ಪುಟ್ಟ ಮಗು ಹಸುವಿಗೆ ತಂದಿಟ್ಟಳು ಆಹಾರ; ನಂತರ ಅಲ್ಲಿ ನಡೆದ ಆ ದೃಶ್ಯ….ನೋಡಿ ಈ ಸೂಪರ್ ವಿಡಿಯೋದಲ್ಲಿ.
ಸಾಮಾನ್ಯವಾಗಿ ಹಸುವನ್ನು ತಾಯಿಯಂದು ಪೂಜೆ ಮಾಡುತ್ತಾರೆ. ಅಲ್ಲದೆ ಹಸುವನ್ನು ಹತ್ತು ಕೋಟಿ ದೇವತೆಯನ್ನು ಹೊತ್ತ ಪ್ರಾಣಿಯಂದು ಸಹ ಕರೆಯುವರು. ಹಸುವಿನ ಬಗ್ಗೆ ಎಷ್ಟೇ ಹೇಳಿದರು ಅದು ಸಾಲದು. ನಾವು ಹಸುವನ್ನು ದೈವವೆಂದು ಪೂಜೆ ಮಾಡಿ ಅದರ ಆಶೀರ್ವಾದ ಸಹ ಪಡೆಯುತ್ತೇವೆ. ದಿನನಿತ್ಯದ ಮುಂಜಾನೆಯ ಸಮಯದಲ್ಲಿ ಹಸುವನ್ನು ಮುಟ್ಟಿ ನಮಸ್ಕರಿಸುವದು ತುಂಬಾ ಶುಭವಾಗುತ್ತೆ ಅಂತ ನಮ್ಮ ಸಂಪ್ರದಾಯ ಹೇಳುತ್ತೆ.
ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಹಸು ಮತ್ತು ಪುಟ್ಟ ಹುಡುಗಿಯ ನಡುವಿನ ಬಾಂಧವ್ಯ ಎಂತಹದು ಅಂತ ನೋಡಬಹುದು. ಪ್ರಸ್ತುತ ವೀಡಿಯೋದಲ್ಲಿ ಒಂದು ಪುಟ್ಟ ಹುಡುಗಿ ರಸ್ತೆಯ ಬದಿಯಲ್ಲಿ ತಟ್ಟೆಯಲ್ಲಿ ಆಹಾರ ಹಾಕಿಕೊಂಡು ನಿಂತಿರುತ್ತಾಳೆ. ಅದನ್ನು ದೂರದಿಂದ ನೋಡಿದ ಹಸು ಸರಾಗವಾಗಿ ಪುಟ್ಟ ಬಾಲಕಿಯ ಕಡೆಗೆ ಬರುತ್ತದೆ. ದೊಡ್ಡ ಆಕಾರಾದ ಹಸು ಕಂಡರೆ ದೊಡ್ಡವರೆ ಹೆದರುತ್ತಾರೆ ಆದರೆ ಈ ಪುಟ್ಟ ಬಾಲಕಿ ಹಸು ಬರುವದನ್ನು ಕಂಡು ಹೆದರದೆ ಖುಷಿ ಪಡುತ್ತಾಳೆ. ಹಸು ನೇರವಾಗಿ ತನ್ನೆಡೆಗೆ ಬರುತ್ತಿದ್ದನ್ನು ಕಂಡು ತನ್ನ ತಟ್ಟೆಯಲ್ಲಿದ್ದ ಆಹಾರವನ್ನು ಕೆಳಗೆ ಇಡುತ್ತಾಳೆ. ಆಗ ಹಸು ಬಂದ ಮೊದಲಿಗೆ ಹಸುವಿನ ಹಣೆಯ ಮೇಲೆ ಕೈಯಿಟ್ಟು ನಮಸ್ಕಾರ ಮಾಡಿ ಅದಕ್ಕೆ ಮುದ್ದು ಕೊಟ್ಟು ನಂತರ ಕೆಳಗಡೆ ಇಟ್ಟ ಆಹಾರದತ್ತ ಸನ್ನೆ ಮಾಡಿ ತಿನ್ನಲು ಹೇಳುತ್ತಾಳೆ. ಆಗ ಹಸು ಅನ್ನವನ್ನು ಸಂತೋಷವಾಗಿ ತಿನ್ನುತ್ತದೆ. ನಿಜವಾಗಿಯೂ ಈ ದ್ರಶ್ಯ ನೋಡಿದರೆ ಕಾಮಧೇನು ಮತ್ತು ಮಗುವಿನ ಬಂಧ ಎಷ್ಟು ಅದ್ಭುತವಾದದ್ದು ಅಂತ ತಿಳಿದು ಬರುತ್ತದೆ.
ವಿಡಿಯೋ ನೋಡಿ
What a beautiful video… Do watch#cow #SocialMedia #Pure #amazing #wildlense
Credits on video pic.twitter.com/yChyljzp02— WildLense® Eco Foundation 🇮🇳 (@WildLense_India) June 3, 2022
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ WildLens® Eco Foundation ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ನಲ್ವತ್ತು ಸವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.