ಪಾರ್ಟಿಯಲ್ಲಿ ಮದ್ಯ ಮುಗಿದ ನಂತರ ಸ್ಯಾನಿಟೈಜರ್ ಕುಡಿದರು; 7 ಜನರ ಸಾವು
ಕುಡುಕರು ಯಾವಾಗ ಏನು ಮಾಡುತ್ತಾರೆ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ. ಪಾರ್ಟಿಯು ತುಂಬಾ ಜೋರಾಗಿ ನಡೆದಾಗ ಎಣ್ಣೆ ಮುಗಿದುಹೋಗಿದೆ. ಏನೇ ಆಗಲಿ ಇನ್ನೂ ಪಾರ್ಟಿ ಹಾಗೆಯೇ ಮುನ್ನಡೆಯಬೇಕು ಎಂಬ ಆಲೋಚನೆಯಿಂದ ಎಣ್ಣೆಯ ಬದಲಾಗಿ ಕುಡಿಯಲು ಸ್ಯಾನಿಟೈಸರ್ ನ್ನು ಉಪಯೋಗ ಮಾಡಿದ್ದಾರೆ.
ಪ್ರಸ್ತುತ ಘಟನೆ ರಶಿಯಾ ದೇಶದಿಂದ ವರದಿಯಾಗಿದೆ. ಇಲ್ಲಿಯ ಒಂದು ಹಳ್ಳಿಯಲ್ಲಿ ಮಿತ್ರರು ಪಾರ್ಟಿ ಮಾಡುತ್ತಿರುವಾಗ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಪಾರ್ಟಿಯಲ್ಲಿ ಎಣ್ಣೆ ಮುಗಿದ ನಂತರ ಪಾರ್ಟಿ ಮುಗಿಸುವುದನ್ನು ಬಿಟ್ಟು ಎಣ್ಣೆಯ ಸ್ಥಾನದಲ್ಲಿ ಸ್ಯಾನಿಟೈಸರ್ ಉಪಯೋಗಿಸಿದ್ದಾರೆ. ಈ ಮೂರ್ಖತನದಿಂದ ಏಳು ಜನರು ಅಸುನೀಗಿ ಇಬ್ಬರು ಕೋಮಾದಲ್ಲಿ ಇದ್ದಾರೆ.
ಡೆಲಿ ಮೇಲ್ ನೀಡಿದ ವೃತ್ತದ ಪ್ರಕಾರ ರಶಿಯಾದಲ್ಲಿಯ ತಾತಿಂಸಕಿ ಜಿಲ್ಲೆಯ ತೊಮ್ಟೋರ್ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಒಟ್ಟು ಒಂಬತ್ತು ಜನರು ಕೂಡಿ ಪಾರ್ಟಿ ಮಾಡುತ್ತಿದ್ದರು. ಹೀಗೆ ಇವರೆಲ್ಲಾ ಕುಳಿತು ಪಾರ್ಟಿ ಮಾಡುವಾಗ ಮಧ್ಯದಲ್ಲಿ ಎಣ್ಣೆ ಮುಗಿದಿದೆ. ಪಾರ್ಟಿಯ ತೃಷೆ ಇನ್ನು ಹಾಗೆ ಇರುವಾಗ ಇನ್ನೇನು ಮಾಡುವುದು ಎಂದು ವಿಚಾರ ಮಾಡಿ ಎಣ್ಣೆಯ ಬದಲಾಗಿ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸಿದ್ದಾರೆ. ಅದರಲ್ಲಿ 69% ಮಿಥೆನಾಲ್ ಇತ್ತು. ಇದರಿಂದ ಮೂರು ಜನರ ಸಾವು ಸ್ಥಳದಲ್ಲಿಯೇ ಘಟಿಸಿದೆ.ವಿಶೇಷವೆಂದರೆ ಇದರಲ್ಲಿ ಒಬ್ಬಳು ಮಹಿಳೆಯು ಸಹಿತ ಶಾಮೀಲಾಗಿದ್ದಾಳೆ. ಉಳಿದ ಆರು ಜನರನ್ನು ಏರ್ಕ್ರಾಫ್ಟ್ ಮೂಲಕ ಯಾಕೂತ್ಸಕ್ ಪಟ್ಟಣಕ್ಕೆ ಒಯ್ಯಲಾಯಿತು. ಅಲ್ಲಿ ಹೋದ ನಂತರ ಮತ್ತೆ ನಾಲ್ಕು ಜನರ ಮೃತ್ಯು ಸಂಭವಿಸಿತು. ಮತ್ತೆ ಇನ್ನಿಬ್ಬರು ಕೋಮಾದಲ್ಲಿ ಇದ್ದಾರೆ. ಫೆಡರಲ್ ಪಬ್ಲಿಕ್ ಹೆಲ್ತ್ ವಾಚ್ ಡಾಗ್ Rospotrebnadzor ಪ್ರಕಾರ 7 ಜನರ ಮೃತ್ಯು ಸ್ಯಾನಿಟೈಸರ್ ನಲ್ಲಿರುವ ವಿಷಬಾಧೆಯಿಂದ ಸಂಭವಿಸಿದೆಯೆಂದು ಕೇಸು ದಾಖಲಿಸಲಾಗಿದೆ.

ಸ್ಯಾನಿಟೈಸರ್ ಸೇವಿಸಬೇಡಿ ಅಭಿಯಾನ…..
ಸದ್ಯ ರಶಿಯನ್ ಸರ್ಕಾರ ಜನರಿಗೆ ಸ್ಯಾನಿಟೈಸರ್ ಸೇವಿಸಬೇಡಿ ಎಂದು ಕರೆ ನೀಡಿದೆ. ಇಂಥ ಸ್ಯಾನಿಟೈಸರ್ ನಲ್ಲಿ ಅಲ್ಕೋಹಾಲ್ ಹೊರತಾಗಿ ಬೇರೆ ಅನೇಕ ಘಟಕಗಳಿರುತ್ತವೆ. ಈ ಘಟಕಗಳು ದೇಹಕ್ಕೆ ಹಾನಿಯನ್ನು ಉಂಟುಮಾಡುತ್ತವೆ.
ರಷ್ಯಾದಲ್ಲಿ ಇಲ್ಲಿಯವರೆಗೆ ಕೊರೋನಾ ರೋಗಿಗಳ ಸಂಖ್ಯೆ 21 ಲಕ್ಷ ದಾಟಿದೆ. ಇಲ್ಲಿಯವರೆಗೆ ರಷಿಯಾದಲ್ಲಿ 36 ಸಾವಿರ ಕೊರೋನಾ ರೋಗಿಗಳ ಮೃತ್ಯು ಸಂಭವಿಸಿದೆ. ದಿನದಿಂದ ದಿನಕ್ಕೆ ಜಗತ್ತಿನಲ್ಲೇಲ್ಲ ಕೋರೊನಾ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಜಗತ್ತಿನ ಸಂಖ್ಯೆಯ ಮೇಲೆ ಒಮ್ಮೆ ದೃಷ್ಟಿ ಹಾಯಿಸಿದರೆ ಇಲ್ಲಿಯವರೆಗೆ 5 ಕೋಟಿ 80 ಲಕ್ಷ ರೋಗಿಗಳಿಗೆ ಕೊರೋನಾದ ಸೋಂಕು ತಗಲಿದೆ. ಮತ್ತು 13 ಲಕ್ಷ 80 ಸಾವಿರ ಜನರು ಈ ರೋಗಕ್ಕೆ ತುತ್ತಾಗಿದ್ದಾರೆ.