ಪತ್ನಿಯ ತವರಿನಲ್ಲೇ ಆಭರಣಗಳ ಕಳ್ಳತನ ಮಾಡಿದ ಅಳಿಯ! ಇವ ಯಾವ ಸೀಮೆಯ ಅಳಿಯ ಎಂದ ನೆಟ್ಟಿಗರು..!
ಅಳಿಯನಿಗೆ ಪತ್ನಿಯ ತವರಿನಲ್ಲಿ ಯಾವತ್ತೂ ದೊಡ್ಡ ಮಾನ, ಸನ್ಮಾನ, ಗೌರವಗಳು ಮೊದಲಿನಿಂದಲೂ ಸಿಗುತ್ತ ಬಂದಿವೆ. ನಮ್ಮ ಸಂಪ್ರದಾಯದಲ್ಲಿ ಅಳಿಯನಿಗೆ ಮಾನ ಸನ್ಮಾನಗಳನ್ನು ನೀಡುವದು ಮೊದಲಿನಿಂದಲೂ ಬಂದ ದೊಡ್ಡ ಗೌರವ ಎಂದು ತಿಳಿಯಲಾಗಿದೆ. ಇಷ್ಟೆಲ್ಲ ಇರುವಾಗ ಅಳಿಯನೇ ಮಾವನ ಮನೆ ಕೊಳ್ಳೆ ಹೊಡೆದು ಗುಡಿಸಿ ಗಂಡಾಂತರ ಮಾಡಿದರೆ ಏನು ಮಾಡೋದು?
ಪ್ರಸ್ತುತ ಘಟನೆ ನೆರಯ ರಾಜ್ಯ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಜುಲೈ 20 ರಂದು ವರದಿಯಾಗಿದೆ.
ವಿಸೃತ ವರದಿಯ ಪ್ರಕಾರ, ಅಳಿಯ ನಿಖಿಲ್ ಪವಾರ್ ಪತ್ನಿಯ ಮನೆಯಲ್ಲಿಯೇ ಬೆಲೆಬಾಳುವ ಆಭರಣಗಳನ್ನು (ಸುಮಾರು ನಾಲ್ಕೂವರೆ ಲಕ್ಷ ರೂಪಾಯಿಗಳ ಮೌಲ್ಯದ) ಕಳ್ಳತನ ಮಾಡಿ ಸದ್ಯ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಮಾವನ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ತನ್ನ ಹತ್ತಿರವಿದ್ದ ಡುಪ್ಲಿಕೇಟ್ ಕೀ ಯಿಂದ ಮನೆ ಓಪನ್ ಮಾಡಿ ಆಭರಣಗಳನ್ನು ಲಪಟಾಯಿಸಿದ್ದಾನೆ. ಅಳಿಯನ ಈ ಅವಾಂತರದಿಂದ ನೆರೆಹೊರೆಯವರು ಸಹ ಆಶ್ಚರ್ಯ ವ್ಯಕ್ತ ಮಾಡಿದ್ದಾರೆ.
ಮನೆಯ ಎಲ್ಲ ಸದಸ್ಯರು ಆ ದಿನ ಮೂವಿ ನೋಡಲು ಹೋದಾಗ ಅಳಿಮಯ್ಯ ಈ ಪ್ರತಾಪವನ್ನು ಮಾಡಿದ್ದಾನೆ. ನಂತರ ಮನೆಯವರಿಗೆ ಕಳ್ಳತನವಾದ ವಿಷಯ ತಿಳಿಯುತ್ತಲೇ ಪೊಲೀಸರಿಗೆ ದೂರು ನೀಡಲಾಗಿ ಮನೆಯಳಿಯನೇ ಕಳ್ಳನಾಗಿ ಸಿಕ್ಕಿ ಬಿದ್ದಿದ್ದಾನೆ. ಅಳಿಯನ ಮೇಲೆ ಪತ್ನಿಯ ತವರಿನವರಿಗೆ ಸಂಶಯ ಬರುತ್ತಲೇ ಬೇರೆ ಮಾರ್ಗವಿಲ್ಲದೆ ಅಳಿಯನ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಅಳಿಯ ನಿಖಿಲ್ ನಿಗೆ ಅರೆಸ್ಟ್ ಮಾಡಿ ಆತನ ಕಡೆಯಿಂದ ಸುಮಾರು 4 ವರೆ ಲಕ್ಷ ರೂಪಾಯಿ ಮೌಲ್ಯದ ಆಭರಣವನ್ನು ವಶ ಪಡಿಸಿಕೊಳ್ಳಲಾಗಿದೆ. ಪೊಲೀಸರು ಮುಂದಿನ ತನಿಖೆ ಮಾಡುತ್ತಿದ್ದಾರೆ. ಅಳಿಯನ ಈ ಪ್ರತಾಪದಿಂದಾಗಿ ಜನರು ಅಳಿಯನ ಕೈಯಲ್ಲಿ ಮನೆ ಜವಾಬ್ದಾರಿ ನೀಡಬೇಕೋ ಬೇಡವೋ ಎಂದು ತಮಾಷೆಯಿಂದ ಮಾತನಾಡಿಕೊಳ್ಳುತ್ತಿದ್ದಾರೆ.