ಪುನೀತ್ ಅವರು ಮೃತ್ಯುವಿನ ನಂತರ ಕುಟುಂಬಕ್ಕಾಗಿ ಇಷ್ಟೊಂದು ಸಂಪತ್ತನ್ನು ಬಿಟ್ಟುಹೋದರು.

ಚಂದನವನ ಈಗಷ್ಟೇ ಚಿರು ಸರ್ಜಾ ಅವರ ನಿಧನದಿಂದ ಚೇತರಿಸಿಕೊಳ್ಳುತ್ತಿತ್ತು ಎನ್ನುವಷ್ಟರಲ್ಲೇ ಪುನೀತ್ ಅವರ ಸಾವು ಬರಸಿಡಿಲಿನಂತೆ ಬಂದು ಅಪ್ಪಳಿಸಿತು. ಕಾರ್ಡಿಯಾಕ್ ಅರೆಸ್ಟ್ ಕಾರಣದಿಂದಾಗಿ ಪುನೀತ್ ಅವರು ನಮ್ಮ ಮಧ್ಯದಲ್ಲಿ ಇದ್ದವರು ಕ್ಷಣದಲ್ಲಿ ಇಲ್ಲದಂತಾದರು. ಅವರು ಬರೀ 46 ವರ್ಷದವರಾಗಿದ್ದರು. ಚಂದನವನದಲ್ಲಿ ತಮ್ಮದೇ ಆದ ಒಂದು ಅದ್ಭುತ ಸ್ಥಾನವನ್ನು, ಗುರುತನ್ನು ನಿರ್ಮಾಣ ಮಾಡಿಕೊಂಡಿದ್ದರು. ಇವರ ಚಲನಚಿತ್ರಗಳನ್ನು ವೀಕ್ಷಿಸಿದ ಕನ್ನಡಿಗರಷ್ಟೇ ಅಲ್ಲ ಹಿಂದಿ ಡಬ್ ನಲ್ಲಿ ನೋಡಿದ ಅದೆಷ್ಟೋ ಅಭಿಮಾನಿಗಳು ಸಹ ಅವರನ್ನು ಫಾಲೋ ಮಾಡುತ್ತಿದ್ದರು. ಇವರ ಆಕಸ್ಮಿಕ ನಿಧನದಿಂದ ಫಿಲಂ ಇಂಡಸ್ಟ್ರಿಗೆ ಶಾಕ್ ಆಗಿದೆ.

ಇವರ ನಟನೆಯ ಪ್ರವಾಸ ವಯಸ್ಸಿನ ಆರನೇ ತಿಂಗಳಿಗೆ ತಂದೆಯ ಚಿತ್ರವಾದ ‘ಪ್ರೇಮದ ಕಾಣಿಕೆ’ ಯಲ್ಲಿ ಅಭಿನಯಿಸುವ ಮೂಲಕ ಪ್ರಾರಂಭವಾದ ಪಯಣ 29 ಅಕ್ಟೋಬರ್ 2021 ಕ್ಕೆ ನಿಂತು ಬಿಟ್ಟಿತು.

ಈ ಮಧ್ಯದಲ್ಲಿ ಪುನೀತ್ ಅವರು ತಮ್ಮ ಮೇರು ನಟನೆಯಿಂದ ಕನ್ನಡಿಗರನ್ನು ಮಂತ್ರಮುಗ್ಧಗೊಳಿಸಿ ಹೋದರು. ಅವರು ಅಪ್ಪು, ಅಜಯ್, ವೀರ ಕನ್ನಡಿಗ, ಅರಸು, ರಾಮ್, ಅಂಜನಿ ಪುತ್ರ, ಮಿಲನ್ ಮತ್ತು ತಮ್ಮ ಕೊನೆಯ ಚಿತ್ರ ಯುವರತ್ನ ಹೀಗೆ ಹತ್ತು ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡಿಗರನ್ನು ತಮ್ಮ ಅಭಿಮಾನಿಗಳನ್ನಾಗಿ ಮಾಡಿಕೊಂಡರು.

ಇಂಥ ಕನ್ನಡಿಗರ ಪ್ರೀತಿಯ ಅಪ್ಪು ಕನ್ನಡಿಗರಿಗಾಗಿ, ಕರ್ನಾಟಕಕ್ಕಾಗಿ ಲೆಕ್ಕವಿಲ್ಲದಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ತಮ್ಮ ಬದುಕು ಸಮಾಜಕ್ಕಾಗಿ ಮೀಸಲಿಟ್ಟು ಹೋದರು. ಇಷ್ಟಾದರೂ ಅಪ್ಪು ತಮ್ಮ ಕುಟುಂಬಕ್ಕಾಗಿಯೂ ಸಹ ಸಮಯ ನೀಡುತ್ತಿದ್ದರು. ಅದರ ಜೊತೆ ಪುನೀತ್ ಅವರು ಸುಮಾರು 250 ಕೋಟಿ ರೂಪಾಯಿಯ ಓಡೆಯರಾಗಿದ್ದರು. ಇವರ ವಾರ್ಷಿಕ ಆದಾಯ 7 ಕೋಟಿ ರೂಪಾಯಿಗಳಷ್ಟು ಇತ್ತು. Range Rover, Toyota, Audi A6, Jaguar, Lamboarghini ಈ ರೀತಿಯ ಲಕ್ಸುರಿ ಕಾರುಗಳು ಸಹ ಇವೆ. ಇವಷ್ಟಲ್ಲದೆ ಅವರ ಹತ್ತಿರ 21.44 ಲಕ್ಷ ರೂಪಾಯಿಗಳ Indian Chief Bobber ಮೋಟಾರ್ ಬೈಕ್ ಸಹಿತ ಇದೆ.