಲಿ ಜನರು ವೀಡಿಯೋವನ್ನು ನೋಡಿದ್ದು ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ವಿಡಿಯೋ ನೋಡಿ

ಈ ಹಾವನ್ನು ಆಲ್ಬೀನೋ ರೋಂಬಿಕ್ ಎಗ್ ಈಟರ್ ಎನ್ನಲಾಗಿದೆ‌. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಕೂಡಾ ವಿವಿಧ ರೀತಿಯಲ್ಲಿ ತಮ್ಮ ಅನಿಸಿಕೆಗಳನ್ನು ಪ್ರತಿಕ್ರಿಯೆಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಕೆಲವರು ಈ ವಿಡಿಯೋ ನೋಡಿ ತಮ್ಮ ತಲೆಗಿಂತ ದಪ್ಪನಾದ ಆಹಾರವನ್ನು ಎಂದೂ ಕೂಡಾ ಸೇವಿಸಬಾರದು ಎಂದು ವ್ಯಂಗ್ಯವಾಡಿದ್ದಾರೆ. ನೆಟ್ಟಿಗರು ಒಬ್ಬರು ಹಾವಿನ ದೇಹದೊಳಗೆ ಮೊಟ್ಟೆ ಇರುವಾಗ ಅದರ ಉಬ್ಬಿದ ಭಾಗದಿಂದಲೇ ಮೊಟ್ಟೆಯನ್ನು ಒಡೆಯಬೇಕೆಂಬ ಆಸೆ ನನಗಿದೆ ಎಂದಿದ್ದಾರೆ. ಇನ್ನು ಕೆಲವರು ಹಾವು ಮೊಟ್ಟೆ ನುಂಗಿದ್ದನ್ನು ನೋಡಿ ಮೊಟ್ಟೆ ಯಿಟ್ಟ ಪಕ್ಷಿ ತನ್ನ ಮಟ್ಟೆ ಕಳೆದುಹೋಗಿದ್ದಕ್ಕಾಗಿ ಎಲ್ಲೋ ರೋ ಧಿ ಸುತ್ತಾ ಇರುತ್ತದೆ ಎಂದು ಹಕ್ಕಿಯ ಬಗ್ಗೆ ಕನಿಕರದ ಮಾತನ್ನಾಡಿದ್ದಾರೆ.