ಪಾಕಿಸ್ತಾನದಲ್ಲಿ ಉದ್ಭವಿಸಿತು ಬಿಕ್ಕಟ್ಟಿನ ಪರಿಸ್ಥಿತಿ! ದೇಶದ ಜನತೆಗೆ ಒಂದು ರೂಪಾಯಿಯ ಬೇಡಿಕೆ ಇಟ್ಟರು ಪ್ರಧಾನಮಂತ್ರಿ.

ಪಾಕಿಸ್ತಾನದಲ್ಲಿರುವ ನಾಗರಿಕರಿಗೆ ಅನ್ನ ನೀರಿಲ್ಲದೆ ಬದುಕುವ ಪರಿಸ್ಥಿತಿ ಎದುರಾಗಿದೆ. ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ಕೊರೊನಾ ವಿರುದ್ಧ ಹೋರಾಡಲು ದೇಶದ ಜನತೆಗೆ ಸಹಯೋಗ ಬೇಡಿದ್ದಾರೆ.

ಕೊರೊನಾ ಮಹಾಮಾರಿಯಿಂದ ಇಡೀ ಜಗತ್ತೇ ತತ್ತರಿಸಿಹೋಗಿದೆ. ಅಂಥದ್ದರಲ್ಲಿ ಪಾಕಿಸ್ತಾನ ಸಹ ಹೊರತಾಗಿಲ್ಲ. ಇಲ್ಲಿಯ ಜನರಿಗೆ ಒಂದು ಹೊತ್ತಿನ ಊಟ ಸಿಗುವದು ಕಠಿಣವಾಗಿದೆ. ಪ್ರಧಾನಿ ಇಮ್ರಾನ್ ಖಾನ್ ಕೊರೊನ ವಿರುದ್ಧ ಹೋರಾಡಲು ಜನರಿಗೆ ಮುಕ್ತ ಮನಸ್ಸಿನಿಂದ ದಾನ ಮಾಡಲು ಕರೆ ಕೊಟ್ಟಿದ್ದಾರೆ. ನೀವೀಗ ಸರಕಾರಕ್ಕೆ ಒಂದು ರೂಪಾಯಿಯ ಸಹಾಯ ಮಾಡಿದರೆ ನಾಳೆ ನಿಮಗೆ ಸರಕಾರ 4 ರೂಪಾಯಿ ಮರಳಿ ಕೊಡುತ್ತದೆ. ಎಂಬ ವಿಶ್ವಾಸ ಜನರಲ್ಲಿ ಮೂಡಿಸಲು ಪ್ರಯತ್ನ ಮಾಡಿದ್ದಾರೆ.

ಇಮ್ರಾನ್ ಖಾನ್ ತಮ್ಮ ಕೆಲವು ಮಂತ್ರಿಗಳ ಜೊತೆಗೆ ಮಾದ್ಯಮದವರೊಂದಿಗೆ ಮಾತನಾಡುತ್ತಾ ಈ ಮೇಲಿನ ವಿಷಯವನ್ನು ಪ್ರಸ್ತಾಪಿಸಿದರು. ಕೊರೊನ ವೈರಸ್ ರಿಲೀಫ್ ಫಂಡ್ ನಲ್ಲಿ ಬಂದ ಹಣವನ್ನು ಕೆಲಸವಿಲ್ಲದೆ ಕುಳಿತ ನಿರುದ್ಯೋಗ ಪ್ರಜೆಗಳಿಗಾಗಿ ವಿನಿಯೋಗ ಮಾಡಲಾಗುವದು. ಶೀಘ್ರದಲ್ಲೇ ಒಂದು SMS ಸೇವೆಯನ್ನು ಆರಂಭಿಸಲಾಗುವದು, ಮತ್ತು ಜನರು ಈ SMS ಮುಖಾಂತರ ಸರಕಾರಕ್ಕೆ ತಮ್ಮ ನಿರುದ್ಯೋಗದ ಪುರಾವೆಗಳನ್ನು ಪ್ರಸ್ತುತ ಮಾಡಬೇಕು.

ದೇಶದಲ್ಲಿ ಕೊರೊನ ಸಂಕಟದಿಂದ ಮೃತ್ಯುವಿನ ಪ್ರಮಾಣ ಹೆಚ್ಚಾಗುವ ಭೀತಿ ಇತ್ತು ಆದರೆ ಭಯಪಡುವ ಅಗತ್ಯವಿಲ್ಲ, ಮತ್ತು ಮೃತ್ಯು ಪ್ರಮಾಣ ಕಡಿಮೆ ಇದೆ. ಒಂದು ಸಂದರ್ಭದಲ್ಲಿ ದೇಶದಲ್ಲಿಯ ರೋಗಿಗಳಿಗೆ ICU ವಾರ್ಡ್ ಗಳು ಕಡಿಮೆ ಬೀಳಬಹುದು ಎಂಬ ಆತಂಕವಿತ್ತು ಆದರೆ ಹಾಗಾಗಲಿಲ್ಲ. ಕೊರೊನ ಪ್ರಕರಣಗಳು ಹಾಗು ಮೃತ್ಯು ಸಂಖ್ಯೆ ನಮ್ಮ ಅಂದಾಜಿಗಿಂತಲೂ ತೀರ ಕಡಿಮೆ ಇದೆ. ಪರದೇಶದಲ್ಲಿ ಸಿಲುಕಿದ ಪಾಕಿಸ್ತಾನಿಯರನ್ನು ಕರೆತರಲು ಸರಕಾರ ಎಲ್ಲ ಪ್ರಯತ್ನವನ್ನು ಮಾಡಲಿದೆ ಎಂಬ ಮಾತೂ ಈ ಸಮಯದಲ್ಲಿ ಹೇಳಿದರು.