ಪುರುಷರಲ್ಲಿಯ ಯಾವ ಗುಣ ಮಹಿಳೆಯರಿಗೆ ಹೆಚ್ಚು ಆಕರ್ಷಣೆ ಮಾಡುತ್ತದೆ? ವೈಜ್ಞಾನಿಕ ಕಾರಣವೇನು…?
ತುಂಬಾ ಸಂಕೀರ್ಣ ಮತ್ತು ಅಷ್ಟೇ ಕ್ಲಿಷ್ಟಕರವಾದ ಈ ಪ್ರಶ್ನೆಯ ಉತ್ತರವನ್ನು ಶೋಧಿಸಲು ಜಗತ್ತಿನ ಹೆಸರಾಂತ ವಿಶ್ವವಿದ್ಯಾಲಯಗಳ ಶಾಸ್ತ್ರಜ್ಞರು ಪರಿಶ್ರಮ ಪಡುತ್ತಿದ್ದಾರೆ. ಈ ವಿಷಯವು ಯಾರಿಗೂ ಅಷ್ಟೊಂದು ಸಂಪೂರ್ಣವಾಗಿ ತಿಳಿಯದೆ ಇದ್ದರೂ ಸಂಶೋಧಕರು ಮಾತ್ರ ಸಾಕಷ್ಟು ಮಹಿಳೆಯರಲ್ಲಿ ಕಾಮನ್ ಆಗಿರತಕ್ಕಂತ ಕೆಲವು ವಿಷಯಗಳನ್ನು ಜಾಹೀರು ಮಾಡಿದ್ದಾರೆ. ಪುರುಷರಲ್ಲಿ ಕಂಡುಬರುವ ಯಾವ ವ್ಯವಹಾರಿಕ ಗುಣಗಳಿಂದ ಮಹಿಳೆಯರು ಪುರುಷರೆಡೆಗೆ ಆಕರ್ಷಣೆಗೆ ಒಳಗಾಗುತ್ತಾರೆ ಎಂಬುದರ ಬಗ್ಗೆ ಈ ಲೇಖನದಲ್ಲಿ ವಿಸ್ತಾರವಾಗಿ ನೋಡುವ.
1) ರೂಟರ್ ಇನ್ವರ್ಸಿಟಿಯ ಮಾನವವಂಶಶಾಸ್ತ್ರಜ್ಞ ಮತ್ತು ಪ್ರಸಿದ್ಧ ಲೇಖಕಿ ಹೆಲೆನ್ ಇ ಫಿಶರ್ ಪ್ರಕಾರ, ಪ್ರಪಂಚದಾದ್ಯಂತ ಸ್ತ್ರೀಯರು ಪುರುಷರಲ್ಲಿ ಅಭಿವ್ಯಕ್ತಿಯ ಮೇಲೆ ಆಧಾರಿತವಾಗಿ ಸ್ವಾರಸ್ಯವನ್ನು ತೋರಿಸುತ್ತಾರೆ. ಬಲವಂತವನ್ನು ತೋರಿಸುವ ಪುರುಷರು ಸ್ತ್ರೀಯರಿಗೆ ಅಷ್ಟೊಂದು ಆಕರ್ಷಕವಾಗಿರುವುದಿಲ್ಲ.

2) ವೇಲ್ಸ್ ಇನ್ವರ್ಸಿಟಿ ಮಾಡಿದ 2010 ರ ಸಂಶೋಧನೆಯಲ್ಲಿ ಕಂಡುಬಂದ ಪ್ರಕಾರ, ನಿಮ್ಮ ಸೌಂದರ್ಯವು ದೊಡ್ಡ ದೊಡ್ಡ ವಾಹನಗಳಲ್ಲಿ ತಿರುಗಾಡಿದ ನಂತರ ಅಥವಾ ಒಳ್ಳೆಯ ಬಟ್ಟೆಗಳನ್ನು ತೊಟ್ಟುಕೊಂಡ ನಂತರವೇ ಚೆನ್ನಾಗಿ ಕಾಣಿಸುತ್ತದೆ ಎಂದೇನಿಲ್ಲ. ಸೈಕಲ್ ಮೇಲೆ ತಿರುಗಾಡುವ ವ್ಯಕ್ತಿಯು ಸಹಿತ ಮಹಿಳೆಯನ್ನು ಆಕರ್ಷಿಸಬಹುದು. ನಿಮ್ಮ ವ್ಯಕ್ತಿತ್ವ ನಿಮ್ಮ ಮುಖದ ಮೇಲಿಂದಲೇ ಕಾಣಿಸುತ್ತದೆ.
3) ಇರುವ ವಯಸ್ಸಿಗಿಂತಲೂ ಹೆಚ್ಚು ವಯಸ್ಸಿನವರಾಗಿ ಕಾಣುವುದಕ್ಕೆ ಮಾನಸ ಶಾಸ್ತ್ರಜ್ಞ ಜಾರ್ಜ್ ಕ್ಲೂನಿ ಎಫೆಕ್ಟ್ ಎಂದು ಕರೆಯುತ್ತಾರೆ. 2010 ರಲ್ಲಿ 3,770 ವಿಷಮ ಲೈಂಗಿಕ ಪ್ರೌಢರ ಅಭ್ಯಾಸದಲ್ಲಿ ಕಂಡುಬಂದ ಪ್ರಕಾರ, ಸ್ತ್ರೀಯರು ಹೆಚ್ಚಾಗಿ ತಮಗಿಂತಲೂ ಹೆಚ್ಚು ವಯಸ್ಸಿನವರ ಕಡೆಗೆ ಆಕರ್ಷಿತರಾಗುತ್ತಾರೆ. ಯೂನಿವರ್ಸಿಟಿ ಆಫ್-ಇಂಡಿ ಯ ಮಾನಶಾಸ್ತ್ರಜ್ಞ ಮತ್ತು ಲೇಖಕಿಯರಾದ ಫಿಓನಾ ಮೂರ್ ಹೇಳುವ ಪ್ರಕಾರ, ಯಾವ ಮಹಿಳೆ ಆರ್ಥಿಕವಾಗಿ ಸಬಲವಾಗಿರುತ್ತಾಳೋ ಅಂಥ ಮಹಿಳೆಯು ದಷ್ಟಪುಷ್ಟ ಮತ್ತು ತನ್ನ ವಯಸ್ಸಿಗಿಂತಲೂ ದೊಡ್ಡ ಪುರುಷನ ಕಡೆಗೆ ಆಕರ್ಷಿತವಾಗುತ್ತಾಳೆ.

4) ನ್ಯೂ ಸೌತ್ ವೇಲ್ಸ್ ಯೂನಿವರ್ಸಿಟಿಯ ಸಂಶೋಧಕರು 2013 ರಲ್ಲಿ ಒಂದು ನಿಷ್ಕರ್ಷಕ್ಕೆ ಬಂದಿದ್ದರು. ಏನೆಂದರೆ, ಮಹಿಳೆಯರಿಗೆ ನೀಟಾಗಿ ಸೇವ್ ಮಾಡಿಕೊಂಡ, ಮಧ್ಯಮ ಗಡ್ಡವಿದ್ದ ಮತ್ತು ದಟ್ಟವಾಗಿ ಗಡ್ಡವನ್ನು ಬೆಳೆಸಿದ ಈ ಮೂವರಲ್ಲಿ ನಿಶ್ಚಿತವಾಗಿ ಯಾರು ಇಷ್ಟವೆಂದು ಕೇಳಲಾಗಿತ್ತು. ಇದಕ್ಕೆ ಉತ್ತರವಾಗಿ ಹೆಚ್ಚುವರಿ ಸ್ತ್ರೀಯರು ಮಧ್ಯಮವಾಗಿ ಗಡ್ಡವಿದ್ದ ಪುರುಷರು ತುಂಬಾ ಆಕರ್ಷಕವಾಗಿರುತ್ತಾರೆ ಎಂದು ಹೇಳಿದ್ದಾರೆ.
5) ಮಹಿಳೆಯರಿಗೆ ದಯೆಯಿಂದ ಕೂಡಿದ ಸೌಮ್ಯ ಸ್ವಭಾವದ ಪುರುಷರು ಹೆಚ್ಚು ಇಷ್ಟವಾಗುತ್ತಾರೆ.

6) ಸಂಶೋಧನೆಯಿಂದ ತಿಳಿದು ಇನ್ನೊಂದು ಮಹತ್ವದ ಸಂಗತಿ ಏನೆಂದರೆ, ಸ್ತ್ರೀಯರಿಗೆ ತಮಾಷೆ ಮಾಡುವವರು ಅಥವಾ ನಗಿಸುವವರು ಎಂದರೆ ತುಂಬಾ ಇಷ್ಟವಾಗುತ್ತಾರಂತೆ. ಅದರ ಜೊತೆಗೆ ಸರಿಯಾಗಿ ಮಾತು ಬಲ್ಲವನಾದರೆ ಸ್ತ್ರೀಯರಿಗೆ ಮತ್ತಷ್ಟು ಇಷ್ಟವಾಗುತ್ತಾರೆ.
7) ದೈಹಿಕವಾಗಿ ಆರೋಗ್ಯವಂತನಾಗಿದ್ದು ಅಷ್ಟೇ ಸಪೂರವಾದ ಶರೀರ ಉಳ್ಳವರು ಸಹ ಮಹಿಳೆಯರಿಗೆ ತುಂಬಾ ಇಷ್ಟವಾಗುತ್ತಾರೆ.