ಪತ್ನಿಯ ಪ್ರತಿಯೊಂದು ಗಾಯ ಪೆಟ್ಟುಗಳಿಗೆ ಗಂಡನೇ ಹೊಣೆ – ಸುಪ್ರೀಂ ಕೋರ್ಟ್
ದೇಶದಲ್ಲಿ ವಿವಾಹ ನಂತರದ ವಿವಿಧ ರೂಢಿ, ಕೆಟ್ಟ ಪರಂಪರೆ ಹಾಗೂ ದುರ್ವ್ಯವಹಾರಗಳ ಮೇಲೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಮದುವೆಯ ನಂತರ ಪತ್ನಿಯು ಪತಿಯ ಮನೆಗೆ ನಡೆಯಲು ಹೋಗುತ್ತಾಳೆ. ಗಂಡನ ಮನೆಯಲ್ಲಿ ಪತ್ನಿಗೆ ಕೆಲವೊಂದು ಸಲ ವರದಕ್ಷಣೆ ಕಾರಣದಿಂದ ಅಥವಾ ಇನ್ನು ಅನೇಕ ಕಾರಣಗಳಿಂದಾಗಿ ಪೀಡಿಸಲಾಗುತ್ತದೆ. ಈ ಕಾರಣಗಳಿಗಾಗಿ ಮಹಿಳೆಗೆ ಗಂಡನ ಮನೆಯಲ್ಲಿ ಯಾವುದೇ ರೀತಿಯ ಶಾರೀರಿಕ ಗಾಯ ಮತ್ತು ಪೆಟ್ಟುಗಳು ಆದರೆ ಅದಕ್ಕೆ ಆಕೆಯ ಗಂಡನೇ ಹೊಣೆ ಎಂದು ಸುಪ್ರೀಂಕೋರ್ಟ್ ತನ್ನ ಒಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಇದೇ ಸಂದರ್ಭದಲ್ಲಿ ಒಂದು ವ್ಯಕ್ತಿಗೆ ಸುಪ್ರೀಂಕೋರ್ಟ್ ಬಂಧನ ಪೂರ್ವ ಜಾಮೀನು ನೀಡಲು ನಿರಾಕರಿಸಿತು. ವಿಶೇಷವೆಂದರೆ ಯಾವ ವ್ಯಕ್ತಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಆ ವ್ಯಕ್ತಿಯ ಇದು ಮೂರನೇ ಮದುವೆ ಯಾಗಿತ್ತು. ಮತ್ತು ಆತನ ಪತ್ನಿಯ ಎರಡನೆಯ ಮದುವೆ.
ಪೀಡಿತ ಮಹಿಳೆಯು ಜೂನ್ 2020 ರಲ್ಲಿ ತನ್ನ ಪತಿ ಹಾಗೂ ಆತನ ಮನೆಯವರ ವಿರುದ್ಧ ಹಿಂಸೆ ಮತ್ತು ಕಿರುಕುಳ ನೀಡಿದ ಕಾರಣಕ್ಕಾಗಿ ಕೇಸು ದಾಖಲಿಸಿದ್ದಳು. ತಕರಾರಿನಲ್ಲಿ ಗಂಡ ಮತ್ತು ಆತನ ಮನೆಯವರು ವರದಕ್ಷಿಣೆ ಕಾರಣಕ್ಕಾಗಿ ನನ್ನನ್ನು ಪೀಡಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಳು. ಈ ಪ್ರಕರಣದಲ್ಲಿ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯವು ವ್ಯಕ್ತಿಯ ಬಂಧನ ಪೂರ್ವ ಜಾಮೀನು ಸ್ಪಷ್ಟವಾಗಿ ನಿರಾಕರಿಸಿತ್ತು. ಆದ್ದರಿಂದ ಆತನ ವಕೀಲನು ಸುಪ್ರೀಂ ಕೋರ್ಟ್ ನ ಮೊರೆ ಹೋಗಿದ್ದನು.

ಮುಖ್ಯ ನ್ಯಾಯಮೂರ್ತಿ ಶರದ್ ಬೊಬಡೆ ಅವರ ಅಧ್ಯಕ್ಷತೆಯಲ್ಲಿ ನ್ಯಾಯಾಲಯ ಆರೋಪಿ ವ್ಯಕ್ತಿಗೆ ಸ್ಪಷ್ಟವಾಗಿ ಸೂಚಿಸಿದೆ. ಕೋರ್ಟ್ ಅಷ್ಟಕ್ಕೆ ನಿಲ್ಲದೆ, ನೀನು ಯಾವ ರೀತಿಯ ಪುರುಷನಾಗಿರುವೆ? ನಿನ್ನ ಪತ್ನಿ ಮಾಡಿರುವ ಆರೋಪದ ಪ್ರಕಾರ, ಆಕೆಯ ಕುತ್ತಿಗೆಯನ್ನು ಒತ್ತಿ ಸಾಯಿಸಲು ಪ್ರಯತ್ನಿಸುತ್ತಿರುವ ಮತ್ತು ಆಕೆಯ ಗರ್ಭಪಾತವನ್ನು ಮಾಡಿರುವ ಹಾಗೂ ಆಕೆಗೆ ಕ್ರಿಕೆಟ್ ಬ್ಯಾಟಿನಿಂದ ಹೊಡೆಯುವ ನೀನು ಪುರುಷನೇ? ಎಂದು ಪ್ರಶ್ನೆ ಹಾಕಿದೆ.
ಆ ಸಂದರ್ಭದಲ್ಲಿ ಗಂಡನ ವಕೀಲನು, ಈ ಕೆಲಸ ಆರೋಪಿ ಮಾಡಿಲ್ಲ, ಆರೋಪಿಯ ತಂದೆ ಮಾಡಿದ್ದಾನೆ, ಎಂದು ಹೇಳಿದಾಗ ಕೋರ್ಟ್ ಪೀಡಿಸಿದ ವ್ಯಕ್ತಿ ಅಥವಾ ತೊಂದರೆಕೊಟ್ಟ ವ್ಯಕ್ತಿ ಗಂಡನೇ ಇರಲಿ ಅಥವಾ ಆತನ ತಂದೆಯೇಯಾಗಿರಲಿ ಇದರಲ್ಲಿ ಏನೂ ವ್ಯತ್ಯಾಸವಿಲ್ಲ. ಏಕೆಂದರೆ ಗಂಡನ ಮನೆಯಲ್ಲಿ ಮಹಿಳೆಗೆ ಹಿಂಸಿಸಿದರೆ ಅದಕ್ಕೆ ಹೊಣೆ ಅಲ್ಲಿ ಗಂಡನೇ ಇರುತ್ತಾನೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿ ವ್ಯಕ್ತಿಯ ಬಂಧನ ಪೂರ್ವ ಜಾಮೀನು ರದ್ದು ಪಡಿಸಿದೆ.