ಪತ್ನಿಗಾಗಿ ತೊಟ್ಟ ಪಣವನ್ನು ಕೊನೆಗೂ ಸಾಧ್ಯಗೊಳಿಸಿದ ಭಾರತೀಯ ಕ್ರಿಕೆಟಿಗ ಸರ್ ರವೀಂದ್ರ ಜಡೇಜಾ!!
ಗುಜರಾತ್ ವಿಧಾನಸಭೆ ಚುನಾವಣೆ ಮತ್ತು ಫಲಿತಾಂಶವು ದೇಶದಾದ್ಯಂತ ಚರ್ಚೆಯ ವಿಷಯವಾಗಿದೆ. ಆ ಚುನಾವಣೆಯಲ್ಲಿ ಬಿಜೆಪಿ ಏಕಪಕ್ಷೀಯವಾಗಿ ಗೆದ್ದಿದೆ. ಬಿಜೆಪಿ ನಾಯಕರು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಗುಜರಾತ್ನಲ್ಲಿ ಬಿಜೆಪಿ ಏಳನೇ ಬಾರಿಗೆ ತನ್ನ ಅಧಿಕಾರವನ್ನು ನಿರ್ವಿವಾದವಾಗಿ ಉಳಿಸಿಕೊಂಡಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ರಿವಾಬಾ ಜಡೇಜಾ ಚರ್ಚೆಯಲ್ಲಿದ್ದರು. ರಿವಾಬಾ ಇವರು ಭಾರತದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಚರ್ಚೆಗಳು ನಡೆದಿದ್ದವು. ಏನೇ ಆದರೂ ಜಡೇಜಾ ಅವರ ಉದ್ದೇಶ ಪತ್ನಿಯನ್ನು ಗೆಲ್ಲಿಸುವುದಾಗಿತ್ತು. ಆಕೆಯನ್ನು ಗೆಲ್ಲಿಸಿ ಅದನ್ನು ಸಾರ್ಥಕಗೊಳಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಿವಾಬಾ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಇಬ್ಬರೂ ಸೆಲೆಬ್ರಿಟಿಗಳಿಗೆ ನೆಟಿಜನ್ಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.
Those who accepted me happily as a candidate, worked for me, reached out & connected to people – I thank them all. It's not just my victory but of all of us: BJP's Jamnagar North candidate, Rivaba Jadeja
As per EC's official trend, she is leading with a margin of 31,333 votes. pic.twitter.com/UglAYQ6kyq
— ANI (@ANI) December 8, 2022
ರಿವಾಬಾ ವಿರುದ್ಧ ಆಮ್ ಆದ್ಮಿ ಪಕ್ಷದ ಕರ್ಸನ್ ಕಾರ್ಮುರ್ ಕಣಕ್ಕಿಳಿದಿದ್ದರು. ರಿವಾಬಾ ಸುಮಾರು ನಲವತ್ತು ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ರಿವಾಬಾ ಗೆಲುವಿನ ನಂತರ ಮತದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಜಯದ ನಂತರ, ಅವರಿಗಾಗಿ ದೊಡ್ಡ ರ್ಯಾಲಿಯನ್ನು ಆಯೋಜಿಸಲಾಯಿತು ಈ ವೇಳೆಯಲ್ಲಿ ಅವರ ಪತಿ ರವೀಂದ್ರ ಜಡೇಚಾ ಕೂಡ ಉಪಸ್ಥಿತರಿದ್ದರು. ರ್ಯಾಲಿಯ ಫೋಟೋಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವುಗಳಿಗೆ ಬಂದ ಪ್ರತಿಕ್ರಿಯೆಗಳು ಅದ್ಭುತವಾಗಿವೆ.
— Ashish Singh Rajput (@AshishRaj_India) December 8, 2022
‘ರಿವಾಬಾ, ನಿಮ್ಮ ಯಶಸ್ಸಿನಲ್ಲಿ ನಿಮ್ಮ ಗಂಡನ ದೊಡ್ಡ ಕೈ ಇದೆ. ಅವನಿಲ್ಲದೆ ನಿನ್ನ ಗೆಲುವು ಸಾಧ್ಯವಿರಲಿಲ್ಲ’. ನೆಟಿಜನ್ಗಳು ಇಂತಹ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ರವೀಂದ್ರ ಅವರು ರಿವಾಬ ಪ್ರಚಾರ ಸಭೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿದ್ದರು. ಅಂದಿನಿಂದ, ರಿವಾಬಾಗೆ ಈ ಚುನಾವಣೆ ಸುಲಭವಾಯಿತು ಅಂತ ಹೀಗೊಂದು ಚರ್ಚೆಯು ಸಹ ವೈರಲ್ ಆಗುತ್ತಿದೆ.