ಪುಷ್ಪಾ -2 ಚಿತ್ರಕ್ಕಾಗಿ ಅಲ್ಲು ಅರ್ಜುನ್ ಸಂಭಾವನೆ ಎಷ್ಟು? ಬಾಲಿವುಡ್ ಬಿಡಿ ಹಾಲಿವುಡ್ ಗೂ ಹಿಂದಿಕ್ಕಿದ ಅಲ್ಲು!
ಸದ್ಯ ಎಲ್ಲ ಕಡೆಗೆ ಸೌತ್ ಚಿತ್ರಗಳಿಗೆ ತುಂಬಾ ಡಿಮಾಂಡ್ ಹೆಚ್ಚುತ್ತಿದೆ. ಇದಕ್ಕೂ ಮೊದಲು ಹಿಂದಿಯಲ್ಲಿ ಡಬ್ ಮಾಡಿದ ಸೌತ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ತುಂಬಾ ಹಣ ಗಳಿಸಿವೆ. ಕಳೆದ ಅನೇಕ ವರ್ಷಗಳಿಂದ ಹಿಂದಿಯಲ್ಲಿ ಡಬ್ ಆದ ಚಿತ್ರಗಳು ಹಿಂದಿ ವಾಹಿನಿಗಳಲ್ಲಿ ಪ್ರಸಾರ ಮಾಡಿಯೇ ಮಾಡುತ್ತಾರೆ. ಈ ರೀತಿಯ ಚಿತ್ರಗಳನ್ನು ನೋಡುವ ಅಭಿಮಾನಿಗಳ ಬಳಗ ತುಂಬಾ ಹೆಚ್ಚಾಗಿದೆ. ಆದ್ದರಿಂದಲೇ ಕೆಜಿಎಫ್, ಆರ್ ಆರ್ ಆರ್ ಮತ್ತು ಪುಷ್ಪ ದಂತಹ ಚಿತ್ರಗಳು ಭಾರತದ ಜೊತೆಗೆ ಹೊರಗೂ ಧೂಳೆಬ್ಬಿಸಿವೆ. ಅದರಲ್ಲೂ ಪುಷ್ಪ ಚಿತ್ರವು ಹಾಡು ಮತ್ತು ಡೈಲಾಗ್ಸ್ ಗಳಿಂದ ಅಭಿಮಾನಿಗಳನ್ನು ತನ್ನ ಕಡೆಗೆ ಸೆಳೆಯುವಲ್ಲಿ ತುಂಬಾ ಯಶಸ್ವಿಯಾಯಿತು. ಈಗ ಇದೇ ಚಿತ್ರದ ಎರಡನೇ ಭಾಗ ಶೀಘ್ರದಲ್ಲೇ ಬರಲಿದೆ. ಹೀಗಾಗಿ ಈ ಚಿತ್ರಕ್ಕೆ ಅಲ್ಲು ಅರ್ಜುನ್ ಅವರು ತೆಗೆದುಕೊಳ್ಳುವ ಸಂಭಾವನೆ ಎಷ್ಟು ಎಂಬ ಪ್ರಶ್ನೆ ಎಲ್ಲ ಕಡೆಗೆ ಮೂಡಿದೆ.
ಸಂಭಾವನೆಯ ವಿಷಯದಲ್ಲಿ ಅಲ್ಲು ಅರ್ಜುನ್ ಅವರು ಬರೀ ಬಾಲಿವುಡ್ ಅಷ್ಟೇ ಅಲ್ಲ ಹಾಲಿವುಡ್ ನಟರಿಗೂ ಸಹ ಹಿಂದಿಕ್ಕಿದ್ದಾರೆ. ಪುಷ್ಪ ಚಿತ್ರದ ಎರಡನೆಯ ಭಾಗ 2023 ರಲ್ಲಿ ತೆರೆಕಾಣಲಿದೆ. ಈ ಚಿತ್ರದ ಮೊದಲನೆಯ ಭಾಗದ ನಿರ್ಮಾಣಕ್ಕಾಗಿ 200 ಕೋಟಿ ರೂಪಾಯಿಗಳು ಖರ್ಚಾದರೆ, ಈಗ ಎರಡನೇ ಭಾಗದ ಬಜೆಟ್ ಗಾಗಿ 400 ಕೋಟಿ ರೂಪಾಯಿಗಳಷ್ಟು ಬಜೆಟ್ ಇದೆ ಎಂದು ತಿಳಿದು ಬಂದಿದೆ. ಜೊತೆಗೆ ಈ ದುಬಾರಿ ಬಜೆಟ್ ನ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅವರು ಬರೋಬ್ಬರಿ ನೂರು ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯಲಿದ್ದಾರೆ ಎಂದು ಸುದ್ದಿಮೂಲಗಳಿಂದ ತಿಳಿದುಬಂದಿದೆ.
View this post on Instagram