ಪಾಕಿಸ್ತಾನದ ವಿರುದ್ಧ ಶತಕ ಬಾರಿಸಿದ ನಂತರ M.S. ಧೋನಿ ಬ್ಯಾಟ್ ತಯಾರಿಸುವ ಕಂಪನಿ ಮಾಲೀಕನ ಹೆಂಡತಿಗೆ
ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ರಿಟೈರ್ ಆದ ನಂತರ ಅವರ ಬಗೆಗಿನ ಅನೇಕ ಸಂಗತಿಗಳ ಬಗ್ಗೆ ಹೊಸ ಹೊಸ ಸುದ್ದಿಗಳು ಮೀಡಿಯಾದಲ್ಲಿ ಬರುತ್ತಿವೆ.
ಧೋನಿ ಅವರು ವಿಶ್ವದ ಅನೇಕ ದೊಡ್ಡ ದೊಡ್ಡ ಬ್ಯಾಂಡ್ಸಗಳ ಜೊತೆಗೆ ಕರಾರು ಮಾಡಿಕೊಂಡಿದ್ದಾರೆ.ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಮೇಲೆ ಬಂದು ದೊಡ್ಡ ಶ್ರೀಮಂತರಾದರೂ ಸಹಿತ ಅವರ ಕಾಲುಗಳು ಇನ್ನೂ ನೆಲದ ಮೇಲೆ ಇವೆ ಎನ್ನುವುದಕ್ಕೆ ಈ ಒಂದು ಉದಾಹರಣೆ ಸಾಕು. ತಮ್ಮ ಜೊತೆಗಿರುವ ಮಿತ್ರರನ್ನು ಎಂದಿಗೂ ಅವರು ಕೈ ಬಿಟ್ಟಿಲ್ಲ. ಧೋನಿಯವರು ತಮಗೆ ಕಠಿಣ ಸಮಯದಲ್ಲಿ ಕ್ರಿಕೆಟ್ ಕಿಟ್ ಕೊಟ್ಟು ಸಹಕರಿಸಿದ ಬ್ಯಾಟ್ ಮಾಲೀಕರ ಜೊತೆಗೆ ಇನ್ನೂವರೆಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡು ಬಂದಿದ್ದಾರೆ.
ಇತ್ತೀಚೆಗೆ ಬ್ಯಾಟ್ ಕಂಪನಿಯ ಮಾಲೀಕರು ಧೋನಿಯ ಬಗ್ಗೆ ಒಂದು ಸಂಗತಿಯನ್ನು ಹೇಳಿಕೊಂಡಿದ್ದಾರೆ. ಇಂಡಿಯನ್ ಎಕ್ಸಪ್ರೆಸ್ ಜೊತೆಗೆ ಮಾತನಾಡುವಾಗ ಬಾಸ್ ಕಂಪನಿಯ 66 ವರ್ಷದ ಮಾಲೀಕರಾದ ಸೋಮಿಯವರು ಹೇಳುತ್ತಾರೆ, ರಾಂಚಿ ಡೀಲರ್ ಆದ ಪರಂಜಿತ್ ಸಿಂಗರು ಧೋನಿಯ ಬಗ್ಗೆ ತುಂಬಾ ವರ್ಣನೆಯನ್ನು ಮಾಡಿದ್ದರು. ಅಷ್ಟೇ ಅಲ್ಲ ಧೋನಿಯವರಿಗೆ ಪ್ರಾಯೋಜಕರನ್ನಾಗಿ ಮಾಡಲು ತುಂಬಾ ಆಗ್ರಹಿಸಿದ್ದರು. ಆಗ ಧೋನಿಯವರು ಬರೀ 18 ವರ್ಷದ ವರ್ಷದವರಾಗಿದ್ದರು. ಧೋನಿ ಅವರು ಆಗಿನ್ನೂ ಭಾರತದ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಅಂಥ ಸಂದರ್ಭದಲ್ಲಿ ಧೋನಿಯವರಿಗೆ ಒಳ್ಳೆಯ ಮತ್ತು ಬೆಲೆಬಾಳುವ ಆಟದ ಸಾಹಿತ್ಯಗಳನ್ನು ಖರೀದಿಸುವುದು ಕಷ್ಟದ ಕೆಲಸವಾಗಿತ್ತು. ಆಗ ಧೋನಿಯವರ ಮಿತ್ರರಾದ ಪರಮಜಿತ್ ಸಿಂಗ್ ರು ಧೋನಿಗೆ ತುಂಬಾ ಸಹಾಯ ಮಾಡಿದರು. ಪ್ರಾಯೋಜಕತ್ವದ ಸಲುವಾಗಿ ಯಾವಾಗಲೂ ಹೊಸ ಪ್ರತಿಭೆಗಳನ್ನು ಶೋಧಿಸುವ ಸೋಮಿಯವರಿಗೆ ಧೋನಿ ಅವರನ್ನು ಪ್ರಯೋಜಕರನ್ನಾಗಿ ಮಾಡಲು 6 ತಿಂಗಳುಗಳ ಕಾಲ ಸಮಯಾವಕಾಶ ಬೇಕಾಯಿತು. ಮುಂದೆ 1998 ರಲ್ಲಿ ಸೊಮಿ ಅವರು ಧೋನಿಗಾಗಿ ಒಂದು ಕಿಟ್ ಕೊಟ್ಟರು.

ಸೋಮಿ ಅವರು ಹೇಳುವ ಪ್ರಕಾರ, ಧೋನಿಯವರ ರಿಟೈರ್ಮೆಂಟ್ ಸುದ್ದಿ ಕೇಳಿದ ನಂತರ ಆ ರಾತ್ರಿ ಎಷ್ಟೋ ಹೊತ್ತಿನವರೆಗೆ ನನಗೆ ನಿದ್ರೆ ಬರಲಿಲ್ಲ.
ಹೆಂಡತಿ ಗುರುತಿಸಲಿಲ್ಲ.
ಧೋನಿಯ ಬಗ್ಗೆ ತಮ್ಮ ಒಂದು ಸಂಗತಿಯನ್ನು ನೆನಪಿಸಿಕೊಂಡು ಹೀಗೆ ವಿವರಿಸುತ್ತಾರೆ. 2004 ರಲ್ಲಿ ಚಂದಿಗಡದಲ್ಲಿರುವ ಬ್ಯಾಟ್ ಕಂಪನಿಗೆ ಭೇಟಿ ಕೊಟ್ಟಾಗ ಧೋನಿ ಒಂದು ದಿವಸ ಜಲಂಧರದಲ್ಲಿಯ ಸೋಮಿ ಅವರ ಮನೆಯಲ್ಲಿ ತಂಗಿದ್ದರು. ಆ ಸಮಯದಲ್ಲಿ ಸೋಮಿ ಅವರ ಹೆಂಡತಿ ಸೋಮಿಯವರಿಗೆ ಧೋನಿ ಅವರನ್ನು ಉದ್ದೇಶಿಸಿ, ಇವರು ಯಾರು ಅಂತ ಕೇಳಿದ್ದರು. ಸೋಮಿಯವರ ಹೆಂಡತಿಯ ಆ ಮಾತುಗಳನ್ನು ಕೇಳಿ ಅವತ್ತು ರಾತ್ರಿ ಧೋನಿ ಅವರು ಸರಿಯಾಗಿ ಮಲಗಿರಲಿಲ್ಲವಂತೆ, ಎಂದು ಧೋನಿ ಮರುದಿನ ಸೋಮಿಯವರಿಗೆ ಹೇಳಿದರಂತೆ.
ಮುಂದೆ ಕೆಲವೇ ದಿನಗಳ ನಂತರ ಧೋನಿ ಅವರು ಪಾಕಿಸ್ತಾನದ ವಿರುದ್ಧ ಭರ್ಜರಿ ಶತಕ ಬಾರಿಸಿದ ರಾತ್ರಿಯೇ 11 ಗಂಟೆಗೆ ನನಗೆ ಕಾಲ್ ಮಾಡಿ, ನನಗೆ ನಿಮ್ಮ ಪತ್ನಿಯವರ ಜೊತೆಗೆ ಸ್ವಲ್ಪ ಮಾತನಾಡುವುದಿದೆ ಎಂದರು. ಆಗ ಧೋನಿ,’ಆಂಟಿ ಅವರೇ, ನಾನು ಧೋನಿ ಇದ್ದೇನೆ ಎಂದಾಗ, ನನ್ನ ಪತ್ನಿ ‘ಮಗ, ಈಗ ಧೋನಿ ಯಾರು ಅಂತ ಇಡೀ ಜಗತ್ತಿಗೆ ಗೊತ್ತಾಗಿ ಬಿಟ್ಟಿದೆ’, ಅಂತ ಹೇಳಿದರು.