ಪರ್ಫೆಕ್ಷನ್ ಅಂದರೆ ಇದು! ಹಾಲು ತುಂಬಿದ ಗ್ಲಾಸ್ ತಲೆಯ ಮೇಲಿಟ್ಟುಕೊಂಡು ಸ್ವಿಮ್ ಮಾಡಿದ ಯುವತಿ! ನೋಡಿ ಈ ವೈರಲ್ ವಿಡಿಯೋ!

ಜಗತ್ತಿನಲ್ಲಿ ಅನೇಕ ಜನರು ವಿವಿಧ ಕಲೆಗಳನ್ನು ಹೊಂದಿದ್ದಾರೆ. ತಮ್ಮ ಜಾಬ್ ಅಥವಾ ತಾವು ಮಾಡುವ ಹವ್ಯಾಸದಲ್ಲಿ ಇಷ್ಟೊಂದು ಮುಂದೆ ಹೋಗಿರುತ್ತಾರೆಂದರೆ ಅದನ್ನು ಊಹಿಸುವದು ಸಹಿತ ತುಂಬಾ ಕಷ್ಟ.

ಈಗ ನಾವು ಹೇಳುತ್ತಿರುವದು ಅಮೆರಿಕೆಯ ಪ್ರಸಿದ್ಧ ಸ್ವೀಮರ್ ಳಾದ 23 ರ ಪ್ರಾಯದ ಕ್ಯಾಟಿ ಲೆಡೆಕಿ. ಈಕೆ ಸ್ವೀಮಿಂಗನಲ್ಲಿ ತುಂಬಾ ಹೆಸರು ಮಾಡಿದ ಆಟಗಾರಳಾಗಿದ್ದಾಳೆ. 2016 ರ ಒಲಂಪಿಕ್ ಪಂದ್ಯದಲ್ಲಿ 400 ಮೀಟರ್ ಫ್ರೀಸ್ಟೈಲ್ ಸ್ವೀಮಿಂಗ್ ಸ್ಪರ್ಧೆಯಲ್ಲಿ ಸುವರ್ಣವನ್ನು ಗಿಟ್ಟಿಸಿದ್ದಾಳೆ. ಜೊತೆಗೆ 15 ವರ್ಲ್ಡ್ ಚಾಂಪಿಯನ್ ಪ್ರಶಸ್ತಿಗಳನ್ನು ಗೆದ್ದ ಜಗತ್ತಿನ ಏಕಮೇವ ಮಹಿಳೆ ಕ್ಯಾಟಿ ಯಾಗಿದ್ದಾಳೆ.

ಈ ಕ್ಯಾಟಿ ಈಗ ಹೊಸದೊಂದು ದಾಖಲೆಯನ್ನು ಮಾಡಿದ್ದಾಳೆ. ಅದೇನೆಂದರೆ ಸ್ವೀಮಿಂಗ್ ಪೂಲ್ ನಲ್ಲಿ ತಲೆಯ ಮೇಲೆ ಚಾಕ್ಲೆಟ್ ಮಿಶ್ರಿತ ಹಾಲನ್ನು ಇಟ್ಟುಕೊಂಡು ಒಂದೇ ಒಂದು ಹನಿಯನ್ನು ಕೆಳಗೆ ಚೆಲ್ಲದೆ, ಒಂದು ತುದಿಯಿಂದ ಇನ್ನೊಂದು ತುದಿಯನ್ನು ಸರಾಗವಾಗಿ ತಲುಪಿದ್ದಾಳೆ. ಈ ದೃಶ್ಯವನ್ನು ನೋಡುವದು ನಿಜಕ್ಕೂ ಅದ್ಭುತ ಅನುಭವವೇ ಎನ್ನಬಹುದು. ಕ್ಯಾಟಿ ಈ ವೀಡಿಯೊವನ್ನು ತನ್ನ ಟ್ವಿಟ್ಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾಳೆ. ನೆಟ್ಟಿಗರಿಗೆ ಇದು ತುಂಬಾನೇ ಹಿಡಿಸಿ ಲೈಕ್ಸ್ ಮೇಲೆ ಲೈಕ್ಸ್ ಮಾಡ್ತಾ ಇದ್ದಾರೆ. ಈ ವೀಡಿಯೊವನ್ನು ಇಲ್ಲಿಯವರೆಗೆ 2 ಲಕ್ಷ 28 ಸಾವಿರಕ್ಕೂ ಹೆಚ್ಚು ಜನ ನೋಡಿದ್ದಾರೆ.

ಈ ವಿಡಿಯೋದ ಕ್ಯಾಪ್ಶನ್ ನಲ್ಲಿ ಕ್ಯಾಟಿ ಹೀಗೆ ಬರೆದಿದ್ದಾಳೆ, ‘ಇದು ನನ್ನ ಜೀವನದಲ್ಲಿಯ ಬೆಸ್ಟ್ ಸ್ವೀಮಿಂಗ್ ಇತ್ತು’. ಸದ್ಯಕ್ಕೆ ಕ್ಯಾಟಿ ಮುಂಬರುವ ಟೋಕಿಯೋ ಒಲಂಪಿಕ್ ಸ್ಪರ್ಧೆಯ ತಯಾರಿಯನ್ನು ಮಾಡುತ್ತಿದ್ದಾರೆ. ಕೊರೊನ ಮಾಹಾಮಾರಿಯ ಕಾರಣದಿಂದಾಗಿ ಈ ಸ್ಪರ್ಧೆಯನ್ನು ಮುಂದೂಡಲಾಗಿತ್ತು.