ಪಾಕಿಸ್ತಾನದಲ್ಲಿ ಜೂಜು ಆಡಿದ ಆರೋಪದ ಮೇಲೆ ಕತ್ತೆ ಅರೆಸ್ಟ್! ಜನರಿಗಾಗಿದೆ ತಮಾಷೆಯ ವಿಷಯ.

ಜೂಜು ಆಟ ಎಷ್ಟು ಕೆಟ್ಟದ್ದು ಅಲ್ವಾ? ಮಹಾಭಾರತ ನಡೆದದ್ದು ಇದೇ ಆಟದಿಂದ! ಆದರೆ ಜೂಜು ಆಟಿನ ಕುರಿತು ಪೊಲೀಸರು ಯಾರನ್ನಾದರು ಬಂಧಿಸಿದರೆ, ಜನರು ಅವರಿಗೆ ಸರಿಯಾದ ಕೆಲಸ ಮಾಡಿದ್ದಾರೆ ಎಂದು ಹೊಗಳುತ್ತಾರೆ. ಈ ಜೂಜಿನ ಅಭ್ಯಾಸ ತುಂಬಾ ಕೆಟ್ಟದ್ದಾಗಿದೆ, ಶೀಘ್ರದಲ್ಲೇ ಅದರಿಂದ ದೂರ ಸರಿಯುವದು ಉತ್ತಮ. ಆದರೆ ನೀವು ಎಂದಾದರೂ ಕತ್ತೆ ಜೂಜು ಆಡುವದನ್ನು ನೋಡಿದ್ದೀರಾ ಅಥವಾ ಕೇಳಿದ್ದೀರಾ? ನಿಮ್ಮ ಉತ್ತರ ಏನೇ ಇರಲಿ, ಅಂತಹ ಕತ್ತೆ ಪಾಕಿಸ್ತಾನದಲ್ಲಿ ಕಂಡುಬಂದಿದೆ. ಇಲ್ಲಿನ ಪೊಲೀಸರು ಅಂತಹ ಒಂದು ಕತ್ತೆಯನ್ನು ಬಂಧಿಸಿದ್ದಾರೆ. ಕತ್ತೆ ಭರ್ಜರಿಯಾಗಿ ಜೂಜು ಆಡಿದೆ ಎಂದು ಆರೋಪಿಸಲಾಗಿದೆ. ಈ ಕತ್ತೆಯ ಬಂಧನದ ಸುದ್ದಿಯನ್ನು ಪಾಕಿಸ್ತಾನದ ಮಾಧ್ಯಮಗಳಲ್ಲಿ ಬಹಳ ಜೋರಾಗಿ ತೋರಿಸಲಾಗುತ್ತಿದೆ.

ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಕತ್ತೆ ಪಂಜಾಬ್ ಪ್ರಾಂತದ ರಹೀಮ್ ಯಾರ್ ಖಾನ್ ಪ್ರದೇಶದಲ್ಲಿದಿದೆ. ಪೊಲೀಸರು ಇದನ್ನು ಶನಿವಾರ ಬಂಧಿಸಿದ್ದಾರೆ. ಕತ್ತೆಯೊಂದಿಗೆ ಇತರ ಎಂಟು ಮಂದಿ ಶಂಕಿತರನ್ನು ಸಹ ಬಂಧಿಸಲಾಗಿದೆ.

ತಮಾಷೆಯ ವಿಷಯ ಏನೆಂದರೆ, ಈ ಕತ್ತೆಯ ಹೆಸರನ್ನು ಸಹ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಪಾಕಿಸ್ತಾನದ ಮಾಧ್ಯಮದಿಂದ ಬಂದ ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ.

ಈ ವಿಡಿಯೋ ವೈರಲ್ ಆದಾಗಿನಿಂದ ಜನರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಜಾ ಮಾಡುತ್ತಿದ್ದಾರೆ. ಅಲ್ಲದೆ ಈ ವಿಡಿಯೋ ಕುರಿತು ಎಷ್ಟೋ ಕಾಮೆಂಟ್ಮಾಡುತ್ತಿದ್ದಾರೆ. ಆ ಕಾಮೆಂಟ್ ಗಳು ಓದಿದರೆ ನಗು ನಿಲ್ಲದು. ಒಬ್ಬರು ಬರೆದಿದ್ದಾರೆ, “ಕತ್ತೆಗಳನ್ನು ಈ ರೀತಿ ಬಂಧಿಸುವುದನ್ನು ಮುಂದುವರಿಸಿದರೆ, ರಿಯಾಸ್ಟ್-ಎ-ಮದೀನಾ ಜಿಡಿಪಿಯ ಮೇಲೆ ಬಂದಿರುವ ಬಿಕ್ಕಟ್ಟು ದೂರವಾಗುತ್ತದೆ”. ನಿಮಗೆ ಇನ್ನೊಂದು ಸಂಗತಿ ಗೊತ್ತಾದ್ರೆ ನೀವು ಆಶ್ಚರ್ಯ ಪಡುವಿರಿ ಅದೇನೆಂದರೆ, ಈ ಆರೋಪಿ ಕತ್ತೆಯನ್ನು ಪೊಲೀಸ್ ಠಾಣೆಯ ಹೊರಗೆ ಕಟ್ಟಿಹಾಕಲಾಗಿದೆ. ಜೂಜುಕೋರರಿಂದ ಪೊಲೀಸರು ಒಂದು ಲಕ್ಷ 20 ಸಾವಿರ ರೂ. ನಗದು ಹಣವನ್ನು ವಸೂಲಿ ಮಾಡಿದ್ದಾರೆ.