ಪರ್ವತ ಪ್ರದೇಶದ ದುರ್ಗಮ ಹಾದಿಯಲ್ಲಿ ಬಸ್ ರಿವರ್ಸ್ ತೆಗೆದ ಡ್ರೈವರ್: ವೀಡಿಯೋ ನೋಡಿ ಶಾಕ್ ಆದ ಜನ!

ನಮ್ಮ ದೇಶದ ಅತ್ಯಂತ ಕಠಿಣವಾದ ಹಾಗೂ ಕೆಟ್ಟದಾದ ರಸ್ತೆಗಳು ಎಲ್ಲಿವೆ ಎನ್ನುವುದಾದರೆ ಇಂತಹ ರಸ್ತೆಗಳು ಪರ್ವತ ಹಾಗೂ ಬೆಟ್ಟ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡುವುದು ಎಂದರೆ ಅದು ಮಕ್ಕಳಾಟವಲ್ಲ. ಏಕೆಂದರೆ ಅತ್ಯುತ್ತಮ ಎನಿಸಿಕೊಂಡಿರುವ ಡ್ರೈವರ್ ಗಳು ಕೂಡಾ ಈ ರಸ್ತೆಗಳನ್ನು ಒಮ್ಮೆ ನೋಡಿದಾಗ ಮನಸ್ಸಿನಲ್ಲೊಂದು ಭಯವಂತೂ ಸಹಜವಾಗಿಯೇ ಮೂಡಿಬಿಡುತ್ತದೆ. ಆದರೆ ಪರ್ವತ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡುವ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅವುಗಳನ್ನು ನೋಡಿದಾಗ ಹಿಮಾಚಲ ಪ್ರದೇಶದ ಬೆಟ್ಟಗಳ ಮೇಲಿನ ಕಡಿದಾದ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವ ಚಾಲಕರು ಆ ರಸ್ತೆಗಳ ರಾಜರು ಎನ್ನುವಂತೆ ಕಂಡು ಬರುತ್ತದೆ. ಅವರು ಬಹಳ ಆತ್ಮ ವಿಶ್ವಾಸದಿಂದ ತಮ್ಮ ವಾಹನಗಳನ್ನು ಚಲಾಯಿಸುತ್ತಾರೆ ಮಾತ್ರವಲ್ಲದೆ ಅವರು ತಮ್ಮ ಈ ವಿಶ್ವಾಸವನ್ನು ಎಂದಿಗೂ ಕುಂದಲು ಬಿಡುವುದಿಲ್ಲ.

ಈಗ ಅದಕ್ಕೆ ಪೂರಕ ಎನ್ನುವಂತೆ ಅವರ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ತೋರಿಸುವ ಮತ್ತೊಂದು ಹೊಸ ವಿಡಿಯೋ ವೈರಲ್ ಆಗಿದೆ. ಫೇಸ್ ಬುಕ್ ನಲ್ಲಿ ಇನ್ಕ್ರೆಡಿಬಲ್ ಹಿಮಾಚಲ್ ಎನ್ನುವ ಹೆಸರಿನ ಪೇಜ್ ನಲ್ಲಿ ವೀಡಿಯೋ ಒಂದನ್ನು ಶೇರ್ ಮಾಡಲಾಗಿದ್ದು, ಈಗಾಗಲೇ ಅದಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ದಕ್ಕಿದೆ. ಈ ವಿಡಿಯೋದಲ್ಲಿ ನಾವು ಗಮನಿಸಿದಾಗ ಹಿಮಾಚಲ ಪ್ರದೇಶದ ಬೆಟ್ಟವೊಂದರ ಮೇಲೆ ಇಕ್ಕಟ್ಟಾದ ರಸ್ತೆಯಲ್ಲಿ ಬಸ್ ಚಾಲಕನೊಬ್ಬನು ಬಸ್ಸನ್ನು ರಿವರ್ಸ್ ತೆಗೆದುಕೊಂಡಿರುವುದು ಮಾತ್ರವೇ ಅಲ್ಲದೇ ಅದನ್ನು ರಸ್ತೆಯ ಇನ್ನೊಂದು ಬದಿಗೆ ತಿರುಗಿಸಿ ರುವುದನ್ನು ನಾವು ಗಮನಿಸಬಹುದಾಗಿದೆ. ಸಾಮಾನ್ಯವಾಗಿ ಒಂದು ಕಾರನ್ನು ಕೂಡ ರಿವರ್ಸ್ ತೆಗೆಯಲು ನಾಲ್ಕೈದು ಬಾರಿ ಯೋಚಿಸುವ ಜಾಗದಲ್ಲಿ ಆತ ಬಸ್ಸನ್ನೇ ರಿವರ್ಸ್ ತೆಗೆದುಕೊಂಡಿರುವುದು ಅದ್ಭುತ ಎನಿಸಿದೆ.

ಈ ವಿಡಿಯೋವನ್ನು ಮೂಲತಃ ಜುಲೈ 17 ರಂದು ಓಂಕಾರ್ ಮಾಲುಷ್ಟೇ ಯುಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಈಗಾಗಲೇ 9 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದರೆ, 12000 ಮಂದಿ ಲೈಕ್ ಗಳನ್ನು ನೀಡಿದ್ದಾರೆ. ವಿಡಿಯೋ ಶೇರ್ ಮಾಡಿರುವಂತಹ ಯೂಟ್ಯೂಬರ್ ಅದರ ಶೀರ್ಷಿಕೆಯಲ್ಲಿ ಈ ವೀಡಿಯೊ ಉದಯಪುರದಿಂದ (ಹಿಮಾಚಲ ಪ್ರದೇಶ) ಕೀಲಾಂಗ್-ಕಿಲ್ಲರ್ (ಡೇಂಜರಸ್ ರಸ್ತೆ)ನಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿದೆ ಎಂದು ಬರೆದುಕೊಂಡು ಅದರ ಮಾಹಿತಿಯನ್ನು ನೀಡಿದ್ದಾರೆ.

ಈ ವಿಡಿಯೋವನ್ನು ನೋಡಿದಂತಹ ಅನೇಕ ಮಂದಿ ಬಹಳ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಮಂದಿ ಆ ಬಸ್ ಚಾಲಕನ ಧೈರ್ಯ ಹಾಗೂ ಹುಮ್ಮಸ್ಸನ್ನು ಮೆಚ್ಚಿಕೊಂಡು ತಮ್ಮ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ಪ್ರತಿಕ್ರಿಯೆ ಗಳಲ್ಲಿ ಅನೇಕರು ಹಿಮಾಚಲ ಪ್ರದೇಶದ ವಾಹನ ಚಾಲಕರು ಬಹಳ ಬಲಶಾಲಿಗಳಾಗಿರುತ್ತಾರೆ. ಅವರಲ್ಲಿ ಇಂತಹ ಸವಾಲನ್ನು ಎದುರಿಸಲಾಗದೆ ಸೋಲನ್ನು ಒಪ್ಪಿಕೊಂಡು ಹಿಂದೆ ಸರಿಯುವವರು ಬಹಳ ವಿರಳವಾಗಿ ನೋಡಲು ಸಿಗುತ್ತಾರೆ ಎಂದು ಹೇಳುವ ಮೂಲಕ ಹಿಮಾಚಲ ಪ್ರದೇಶದ ವಾಹನ ಚಾಲಕರನ್ನು ಮೆಚ್ಚಿ ಅವರ ಧೈರ್ಯವನ್ನು ಹಾಡಿ ಹೊಗಳಿದ್ದಾರೆ.

ವಿಡಿಯೋ ನೋಡಿ

ಮತ್ತೊಬ್ಬ ನೆಟ್ಟಿಗರು ಹೆಚ್ ಆರ್ ಟಿ ಸಿ ಇದು ಕೇವಲ ಸಾರಿಕೆ ಸೇವೆಯಲ್ಲ ಬದಲಿಗೆ ಹಿಮಾಚಲ ಪ್ರದೇಶದ ಜನರಿಗೆ ಒಂದು ರೀತಿಯ ಸಾಹಸದ ಅನುಭವ ಕೂಡ ಆಗಿದೆ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆ ಹಿಮಾಚಲ ಪ್ರದೇಶದ ಬೆಟ್ಟಗಳ ಮೇಲಿನ ಬಹು ದು ರ್ಗ ಮವಾದ ಹಾದಿಗಳಲ್ಲಿ ವಾಹನವನ್ನು ಚಾಲನೆ ಮಾಡುವುದೇ ಒಂದು ದೊಡ್ಡ ಸಾಹಸ ಎನ್ನುವಾಗ, ವೈರಲ್ ವಿಡಿಯೋದಲ್ಲಿ ನೋಡಿದಂತೆ ವಾಹನವನ್ನು ರಿವರ್ಸ್ ತೆಗೆದು ರಸ್ತೆಯ ಇನ್ನೊಂದು ದಿಕ್ಕಿಗೆ ತಿರುಗಿಸಿದ್ದು ಬಹಳ ರೋಚಕವಾಗಿದೆ. ಅದೇ ಸಮಯದಲ್ಲಿ ಇದು ಅಲ್ಲಿನ ಜನರ ಜೀವನ ಎಷ್ಟು ಸಾಹಸಮಯವಾಗಿದೆ ಎಂಬ ವಾಸ್ತವವನ್ನು ಕೂಡ ನಮ್ಮ ಮುಂದೆ ತೆರೆದಿಡುತ್ತದೆ.