ಪುಷ್ಪಾ ರಿಲೀಸ್ ಆಗುತ್ತಲೇ ಅಭಿಮಾನಿಗಳ ಕೋಪ ತಾರಕಕ್ಕೆ! ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅವರ ಬೋಲ್ಡ್ ಸೀನ್…

ಸೂಪರ್ ಸ್ಟಾರ್ ಗಳಾದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ‘ಪುಷ್ಪಾ’ ಚಿತ್ರವು ಚಿತ್ರರಸಿಕರಲ್ಲಿ ತುಂಬಾ ಚರ್ಚೆಯ ವಿಷಯವಾಗಿದೆ. ಅದಕ್ಕೆ ಕಾರಣವೂ ಹಾಗೆಯೇ ಇದೆ. ಪ್ರಸ್ತುತ ಚಿತ್ರವು ಮೂರೇ ದಿನಗಳಲ್ಲಿ 173 ಕೋಟಿ ರೂಪಾಯಿಗಳ ಗಳಿಕೆ ಮಾಡಿದೆ. ಹಣ ಗಳಿಕೆಯ ಈ ವೇಗ ನೋಡಿದರೆ ಮುಂದಿನ ಕೆಲವೇ ದಿನಗಳಲ್ಲಿ ಹಣ ಗಳಿಕೆಯ ಹಿಂದಿನ ದಾಖಲೆಗಳನ್ನು ಪುಡಿ ಪುಡಿ ಮಾಡಲಿದೆ ಎಂಬ ಮಾತುಗಳು ಚಲನಚಿತ್ರ ವಲಯದಿಂದ ಕೇಳಿ ಬರುತ್ತಿದೆ. ಇದರ ಜೊತೆಗೆ ಈ ಚಿತ್ರವು ತನ್ನ ಜೊತೆಗೆ ವಾದವೊಂದು ಸೃಷ್ಟಿ ಮಾಡಿಕೊಂಡಿದೆ.

ಸದ್ಯ ಈ ಇಬ್ಬರು ಕೂಡಿ ನಟಿಸಿದ ಹೊಸ ಚಿತ್ರವು ದೇಶದಲ್ಲಿಯೇ ಬಾಕ್ಸಾಫಿಸೀನಲ್ಲಿ ಕೇಕೆ ಹಾಕುತ್ತಿದೆ.

ಇದರ ಹಣ ಗಳಿಕೆಯ ವೇಗ ನೋಡಿ, ಬರೀ ಮೂರೇ ದಿನಗಳಲ್ಲಿ 173 ಕೋಟಿ ರೂಪಾಯಿಗಳನ್ನು ಗಳಿಸಿದೆ.

ಆದರೆ ಒಂದು ವಾದದಿಂದ ಮಾತ್ರ ಚಿತ್ರದಲ್ಲಿಯ ಕೆಲವು ಸೀನ್ ಗಳಿಗೆ ಕತ್ತರಿ ಹಾಕಬೇಕಾಗಿ ಬಂತು ಫಿಲಂ ಮೇಕರ್ ಗೆ.

ಪ್ರಸ್ತುತ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅವರ ಅನೇಕ ರೊಮ್ಯಾಂಟಿಕ್ ಹಾಗೂ ಇಂಟಿಮೇಟ್ ಸೀನ್ ಗಳಿವೆ. ಪುಷ್ಪರಾಜ್ (ಅಲ್ಲು ಅರ್ಜುನ್) ಒಂದು ವ್ಯಾನ್ ನಲ್ಲಿ ತನ್ನ ಪ್ರೇಯಸಿ ಶ್ರೀವಲ್ಲಿ (ರಶ್ಮಿಕಾ) ಗೆ ಬೇಡವಾದ ಸ್ಥಾನದಲ್ಲಿ ಸ್ಪರ್ಶ ಮಾಡುತ್ತಾನೆ. ಆಗ ಶ್ರಿವಲ್ಲಿ ಕೋಪಗೊಳ್ಳುತ್ತಾಳೆ. ಆಗ ಅಲ್ಲು ಅರ್ಜುನ್, ನನ್ನ ಒಂದು ಕೈಯಲ್ಲಿ ಮೊಬೈಲ್ ಇತ್ತು ಇನ್ನೊಂದು ಕೈ ಎಲ್ಲಿ ಮತ್ತು ಹೇಗೆ ಹೋಯಿತು ಗೊತ್ತೇ ಆಗ್ಲಿಲ್ಲ ಎಂದು ಪುಷ್ಪರಾಜ್ ಎನ್ನುತ್ತಾನೆ. ಇದೇ ಸೀನ್ ಚಿತ್ರ ರಸಿಕರಿಗೆ ಸರಿ ಎನಿಸಿಲ್ಲ.

ಈ ಸೀನ್ ಹೆಚ್ಚಾಗಿ ತೆಲುಗಿನವರಿಗೆ ಮತ್ತು ಕನ್ನಡಿಗರಿಗೆ ಹಿಡಿಸಿಲ್ಲ. ಇದೇ ಕಾರಣದಿಂದ ಸದ್ಯ ಈ ಸೀನ್ ಚಿತ್ರದಿಂದ ತೆಗೆದು ಹಾಕಲಾಗಿದೆ.

ಬಾಲಿವುಡ್ ಲೈಫ್ ನೀಡಿದ ರಿಪೋರ್ಟ್ ಪ್ರಕಾರ ಈ ಸೀನ್ ನ್ನು ಚಲನಚಿತ್ರದ ಫೈನಲ್ ಪ್ರಿಂಟ್ ನಿಂದ ತೆಗೆದು ಹಾಕಲಾಗಿದೆ. ಮತ್ತು ಇಂದಿನಿಂದ ಅಭಿಮಾನಿಗಳಿಗೆ ಈ ಸೀನ್ ಚಿತ್ರದಲ್ಲಿ ಕಾಣುವದಿಲ್ಲ.

ಕನ್ನಡ ಬೆಡಗಿ ರಶ್ಮಿಕಾ ಅವರದು ಅಲ್ಲು ಅರ್ಜುನ್ ಜೊತೆಗೆ ಮೊದಲ ಚಿತ್ರವಾಗಿದೆ. ಚಿತ್ರದಲ್ಲಿ ರಶ್ಮಿಕಾ ಡಿ ಗ್ಲ್ಯಾಮ್ ಲುಕ್ ನಲ್ಲಿ ಕಂಡು ಬಂದಿದ್ದಾರೆ.