ಪೇಷನ್ಸ್, ಪರ್ಫೆಕ್ಷನ್ ಮತ್ತು ಟೀಮ್ ವರ್ಕ್ ನಿಂದ ಕ್ಷಣಾರ್ಧದಲ್ಲಿ ಕಾರ್ಯಕ್ರಮ ‘ದಿ ಎಂಡ್’! ನೋಡಿ ಸಿಂಹಿಣಿಗಳ ಬೇಟೆಯ ಸೂಪರ್ ವಿಡಿಯೋ…
ಕಾಡು ಪ್ರಾಣಿಗಳ ಬೇಟೆಯ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಈ ಕಾಡು ಪ್ರಾಣಿಗಳು ಬದುಕುವ ಸಲುವಾಗಿ ಇನ್ನೊಂದು ಪ್ರಾಣಿಗಳ ಮೇಲೆ ಅವಲಂಬಿಸಿರುತ್ತವೆ. ಹಾಗಾಗಿ ಅವುಗಳಿಗೆ ಬೇಟೆಯಾಡಿ ತಿನ್ನದೆ ಬೇರೆ ದಾರಿಯೇ ಇಲ್ಲ.
ಜಂಗಲ್ ಸಫಾರಿ ಮಾಡುವ ಕೆಲವು ಜನರು ಅನೇಕ ಅದ್ಭುತ ವಿಡಿಯೋಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾರೆ. ತುಂಬಾ ಒಳ್ಳೆಯ ವಿಡಿಯೋಗಳು ನೇಟಿಜನ್ಸ್ ಗಳಿಗೆ ಇಷ್ಟವಾದಾಗ ಒಬ್ಬರಿಂದೊಬ್ಬರಿಗೆ ಶೇರ್ ಆಗುವುದರ ಜೊತೆಗೆ ವೈರಲ್ ಆಗುತ್ತವೆ.
ಕಾಡಿನಲ್ಲಿ ಜೀವಂತವಾಗಿ ಇರಬೇಕಾದರೆ ದಿನನಿತ್ಯ ಮೃತ್ಯುವಿನ ಜೊತೆಗೆ ಹೋರಾಟ ಮಾಡಲೇಬೇಕಾಗುತ್ತದೆ. ಇದು ಕಾಡಿನ ನಿಯಮವು ಹೌದು. ಈ ವಿಡಿಯೋದಲ್ಲಿ ನೀವು ಇಂಥದ್ದೇ ಒಂದು ದೃಶ್ಯವನ್ನು ನೋಡಬಹುದು. ಪ್ರತಿಯೊಂದು ಪ್ರಾಣಿಗೆ ಬದುಕಲು ಆಹಾರದ ಅವಶ್ಯಕತೆ ಇದೆ. ಇದೇ ಆಹಾರವನ್ನು ಪಡೆಯಲು ಎರಡು ಹೆಣ್ಣು ಸಿಂಹಗಳು ಒಂದು ಕಾಡುಹಂದಿಯ ಬೇಟೆಗಾಗಿ ಮಾಡಿದ ಪ್ಲಾನ್ ತುಂಬಾ ಅದ್ಭುತವಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ಬೇಟೆಯ ಚರ್ಚೆಯಿದೆ.
ಈ ವಿಡಿಯೋವನ್ನು ದಕ್ಷಿಣ ಆಫ್ರಿಕಾದ ಕ್ರುಗರ್ ಪಾರ್ಕ್ ನಲ್ಲಿ ಶೇನನ್ ಫಿನೆಗನ್ ಹೆಸರಿನ ವ್ಯಕ್ತಿ ಶೂಟ್ ಮಾಡಿದ್ದಾನೆ.
ಅರಣ್ಯದಲ್ಲಿರುವ ಕಾಲುದಾರಿಯ ಬದಿಗೆ ಒಂದು ಕಾಡುಹಂದಿ ಮೇಯುತ್ತಿರುತ್ತದೆ. ಅದೇ ಸಮಯಕ್ಕೆ ರಸ್ತೆಬದಿಗೆ ಇರುವ ಟೊಂಕಿನ ಎತ್ತರದ ಹುಲ್ಲಿನಲ್ಲಿ ಎರಡು ಸಿಂಹಗಳು ಅವಿತು ಕುಳಿತಿವೆ. ಕಾಡುಹಂದಿ ತಮ್ಮ ಕಡೆ ಬರುವಷ್ಟು ಹೊತ್ತು ಸಿಂಹಗಳು ಸ್ವಲ್ಪವೂ ಅಲುಗಾಡದೆ ಆ ಹುಲ್ಲಿನಲ್ಲಿ ಅವಿತು ಕುಳಿತಿವೆ ಇದು ವಿಶೇಷ. ಎಲ್ಲಿಯವರೆಗೆ ಕಾಡುಹಂದಿ ತಮ್ಮ ಹತೋಟಿಯಲ್ಲಿ ಬರುವುದಿಲ್ಲ ಅಲ್ಲಿಯವರೆಗೆ ಈ ಸಿಂಹಗಳು ಶಾಂತವಾಗಿ ಕುಳಿತಿರುವುದು ಕಂಡುಬರುತ್ತದೆ. ಸ್ವಲ್ಪವೇ ಸಮಯದಲ್ಲಿ ಕಾಡುಹಂದಿಗೆ ತನ್ನ ಹಿಂದೆ ವೈರಿ ಇದ್ದಾನೆ ಮತ್ತು ತಾನು ಸಂಕಟದಲ್ಲಿದ್ದೇನೆ ಎಂದು ಭಾಸವಾಗುತ್ತಲೇ ಅದು ದಿಕ್ಕೆಟ್ಟು ಓಡಲು ಶುರು ಮಾಡುತ್ತದೆ. ಒಂದು ಸಿಂಹ ಹಿಂದಿನಿಂದ ಅಟ್ಟಿಸಿಕೊಂಡು ಬರುವಾಗ ಕಾಡುಹಂದಿ ಜೀವ ಉಳಿಸಿಕೊಳ್ಳಲು ಮುಂದೆ ಓಡುತ್ತದೆ. ಆದರೆ ಅದರ ಮುಂದೆ ಅವಿತುಕೊಂಡ ಬೇರೊಂದು ಸಿಂಹ ಕ್ಷಣಾರ್ಧದಲ್ಲಿ ಅದರ ಮೇಲೆ ಅಟ್ಯಾಕ್ ಮಾಡಿ ಬೇಟೆಯ ಆಟವನ್ನು ದಿ ಎಂಡ್ ಮಾಡುತ್ತದೆ.
ನೋಡಿ ಈ ವಿಡಿಯೋ…
ಈ ವಿಡಿಯೋವನ್ನು ಇಲ್ಲಿಯವರೆಗೆ 95 ಲಕ್ಷ ಜನ ವೀಕ್ಷಿಸಿದ್ದಾರೆ.