ಪೆಟ್ರೋಲ್ ಬೆಲೆ ಕಾರಣವೋ ಅಥವಾ ಗಾಡಿ ಕೆಟ್ಟಿತ್ತೋ: ಹೆಗಲ ಮೇಲೆ ಸ್ಕೂಟಿ ಹೊತ್ತುಕೊಂಡು ಹೊರಟ ವ್ಯಕ್ತಿಯ Video ವೈರಲ್!
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಕಂಡು ಬಂದಿರುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಈ ವೀಡಿಯೋ ಎಂದಿನದ್ದು ಎನ್ನುವುದು ತಿಳಿದಿಲ್ಲವಾದರೂ ಕೂಡಾ ಈಗ ಈ ವೀಡಿಯೋ ಸಾಕಷ್ಟು ಸದ್ದು ಮಾಡಿದೆ. ಇದಕ್ಕೆ ಪ್ರಮುಖವಾದ ಕಾರಣ ಇತ್ತೀಚಿಗೆ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳು. ಹೌದು ಇತ್ತೀಚಿಗೆ ದೇಶದಲ್ಲೆಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ದಿನದಿಂದ ದಿನಕ್ಕೇ ಏರುತ್ತಲೇ ಇದ್ದು, ಇದು ಸಾಮಾನ್ಯ ಜನರಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇದರ ಕುರಿತಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ದೊಡ್ಡ ಚರ್ಚೆ ನಡೆಯುತ್ತಿದೆ. ಕೆಲವರು ಭಿನ್ನ, ವಿಭಿನ್ನ ಮಾದರಿಯಲ್ಲಿ ಕೂಡಾ ತಮ್ಮ ಅ ಸಹನೆಯನ್ನು ಹೊರ ಹಾಕುವ ಮೂಲಕ ಸುದ್ದಿಯಾಗಿದ್ದಾರೆ.
ಕೆಲವರು ಮದುವೆ ಗಳಲ್ಲಿ ವಧು ವರನಿಗೆ ಮದುವೆಯ ಉಡಗೊರೆಯಾಗಿ ಕೂಡಾ ಪೆಟ್ರೋಲ್ ನೀಡಲು ಮುಂದಾದರೆ, ಇನ್ನೊಂದು ಕಡೆ ಕಾರನ್ನೇ ಗಿಡ ಬೆಳೆಸಲು ಬಳಸಿಕೊಂಡು ಸುದ್ದಿಯಾಗಿದ್ದಾರೆ. ಒಟ್ಟಾರೆ ಮದ್ಯಮ ವರ್ಗದ ಜನರಿಗೆ ಪೆಟ್ರೋಲ್ ಬಂಗಾರದ ಹಾಗೆ ಆಗುತ್ತಿದೆ. ಏಕೆಂದರೆ ಪೆಟ್ರೋಲ್ ಬೆಲೆ ಯ ಹಾಗೆಯೇ ಅವರ ಸಂಬಳ ಕೂಡಾ ಹೆಚ್ಚಾಗುತ್ತಿಲ್ಲ ಎನ್ನುವುದು ವಾಸ್ತವ. ತಿಂಗಳ ಸಂಬಳವನ್ನು ಲೆಕ್ಕ ಹಾಕಿ ಬಳಸಿ, ಅದರಲ್ಲೇ ಸ್ವಲ್ಪ ಉಳಿಸುವ, ಇಎಂಐ ಗಳನ್ನು ಕಟ್ಟುವ ಮದ್ಯಮ ವರ್ಗದ ಕುಟುಂಬಗಳ ಮೇಲೆ ಪೆಟ್ರೋಲ್, ಡೀಸಲ್, ಅಡುಗೆ ಅನಿಲದ ಬೆಲೆಗಳು ಏರುತ್ತಿರುವುದು ಆ ತಂ ಕವನ್ನು ಉಂಟು ಮಾಡಿರುವುದು ಮಾತ್ರವೇ ಅಲ್ಲದೇ ಅ ಸಹನೆ ಕೂಡಾ ವ್ಯಕ್ತಪಡಿಸಲು ಆಗದ ಪರಿಸ್ಥಿತಿ.
ಇಂತಹ ಪರಿಸ್ಥಿತಿಯಲ್ಲಿ ಕುಲುವಿನಲ್ಲಿ ವ್ಯಕ್ತಿ ಯೊಬ್ಬರ ವೀಡಿಯೋ ಈ ವಿಷಯದೊಂದಿಗೆ ತಳಕು ಹಾಕಿಕೊಂಡ ಕಾರಣ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಕುಲುವಿನ ಪ್ರಧಾನ ಕಛೇರಿಯಿಂದ ಸುಮಾರು ಎರಡು ಕಿಮೀ ದೂರದಲ್ಲಿ ಇಂತಹುದೊಂದು ವಿಚಿತ್ರವಾದ ಘಟನೆಯು ನಡೆದಿದೆ. ಇಲ್ಲೊಬ್ಬ ವ್ಯಕ್ತಿಯು ಸ್ಕೂಟಿಯೊಂದನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ನಡೆದು ಹೋಗುತ್ತಿದ್ದಾನೆ. ಇದೇ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಾ ಸಾಗಿದ್ದು, ನೋಡುಗರ ಗಮನವನ್ನು ಇದು ಸೆಳೆಯುತ್ತಿದೆ.
ಇನ್ನು ಈ ವೀಡಿಯೋ ಯಾವಾಗಿನದ್ದು, ಸ್ಕೂಟಿಯನ್ನು ಹೊತ್ತು ಕೊಂಡು ಹೋಗುತ್ತಿದ್ದ ವ್ಯಕ್ತಿ ಯಾರು? ಎಂದು ತಿಳಿದು ಬಂದಿಲ್ಲ. ಆದರೆ ವೀಡಿಯೋ ವೈರಲ್ ಆಗಲು ಮಾತ್ರ ಹಲವು ಕಾರಣಗಳಿದ್ದು ಅವುಗಳಲ್ಲಿ ಕೆಲವು ಈ ಮೇಲೆ ಇರುವುದನ್ನು ನಾವು ಸ್ಮರಿಸಬಹುದು. ಆ ವ್ಯಕ್ತಿಯು ಪೆಟ್ರೋಲ್ ಬೆಲೆ ಲೀಟರ್ ಗೆ ನೂರು ಎನ್ನುವ ಅ ಸಮಾಧಾನದಿಂದ ಸ್ಕೂಟಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿರುವನೋ ಅಥವಾ ದಾರಿಯಲ್ಲಿ ಹೋಗುವಾಗ ಅವರ ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾದ ಕಾರಣ ಅದನ್ನು ಹೊತ್ತು ಕೊಂಡು ನಡೆದುಕೊಂಡು ಹೋಗುತ್ತಿದ್ದಾನೆ ಎನ್ನುವುದು ಎಲ್ಲರ ಜಿಜ್ಞಾಸೆಗೆ ಕಾರಣವಾಗಿದೆ.
ಇನ್ನು ಇದರ ನಡುವೆಯೇ ಈಗ ಅನೇಕರು ಆ ವ್ಯಕ್ತಿ ಯಾರು? ಎನ್ನುವುದನ್ನು ತಿಳಿದುಕೊಳ್ಳುವ ವಿಷಯವಾಗಿ ತಮ್ಮ ಗಮನವನ್ನು ಹರಿಸಿದ್ದಾರೆ. ಆ ವ್ಯಕ್ತಿ ಯಾರು ಎನ್ನುವ ಮಾಹಿತಿಯನ್ನು ಸಂಗ್ರಹಿಸಲು ಜನರು ಮುಂದಾಗಿದ್ದಾರೆ. ಈಗ ಎಲ್ಲರ ಪ್ರಯತ್ನದ ಫಲವಾಗಿ ಈ ವ್ಯಕ್ತಿ ಯಾರು? ಈ ಘಟನೆಯ ಹಿನ್ನೆಲೆಯೇನು ? ಎನ್ನುವ ಜನರ ಮುಂದೆ ಬರಲಿದೆಯಾ? ಎನ್ನುವುದನ್ನು ಕಾದು ನೋಡಬೇಕಾಗಿದೆ. ವಾಸ್ತವ ಸಂಗತಿ ಏನು ಎಂಬುದಕ್ಕೆ ಇನ್ನೂ ಕಾಯಲೇಬೇಕಾದ ಅನಿವಾರ್ಯತೆ ಕೂಡಾ ಇದೆ. ಇದು ಕುಲುವಿನಲ್ಲಿ ಮಾತ್ರವಲ್ಲದೇ ದೇಶದ ಇತರೆ ಭಾಗಗಳಲ್ಲಿ ಕೂಡಾ ಜನರ ಕುತೂಹಲಕ್ಕೆ ಕಾರಣವಾಗಿದೆ.