ಪಾಕಿಸ್ತಾನದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಾಯುಸೇನೆಯ ಪೈಲಟ್ ನಾದ ಒಬ್ಬ ಹಿಂದು ಯುವಕ.
ಪಾಕಿಸ್ತಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಒಬ್ಬ ಹಿಂದೂ ಯುವಕ ವಾಯುಸೇನೆಯಲ್ಲಿ ಪೈಲೆಟ್ ರೂಪದಲ್ಲಿ ಆಯ್ಕೆ ಮಾಡಲಾಗಿದೆ. ರಾಹುಲ್ ದೇವ ಎಂಬ ಹೆಸರಿನ ಒಬ್ಬ ಹಿಂದೂ ಯುವಕನನ್ನು ವಾಯುಸೇನೆಯಲ್ಲಿ GD( ಜನರಲ್ ಡ್ಯೂಟಿ) ಪೈಲೆಟ್ ಆಫೀಸರ್ ರೂಪದಲ್ಲಿ ಆಯ್ಕೆ ಮಾಡಿದ್ದಾರೆ. ಪಾಕಿಸ್ತಾನದ ಮಿಡಿಯಾದಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದಾರೆ.
ರಾಹುಲ್ ದೇವ ಇವರು ಸಿಂಧ ಪ್ರಾಂತದ ಎಲ್ಲಕ್ಕಿಂತದೊಡ್ಡ ಜಿಲ್ಲೆಯಾದ ಥರಪಾರಕರ್ ನ ವಾಸಿಸುವರು. ಪಾಕಿಸ್ತಾನದ ಈ ಜಿಲ್ಲೆಯು ಎಲ್ಲಕ್ಕಿಂತ ಹೆಚ್ಚು ಹಿಂದೂ ಜನರು ವಾಸಿಸುವ ಸ್ಥಳವಾಗಿದೆ. ಆದ್ದರಿಂದ ಈ ಜಿಲ್ಲೆಯು ವಿಕಾಸದ ದೃಷ್ಟಿಯಿಂದ ತುಂಬಾ ಹಿಂದುಳಿದ ಪ್ರದೇಶವಾಗಿದೆ, ಆದರೂ ಸಹ ಅಲ್ಲಿಂದ ಪಾಕಿಸ್ತಾನದ ವಾಯುಸೇನೆಯಲ್ಲಿ ಆಯ್ಕೆಯಾದ ಮೊದಲನೇ ವ್ಯಕ್ತಿ ರಾಹುಲ್ ದೇವ.

ಆಲ್ ಪಾಕಿಸ್ತಾನ ಹಿಂದೂ ಪಂಚಾಯತ್ ಸಚಿವರಾದ ರವಿ ದವಾನಿಯವರು ರಾಹುಲ್ ಅವರ್ ನೇಮಕಾತಿಯ ಬಗ್ಗೆ ತುಂಬಾ ಸಂತೋಷ ವ್ಯಕ್ತ ಪಡೆಸಿದ್ದಾರೆ. ಅವರ ಹೇಳಿದ ಪ್ರಕಾರ, ಅಲ್ಪಸಂಖ್ಯಾತ ಸಮುದಾಯದ ಅನೇಕ ಸದಸ್ಯರು ನಾಗರಿಕ ಸೇವೆಯಲ್ಲಿ ಮತ್ತು ಮಿಲಿಟರಿಯ ಇತರ ಅಂಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರಂತೆ.
ವಿಶೇಷವಾಗಿ ದೇಶದ ಅನೇಕ ಶ್ರೇಷ್ಠ ವೈದ್ಯರು ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಸರ್ಕಾರ ಅಲ್ಪಸಂಖ್ಯಾತರತ್ತ ಗಮನ ಹರಿಸುವುದನ್ನು ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ಅನೇಕ ರಾಹುಲ್ ದೇವ್ ಗಳಂಥ ಯುವಕರು ದೇಶದ ಸೇವೆ ಮಾಡಲು ಸಿದ್ಧರಾಗುತ್ತಾರೆ ಎಂದು ಅವರು ಹೇಳಿದರು.
ವಿಶೇಷವೆಂದರೆ, ಭಾರತದ ಅಲ್ಪಸಂಖ್ಯಾತ ಸಮುದಾಯವು ಎಲ್ಲಾ ರೀತಿಯ ಹಕ್ಕುಗಳನ್ನು ಹೊಂದಿದೆ. ಅಲ್ಲದೆ ಅವರು ದೇಶದ ಸೈನ್ಯದಲ್ಲಿದ್ದು ದೇಶದ ಮಾನ ಸನ್ಮಾನ ಹೆಚ್ಚಿಸುವದರ ಜೊತೆಗೆ ದೇಶದ ಶತ್ರುಗಳನ್ನು ಸೋಲಿಸುವಲ್ಲಿ ಅವರು ಸದಾ ತಯಾರಾಗಿರುತ್ತಾರೆ. ಅದೇ ರಾಜನೀತಿಯಲ್ಲಿ ಡಾ. ಜಾಕೀರ್ ಹುಸೇನ್, ಫಖರುದ್ದಿನ ಅಲಿ ಅಹಮ್ಮದ್ ಮತ್ತು ಬೂಟಾ ಸಿಂಗ್ , ರಾಷ್ಟ್ರಪತಿಯಂತಹ ಅನೇಕ ಸರ್ವೋಚ್ಚಪದದ ಮೇಲೆ ಇದ್ದುಕೊಂಡು ದೇಶದ ಸೇವೆಯನ್ನು ಮಾಡಿದ್ದಾರೆ.
ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಭಾರತದ ‘ಮಿಸಾಯಿಲ್ ಮ್ಯಾನ್’ ಎಂದೇ ಹೆಸರು ಪಡೆದಿದ್ದಾರೆ, ಅವರು ಭಾರತಕ್ಕೆ ಪರಮಾಣು ಶಕ್ತಿಯ ರೂಪದಲ್ಲಿ ಜಗತ್ತಿಗೆ ಪರಿಚಯಿಸಿದರು. ಆದರೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರನ್ನು ತಮ್ಮ ಧರ್ಮ ಪರಿವರ್ತನೆಮಾಡಲು ಅವರನ್ನು ಒತ್ತಾಯ ಮಾಡುತ್ತಿರುತ್ತಾರೆ. ಅಲ್ಲದೆ ಹುಡುಗಿಯರನ್ನು ಒತ್ತಾಯಿಸಿ ಓಡಿಸಿಕೊಂಡಿ ಹೋಗಿ ಅವರ ಧರ್ಮ ಪರಿವರ್ತನೆ ಮಾಡುವದು ಹಾಗೂ ಅವರೊಂದಿಗೆ ಒತ್ತಾಯದಿಂದ ವಿವಾಹ ಮಾಡಿಕೊಳ್ಳುವಂತಹ ಅನೇಕ ಘಟನೆಗಳು ಬೆಳಕಿಗೆ ಬರುತ್ತಿವೆ. ಇಂತಹ ಸಮಯದಲ್ಲಿ ಒಬ್ಬ ಹಿಂದೂ ಯುವಕನನ್ನು ಪಾಕಿಸ್ತಾನದ ವಾಯುಸೇನೆಯಲ್ಲಿ ಪೈಲೆಟ್ ಆಗಿ ಆಯ್ಕೆ ಮಾಡುವ ಸಂಗತಿ ಅಲ್ಲಿದ್ದ ಹಿಂದೂಗಳಿಗೆ ತುಂಬಾ ಹೆಮ್ಮೆ ಪಡುವ ವಿಷಯವಾಗಿದೆ.