ಪತಿ ರಾಜ್ ಕುಂದ್ರಾ ರಂತೆ ಈ ಹಿಂದೆ ದೊಡ್ಡ ದೊಡ್ಡ ವಿವಾದಕ್ಕೆ ಸಿಲುಕಿದ್ದ ನಟಿ ಶಿಲ್ಪಾ ಶೆಟ್ಟಿ: ಯಾವುವು ಆ ವಿವಾದಗಳು?? ಇಲ್ಲಿದೆ ಉತ್ತರ
ಉದ್ಯಮಿ ರಾಜ್ ಕುಂದ್ರಾ ಬಂ ಧ ನದ ನಂತರ ಅವರ ಪತ್ನಿಯಾಗಿರುವ ಬಾಲಿವುಡ್ ಸ್ಟಾರ್ ನಟಿ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವಂತಹ ನಟಿ ಶಿಲ್ಪಾ ಶೆಟ್ಟಿ ಕೂಡಾ ಮಾದ್ಯಮಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಅವರ ಕುರಿತಾದ ಅನೇಕ ವಿಚಾರಗಳು ಮಾದ್ಯಮಗಳಲ್ಲಿ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಇನ್ನು ಶಿಲ್ಪಾ ಶೆಟ್ಟಿ ಅವರ ಪತಿಯ ವಿಚಾರಕ್ಕೆ ಬರುವುದಾದರೆ ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾಗಳನ್ನು ನಿರ್ಮಾಣ ಮಾಡಲು ದೊಡ್ಡ ಮೊತ್ತದಲ್ಲಿ ಬಂಡವಾಳವನ್ನು ಹೂಡಿದ್ದರು ಮತ್ತು ತಾವು ನಿರ್ಮಾಣ ಮಾಡಿದ ಈ ಸಿನಿಮಾಗಳ ಹಂಚಿಕೆಯ ಮೂಲಕ ಅವರು ದೊಡ್ಡ ಮಟ್ಟದಲ್ಲಿ ಲಾಭವನ್ನು ಸಹಾ ಗಳಿಸುತ್ತಿದ್ದಾರೆ ಎನ್ನುವ ಆರೋಪವನ್ನು ಮಾಡಲಾಗಿದೆ. ಅಲ್ಲದೇ ವಿಚಾರಣೆ ಮುಂದುವರೆದಂತೆ ಹೊಸ ಹೊಸ ವಿಷಯಗಳು ಸಹಾ ಹೊರಗೆ ಬರುತ್ತಿವೆ. ನಟಿಯರು ಸಹಾ ರಾಜ್ ಕುಂದ್ರಾ ಬಗ್ಗೆ ಶಾ ಕಿಂ ಗ್ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ನಿಜ, ಸುಳ್ಳು ಯಾವುದು ಎನ್ನುವುದು ತನಿಖೆಯಿಂದಲೇ ತಿಳಿದು ಬರಬೇಕಾಗಿದೆ. ಇನ್ನು ಇದೇ ವಿಷಯದಲ್ಲಿ ಅಧಿಕಾರಿಗಳು ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಪತಿಯ ವ್ಯವಹಾರದಲ್ಲಿ ಪಾಲುದಾರಿಕೆ ಹೊಂದಿರುವರೋ, ಇಲ್ಲವೋ ಎನ್ನುವ ವಿಚಾರವನ್ನು ತಿಳಿದುಕೊಳ್ಳಲು ಶಿಲ್ಪಾ ಶೆಟ್ಟಿ ಅವರ ವಿಚಾರಣೆಯನ್ನು ಕೂಡಾ ಮಾಡಿದ್ದಾರೆ ಎನ್ನಲಾಗಿದೆ.

ನಟಿ ಶಿಲ್ಪಾ ಶೆಟ್ಟಿ ಈ ರೀತಿ ವಿವಾದಕ್ಕೆ ಸಿಲುಕಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಹಾ ಹಲವು ವಿಚಾರಗಳಲ್ಲಿ ಶಿಲ್ಪಾ ಶೆಟ್ಟಿ ಅವರು ವಿವಾದಗಳನ್ನು ಎದುರಿಸಿದ್ದಾರೆ. ಆಗ ಆ ವಿಷಯಗಳು ಕೂಡಾ ಮಾಧ್ಯಮಗಳಲ್ಲಿ ಬಹಳ ಚರ್ಚೆಯನ್ನು ಹುಟ್ಟು ಹಾಕಿದ್ದವು. ಶಿಲ್ಪಾ ಶೆಟ್ಟಿ ಅವರ ಖಾಸಗಿ ಜೀವನದ ಕುರಿತಾಗಿ ಸಹಾ ಅನೇಕ ಸುದ್ದಿಗಳಾಗಿದ್ದವು. 2007ರಲ್ಲಿ ಹಾಲಿವುಡ್ ನ ಜನಪ್ರಿಯ ನಟ ರಿಚರ್ಡ್ ಗೇರ್ ಅವರು ಭಾರತದಲ್ಲಿ ಏಡ್ಸ್ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಅಭಿಯಾನವೊಂರಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದಂತಹ ವೇಳೆಯಲ್ಲಿಯೂ ಶಿಲ್ಪಾ ಶೆಟ್ಟಿ ಅವರ ಕುರಿತಾದ ವಿ ವಾ ದ ಒಂದು ಹುಟ್ಟಿಕೊಂಡು ಸುದ್ದಿಯಾಗಿತ್ತು.
ಹೌದು, ಭಾರತಕ್ಕೆ ಆಗಮಿಸಿದ ರಿಚರ್ಡ್ ಗೇರ್ ಅವರು ಒಂದು ಈವೆಂಟ್ ನಲ್ಲಿ ಶಿಲ್ಪಾ ಶೆಟ್ಟಿ ಅವರಿಗೆ ಬಲವಂತವಾಗಿ ಕಿಸ್ ಮಾಡಿಬಿಟ್ಟಿದ್ದರು. ಶಿಲ್ಪಾ ಶೆಟ್ಟಿ ಅವರಿಗೆ ತನ್ನನ್ನು ತಾನು ಸಂಭಾಳಿಸಿ ಕೊಳ್ಳುವ ಅವಕಾಶವನ್ನು ಸಹಾ ಆ ನಟ ನೀಡಿರಲಿಲ್ಲ, ಅನಿರೀಕ್ಷಿತವಾಗಿ ಅವರು ಕಿಸ್ ಮಾಡಿದ್ದನ್ನು ತಡೆಯಲು ಶಿಲ್ಪಾ ರಿಂದ ಸಾಧ್ಯವಾಗಿರಲಿಲ್ಲ. ಈ ದೃಶ್ಯದ ಫೋಟೋಗಳು ಹಾಗೂ ವಿಡಿಯೋಗಳು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸದ್ದು, ಸುದ್ದಿಯನ್ನು ಮಾಡಿದ್ದವು, ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ನಟಿ ಶಿಲ್ಪಾ ಶೆಟ್ಟಿ ಹಾಲಿವುಡ್ ಕಿರುತೆರೆಯಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದಿರುವ ಬಿಗ್ ಬ್ರದರ್ ( ನಮ್ಮಲ್ಲಿ ಬಿಗ್ ಬಾಸ್ ಶೀ ಫಾರ್ಮಾಟ್) ಶೋ ನಲ್ಲಿ ಸೆಲೆಬ್ರಿಟಿ ಸ್ಪರ್ಧಿಯಾಗಿ ಬಿಗ್ ಬ್ರದರ್ ಮನೆಯನ್ನು ಪ್ರವೇಶಿಸಿದ್ದರು.

ಶಿಲ್ಪಾ ಶೆಟ್ಟಿ ಬಿಗ್ ಬ್ರದರ್ ಶೋ ನಲ್ಲಿ ವಿನ್ನರ್ ಆಗಿ ಹೊರ ಹೊಮ್ಮಿದ್ದರು ಎನ್ನುವುದು ವಿಶೇಷ. ಆದರೆ ಇದೇ ಶೋ ನಲ್ಲಿ ಸ್ಪರ್ಧಿಯಾಗಿದ್ದ ಅಂತಹ ಜೇಡ್ ಗುಡಿ ಶಿಲ್ಪಾ ಶೆಟ್ಟಿ ಅವರ ಮೈಬಣ್ಣವನ್ನು ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಗುಡಿ ಆಡಿದ ಮಾತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ವಿಷಯ ಯಾವ ಮಟ್ಟಕ್ಕೆ ಬೆಳೆಯಿತೆಂದರೆ ಕಡೆಗೆ ಜೇಡ್ ಗುಡಿ ಶಿಲ್ಪ ಶೆಟ್ಟಿ ಅವರ ಕಡೆ ಕ್ಷಮೆಯಾಚಿಸಬೇಕಾಯಿತು. ಹೀಗೆ ಶಿಲ್ಪಾ ಶೆಟ್ಟಿ ಅವರು ಕೆಲವು ವಿಚಾರಗಳಿಂದಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಾ ಈ ಹಿಂದೆ ಸುದ್ದಿಯಾಗಿದ್ದರು ಎನ್ನುವುದು ವಿಶೇಷವಾಗಿದೆ.